• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

ಕೂದಲಿನ ಆರೈಕೆ ಈ ರೀತಿ ಮಾಡಿದ್ದಲ್ಲಿ ಖಂಡಿತವಾಗಿಯೂ ದಟ್ಟವಾದ ಕೂದಲು ನಿಮ್ಮದಾಗುತ್ತದೆ

News Desk by News Desk
Jan 27, 2025, 03:47 pm IST
in ಬ್ಯೂಟಿ ಟಿಪ್ಸ್
Woman Before And After Hair Loss Treatment

Woman Before And After Hair Loss Treatment

Share on FacebookShare on TwitterTelegram

Hair care tips: ಕೂದಲು ಉದುರುವುದು ಅಂದ್ರೆ, ಈ ಕಾಲದ ಯುವಪೀಳಿಗೆಯವರ ನಾರ್ಮಲ್‌ ಸಮಸ್ಯೆ. ಎಷ್ಟೋ ಮಂದಿ ಕೂದಲು ಉದುರಬಾರದು, ಉದ್ದ ಬರಬೇಕು ಎಂದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ಎಣ್ಣೆ, ಶ್ಯಂಪೂ, ಔಷಧಿ ಎಲ್ಲವನ್ನೂ ತಂದು ಬಳಸುತ್ತಿದ್ದಾರೆ. ಮತ್ತೆ ಕೆಲವರು ಪೌಡರ್, ಗಮ್ಮಿಸ್, ಗುಳಿಗೆ ಎಲ್ಲವನ್ನು ಹೊಟ್ಟೆಗೆ ತೆಗೆದುಕೊಂಡು ದೇಹಕ್ಕೆ ಪೌಷಕಾಂಶ ನೀಡುವ ಮೂಲಕ, ಕೂದಲು ಬೆಳೆಸಲು ಕಷ್ಟಪಡುತ್ತಿದ್ದಾರೆ.

ಆದರೆ ಇವೆಲ್ಲವೂ ಪರಿಪೂರ್ಣವಾಗಿ ಪರಿಣಾಮಕಾರಿಯಾಗುವುದಿಲ್ಲ. ಏಕೆಂದರೆ, ನೀವು ಒಮ್ಮೆ ಇಂಥ ಪ್ರಾಡಕ್ಟ್‌ಗಳನ್ನು ಬಳಸಿದರೆ, ಕಂಟಿನ್ಯೂ ಆಗಿ ಆ ಪ್ರಾಡಕ್ಟ್‌ಗಳನ್ನು ಬಳಸುತ್ತಲೇ ಇರಬೇಕು. ಆ ಪ್ರಾಡಕ್ಟ್ ಬಳಸುವುದನ್ನು ಬಿಟ್ಟರೆ, ನಿಮ್ಮ ಕೂದಲು ಉದುರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂಥ ಪ್ರಾಡಕ್ಟ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಬೇಕು.

ಆದರೆ ತಲೆಗೂದಲಿಗೆ ಮನೆ ಮದ್ದು ಮಾಡಿದಷ್ಟು ಉತ್ತಮ. ನಟ ನಟಿಯರು ಹಲವು ಶ್ಯಾಂಪೂ, ಹೇರ್ ಆಯಿಲ್ ಅಡ್ವಟೈಸ್‌ಮೆಂಟ್ ಕೊಡುವಾಗ, ನಾನು ಇದೇ ಎಣ್ಣೆ, ಶ್ಯಾಂಪೂ ಬಳಸಿ ಇಷ್ಟು ಉದ್ದ ಕೂದಲು ಪಡೆದಿದ್ದೇನೆ. ನಿಮಗೂ ನನ್ನಷ್ಟೇ ಉದ್ದ, ದಪ್ಪ ಕೂದಲು ಬೇಕಿದ್ದಲ್ಲಿ, ನೀವೂ ಇದೇ ಶ್ಯಾಂಪೂ, ಎಣ್ಣೆ ಬಳಸಿ ಎಂದು ಹೇಳುತ್ತಾರೆ. ಆದರೆ ಅವರು ಮಾತ್ರ ನಿಜ ಜೀವನದಲ್ಲಿ ಮನೆಯಲ್ಲೇ ಮಾಡಿದ ಎಣ್ಣೆ, ಆಯುರ್ವೇದಿಕ್ ಶ್ಯಾಂಪೂಗಳನ್ನು ಬಳಸುತ್ತಾರೆ.

