ಬೆಂಗಳೂರು: ರಾಜ್ಯದಲ್ಲಿ ಎಲ್ಕೆಜಿ ಹಾಗೂ ಯುಕೆಜಿ ನ. 8 ರಿಂದ ಆರಂಭಕ್ಕೆ ಸರಕಾರ ಗ್ರೀನ್ಸಿಗ್ನಲ್ ನೀಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯಂತೆ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರ್ಧ ದಿನ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
LKG, UKG ಭೌತಿಕ ತರಗತಿ ಆರಂಭಕ್ಕೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗೈಡ್ಲೈನ್ಸ್ ರಿಲೀಸ್ ಆಗಿದೆ. LKG ಹಾಗೂ UKG ಕೇಂದ್ರವನ್ನು ಸ್ವಚ್ಛಗೊಳಿಸಬೇಕು. ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ ಇರಬೇಕು. ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಆಗಿರಬೇಕು. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ LKG, UKG ಭೌತಿಕ ತರಗತಿಗಳು ಶುರು ಆಗಲಿವೆ.
ಬೆಳಗ್ಗೆ 9.3೦ ರಿಂದ ಮಧ್ಯಾಹ್ನ 3.3೦ ರವರೆಗೆ ತರಗತಿ ನಡೆಸಬೇಕು ಎಂದು ಹೇಳಲಾಗಿದೆ. ಕೋವಿಡ್ ಲಕ್ಷಣ ಇರೊ ಮಕ್ಕಳಿಗೆ Lkg ಹಾಗೂ Ukg ಪ್ರವೇಶ ಇಲ್ಲ ಎಂದೂ ತಿಳಿಸಲಾಗಿದೆ. ಶಾಲೆಗೆ ಹಾಜರಾಗುವ ಎಲ್ಲಾ ಶಿಕ್ಷಕರು, ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ವಹಿಸುವುದು.
ಶಿಕ್ಷಕರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಮಕ್ಕಳಿಗೆ ಮನೆಯಿಂದಲೇ ಉಪಹಾರ, ಕುಡಿಯುವ ಶುದ್ಧನೀರನ್ನು ಕಳುಹಿಸುವಂತೆ ಎಲ್ಲಾ ಪೋಷಕರಿಗೆ ಸೂಚಿಸುವುದು. ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರು ವ್ಯವಸ್ಥೆ ಮಾಡುವುದು.
ಇದನ್ನೂ ಓದಿ: Viral Post: ಡಿಲವರಿ ಬಾಯ್ಗಳಿಗೆ ಸ್ವೀಟ್ ಗಿಫ್ಟ್ ಎಂದಾತನಿಗೆ ಶ್ಲಾಘನೆಯ ಮಹಾಪೂರ
ಇದನ್ನೂ ಓದಿ: ಆಯೋಧ್ಯೆಯಲ್ಲಿ ಗಿನ್ನೆಸ್ ದಾಖಲೆ ಬರೆದ ದೀಪೋತ್ಸವ
green signal for LKG, UKG start

























Discussion about this post