ಬೆಂಗಳೂರು: ಪುನೀತ್ ರಾಜ್ಕುಮಾರ್ ನಿಧನದ ಬಳಿಕ ರಾಜ್ಯದ ಜಿಮ್ಗಳಿಗೆ ಮಾರ್ಗಸೂಚಿಯನ್ನು ನಿಗದಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದುಕೊಂಡು ಬಳಿಕ ವ್ಯಾಯಾಮ ಶಾಲೆಗಳಿಗೆ (ಜಿಮ್) ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಜಿಮ್ಗಳಿಗೆ ಮಾರ್ಗಸೂಚಿಯನ್ನ ನೀಡಲಾಗುತ್ತದೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಒಂದೆರಡು ಘಟನೆಗಳಿಂದ ಆತಂಕಕ್ಕೊಳಗಾಗುವುದು ಬೇಡ. ಜಿಮ್ ಮಾಡುವುದು ಸರಿ, ತಪ್ಪು ಎಂಬ ಆತಂಕಗಳು ಬೇಡ. ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದು ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು. ಸಂಪೂರ್ಣ ಮಾಹಿತಿಯೊಂದಿಗೆ ಗೈಡ್ಲೈನ್ಸ್ ಸಿದ್ಧಪಡಿಸ್ತೇವೆ ಎಂದು ತಿಳಿಸಿದ್ದಾರೆ.
ಪರಿಣಿತ ತರಬೇತಿದಾರರು, ಸಾಮಗ್ರಿಗಳ ಬಗ್ಗೆ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು. ದೇಶ ವಿದೇಶದ ಖ್ಯಾತ ವೈದ್ಯರ ಬಳಿ ಮಾಹಿತಿ ಪಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: e Paper – November 1, 2021

























Discussion about this post