ಹಾಗಾಗಿ ಟಿವಿಯಲ್ಲಿ ಬರುವ ಪ್ರಾಡಕ್ಟ್‌ಗಳನ್ನು ಬಳಸುವ ಮುನ್ನ ನಾವು ಮನೆಯಲ್ಲೇ ತಯಾರಿಸಿದ ಎಣ್ಣೆ, ಶ್ಯಂಪೂ ಬಳಸಬೇಕು. ಹಾಗಾಗಿ ಇಂದು ನಾವು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ನೀವು ತಲೆಸ್ನಾನ ಮಾಡುವ ಮುನ್ನ ತಲೆಗೂದಲಿಗೆ ಎಣ್ಣೆ ಮಸಾಜ್ ಅಂತೂ ಮಾಡಲೇಬೇಕಾಗುತ್ತದೆ. ಆವಾಗ ನಿಮಗೆ ಬೇಕಾದಷ್ಟು ತೆಂಗಿನ ಎಣ್ಣೆ ಮತ್ತು ಅದಕ್ಕೆ ಒಂದೆರಡು ವಿಟಾಮಿನ್ ಈ ಎಣ್ಣೆ ಮಿಕ್ಸ್ ಮಾಡಿ, ಕೊಂಚ ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಬೇಕು. ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬಾರದು. ಹಾಗೇ ಮಾಡಿದ್ದಲ್ಲಿ, ಎಣ್ಣೆಯಲ್ಲಿರುವ ಪೋಷಕಾಂಶ ಹೊರಟು ಹೋಗುತ್ತದೆ. ಹಾಗಾಗಿ ಎಣ್ಣೆಯನ್ನು ಕೊಂಚ ಬಿಸಿ ಮಾಡಿ, ಆರಿಸಿ, ಕೊಂಚ ಬೆಚ್ಚಗಿರುವಾಗ, ತಲೆಗೂದಲಿಗೆ ಮಸಾಜ್ ಮಾಡಬೇಕು. ನಿಮಗೆ ಅಲರ್ಜಿಯಾಗುವುದಿಲ್ಲ. ನೆಗಡಿಯಾಗುವುದಿಲ್ಲ ಎಂದಲ್ಲಿ ನೀವು ಇದಕ್ಕೆ ಕೊಂಚ ಹರಳೆಣ್ಣೆ ಕೂಡ ಬಿಸಿ ಮಾಡಿ ಹಚಚ್ಚಬಹುದು.

ವಾರದಲ್ಲಿ ಎರಡು ಬಾರಿ ನೀವು ಈ ರೀತಿ ಎಣ್ಣೆ ಬಳಸಿ, ತಲೆ ಸ್ನಾನ ಮಾಡಿದ್ರೆ, ನಿಮ್ಮ ತಲೆಗೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ತಲೆಸ್ನಾನ ಮಾಡುವಾಗ, ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸುವುದು ಉತ್ತಮ. ಅಥವಾ, ನೀವೇ ಮನೆಯಲ್ಲಿ ಮಾಡಿದ ಶ್ಯಾಂಪೂ ಬಳಸಿ. ಅಥವಾ ಸೀಗೇಕಾಯಿ ಪುಡಿ ಬಳಸಿ, ತಲೆಸ್ನಾನ ಮಾಡಿ.

ಇನ್ನು ಎರಡನೇಯದಾಗಿ ನೀವು ಕಾಯಿಹಾಲನ್ನು ಮನೆಯಲ್ಲೇ ತಯಾರಿಸಿ, ಕಂಡೀಷನರ್ ರೀತಿ ಬಳಸಬಹುದು. ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದಲ್ಲದೇ, ಕೂಲು ಸಾಫ್ಟ್ ಆಗಿ ಇರುತ್ತದೆ. ಅದಕ್ಕಾಗಿ ನೀವು ಕಾಯಿ ತುರಿದು, ರುಬ್ಬಿ, ಅದರ ಹಾಲನ್ನು ತೆಗೆಯಬೇಕು. ಈಗ ಕಾಯಿಹಾಲು ರೆಡಿ.

ಮೊದಲು ತಲೆಗೂದಲಿಗೆ ಎಣ್ಣೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಿ. ಬಳಿಕ, ಕಾಯಿ ಹಾಲನ್ನು ಕೂದಲ ಬುಡಕ್ಕೆ ಹಚ್ಚಿ 30 ನಿಮಿಷ ಬಿಟ್ಟು, ಮತ್ತೆ ತಲೆ ಸ್ನಾನ ಮಾಡಿ. ಹೀಗೆ ಮಾಡಿದಾಗ, ನಿಮ್ಮ ಕೂದಲು ಗಟ್ಟಿಮುಟ್ಟಾ, ಸಾಫ್ಟ್ ಆಗಿ, ಆರೋಗ್ಯಕರವಾಗಿ ಇರುತ್ತದೆ.

ಬರೀ ತಲೆಗೂದಲಿಗೆ ಎಣ್ಣೆ, ಶ್ಯಾಂಪೂ ಬಳಸುವುದರಿಂದ ನಮ್ಮ ಕೂದಲು ಚೆಂದಗಾಣಿಸುವುದಿಲ್ಲ. ಅಥವಾ ಆರೋಗ್ಯಕರವಾಗುವುದಿಲ್ಲ. ಅದರೊಂದಿಗೆ ನಾವು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ದೇಹವನ್ನು ತಂಪಾಗಿ ಇರಿಸಬೇಕು. ಹಾಗಾದ್ರೆ ಕೂದಲು ಚೆನ್ನಾಗಿ ಬೆಳೆಯಬೇಕು. ನಾವು ನೋಡಲು ಅಂದವಾಗಿ ಕಾಣಬೇಕು ಅಂದ್ರೆ, ಏನು ಸೇವಿಸಬೇಕು ಅನ್ನೋ ಬಗ್ಗೆ ಈಗ ತಿಳಿಯೋಣ.

ನೆನೆಸಿದ ಹೆಸರುಕಾಳು. ರಾತ್ರಿ ನೀರಿನಲ್ಲಿ ಹೆಸರು ಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಸರು ಕಾಳಿನ ಸೇವನೆ ಮಾಡಬೇಕು. ನಿಮಗೆ ಬರೀ ಹೆಸರು ಕಾಳು ತಿನ್ನಲು ಇಷ್ಟವಾಗುತ್ತಿಲ್ಲವೆಂದಲ್ಲಿ, ಒಂದು ಕ್ಯಾರೆಟ್, ತೆಂಗಿನ ತುರಿ, ಬೇಯಿಸಿದ ಸ್ವೀಟ್ ಕಾರ್ನ್, ಉಪ್ಪು ಹಾಕಿ ಮಿಕ್ಸ್ ಮಾಡಿ, ಸಲಾಡ್ ರೀತಿ ಮಾಡಿ ಸೇವಿಸಿ. ಹೀಗೆ ಪ್ರತಿದಿನ ಸೇವಿಸಿದರೆ, ನಿಮ್ಮ ತಲೆಗೂದಲು ಅಂದವಾಗಿ ಬೆಳೆಯುವುದರ ಜೊತೆಗೆ, ನಿಮ್ಮ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಸ್ಕಿನ್‌ ಮೇಲೆ ಗ್ಲೋ ಬರುತ್ತದೆ.

ಇನ್ನು ನೆನೆಸಿಟ್ಟ ಡ್ರೈಫ್ರೂಟ್ಸ್ ಸೇವನೆ ಮಾಡಬೇಕು. ಬಾದಾಮಿ, ವಾಲ್ನಟ್, ಅಂಜೂರ, ದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಸೇವಿಸಿ. ಬಾದಾಮಿ ಸೇವಿಸುವಾಗ, ಸಿಪ್ಪೆ ತೆಗೆದು ಸೇವಿಸಿ. ಇದರ ಜೊತೆಗೆ ನೀವು ಪಿಸ್ತಾ, ಖರ್ಜೂರ, ಗೋಡಂಬಿ ಸೇರಿ ಬೇರೆ ಬೇರೆ ಡ್ರೈ ಫ್ರೂಟ್ಸ್, ನಟ್ಸ್ ಸೇವನೆ ಮಾಡಬಹುದು. ಇದರಿಂದಲೂ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ.

ಅಥವಾ ನೀವು ಪ್ರತಿದಿನ ಡ್ರೈಫ್ರೂಟ್ಸ್‌ ಲಾಡು ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಲಡ್ಡು ಮತ್ತು ಒಂದು ಗ್ಲಾಸ್ ಬೆಚ್ಚಗಿನ ಹಾಲು ಕುಡಿದರೆ, ನಿಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ. ನಿಮ್ಮ ತ್ವಚೆಯ ಆರೋಗ್ಯ ಮತ್ತು ನಿಮ್ಮ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ. ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ.

ಇದಕ್ಕಾಗಿ ನೀವು ನಿಮಗೆ ಬೇಕಾದಷ್ಟು, ಯಾವ ಡ್ರೈಫ್ರೂಟ್ಸ್, ನಟ್ಸ್ ಬೇಕೋ ಅದನ್ನು ತೆಗೆದುಕೊಳ್ಳಿ, ಅದಕ್ಕೆ ತಕ್ಕ ಹಾಗೆ ಒಣ ಕೊಬ್ಬರಿ ತುರಿ ಸೇರಿಸಿ. ಈ ಎಲ್ಲವನ್ನು ಸಪರೇಟ್ ಆಗಿ ಹುರಿದುಕೊಳ್ಳಿ. ಇನ್ನೂ ಆರೋಗ್ಯಕರವಾದ ಲಡ್ಡು ಬೇಕು ಎಂದಲ್ಲಿ ನೀವು ಇದಕ್ಕೆ ಹುರಿದ ಶೇಂಗಾ ಸೇರಿಸಿಕೊಳ್ಳಿ. ಬೆಲ್ಲದ ಪಾಕ ತಯಾರಿಸಿ, ಹುರಿದ ಸಾಮಗ್ರಿಯನ್ನು ಇದಕ್ಕೆ ಹಾಕಿ, ಮಿಕ್ಸ್ ಮಾಡಿ. ಪೂರ್ತಿಯಾಗಿ ಆರುವ ಮುನ್ನ ಲಾಡು ಕಟ್ಟಿ. ಅಥವಾ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ, ಬರ್ಫಿಯ ಹಾಗೆ ಕತ್ತರಿಸಿ.

ಈ ಡ್ರೈಫ್ರೂಟ್ಸ್ ಲಡ್ಡು ಅಥವಾ ಬರ್ಫಿಯನ್ನು ಪ್ರತಿದಿನ ಒಂದೊಂದರಂತೆ ತಿನ್ನುವುದರಿಂದ ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಉತ್ತಮವಾಗುತ್ತ ಹೋಗುತ್ತದೆ. ಡಯಟ್ ಮಾಡುವವರು ಕೂಡ ಈ ಲಾಡು ಸೇವಿಸಬಹುದು. ಯಾಕಂದ್ರೆ ಈ ಲಾಡು ಸೇವಿಸಿ, ಹಾಲು ಕುಡಿದರೆ, 2ರಿಂದ 3 ತಾಸು ಹೊಟ್ಟೆ ಹಸಿವಾಗುವುದಿಲ್ಲ.

ಇನ್ನು ಫ್ಲ್ಯಾಕ್ಸ್ ಸೀಡ್ಸ್, ಅಂದ್ರೆ ಅಗಸೆಬೀಜದ ಚಟ್ನಿಪುಡಿ ತಯಾರಿಸಿ, ಊಟದೊಂದಿಗೆ ಲಿಮಿಟಿನಲ್ಲಿ ಬಳಸಿ. ಇದು ಕೂದಲ ಆರೋಗ್ಯ ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಗಸೆಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಅದರ ಪೇಸ್ಟ್ ತಯಾರಿಸಿ, ಹೇರ್ ಪ್ಯಾಕ್ ಹಾಕಲಾಗುತ್ತದೆ.

ಕೆಲವು ಹಳ್ಳಿಗಳಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ಕೂದಲ ಬೆಳವಣಿಗೆ ನೀವು ಗಮನಿಸಿರಬಹುದು. ಅಲ್ಲಿನ ಹಲವು ಮಹಿಳೆಯರು ಉದ್ದವಾದ, ದಟ್ಟವಾದ ಕೂದಲನ್ನು ಹೊಂದಿರುತ್ತಾರೆ. ಇದಕ್ಕೆ ಮೂರರಿಂದ ನಾಲ್ಕು ಕಾರಣಗಳಿದೆ. ಅದರಲ್ಲಿ ಮೊದಲನೇಯ ಕಾರಣ, ಅವರು ಚೆನ್ನಾಗಿ ನೀರು ಕುಡಿಯುತ್ತಾರೆ.

ಎರಡನೇಯದಾಗಿ ಫ್ಯಾಷನ್ ಹೆಸರಲ್ಲಿ ಕೂದಲಿಗೆ ಎಣ್ಣೆ ಹಾಕುವುದನ್ನು ಅವರು ತಪ್ಪಿಸಿರುವುದಿಲ್ಲ. ಪ್ರತಿದಿನ ತಲೆಗೆ ತೆಂಗಿನ ಎಣ್ಣೆ ಬಳಸುತ್ತಾರೆ. ಇನ್ನು ಮೂರನೇಯದಾಗಿ ಸೀಗೇಕಾಯಿ, ಅಂಟಳಕಾಯಿ ಪುಡಿ ಬಳಸಿ, ಸ್ವಚ್ಛವಾಗಿ ಕೂದಲು ತೊಳೆಯುತ್ತಾರೆ. ನಾಲ್ಕನೇಯದಾಗಿ ಊಟದೊಂದಿಗೆ ಹೆಚ್ಚು ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳು ತಿನ್ನುತ್ತಾರೆ. ಇನ್ನು ಕೊನೆಯದಾಗಿ ರೊಟ್ಟಿ ತಿನ್ನುವಾಗ, ಅದರೊಂದಿಗೆ ಅಗಸೆಬೀಜದ ಚಟ್ನಿಪುಡಿ ಬಳಸುತ್ತಾರೆ. ಜೊತೆಗೆ ಮೊಸರನ್ನು ಹೆಟ್ಟು ಸೇವಿಸುತ್ತಾರೆ.

ಇವೆಲ್ಲ ಕಾರಣಗಳಿಂದಲೇ ಅವರ ಕೂದಲು ದಟ್ಟವಾಗಿ ಬೆಳೆಯುತ್ತದೆ. ಅಲ್ಲದೇ, ಇಂಥ ಆಹಾರ ಪದ್ಧತಿಯಿಂದ ಮುಖದ ಮೇಲೆ ಮೊಡವೆಯೂ ಬೆಳೆಯುವುದಿಲ್ಲ. ಕಪ್ಪಾಗಿದ್ದರೂ, ಮುಖ ಕ್ಲೀನ್ ಆಗಿ, ಲಕ್ಷಣವಾಗಿರುತ್ತದೆ. ಸಿಟಿಯಲ್ಲಿ ಮೇಕಪ್ ಮಾಡಿಕೊಂಡು ಓಡಾಡುವ ಹೆಣ್ಣು ಮಕ್ಕಳ ಮುಖಕ್ಕಿಂತ, ಈ ರೀತಿ ಆಹಾರ ಪದ್ಧತಿ ಅನುಸರಿಸುವವರ ಮುಖ ನ್ಯಾಚುರಲ್ ಆಗಿ ನೂರು ಪಟ್ಟು ಸುಂದರವಾಗಿ ಕಾಣುತ್ತದೆ.

ಇನ್ನು ಎಳನೀರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಜ್ಯೂಸ್‌, ಪಾನಕ ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ತಂಪು ಮಾಡಿ, ಕೂದಲು ಉದುರಂತೆ ಮಾಡುತ್ತದೆ. ಅದರಲ್ಲೂ ಎಳನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಜೊತೆಗೆ ಹೆಚ್ಚು ನೀರಿನ ಸೇವನೆ ಮಾಡಿದರೆ, ತಲೆಗೂದಲ ಬೆಳವಣಿಗೆ, ತ್ವಚೆಯ ಸೌಂದರ್ಯ ಹೆಚ್ಚುವುದರ ಜೊತೆಗೆ, ಆರೋಗ್ಯವೂ ಅಭಿವೃದ್ಧಿಯಾಗುತ್ತದೆ.

ಮನೆಯಲ್ಲೇ ನ್ಯಾಚುರಲ್ ಆಗಿ ಎಣ್ಣೆ ಮತ್ತು ಶ್ಯಾಂಪೂ ತಯಾರಿಸುವುದು ಹೇಗೆ..?

Herbal oil recipe: ಹರ್ಬಲ್ ಎಣ್ಣೆ ತಯಾರಿಸಲು ನಿಮಗೆ ಒಂದೊಂದು ಕಪ್, ತುಳಸಿ ದಳ, ಕರಿಬೇವು, ಗರಿಕೆ, ಬ್ರಾಹ್ಮಿ ಎಲೆ, ದಾಸವಾಳದ ಎಲೆ, 5ರಿಂದ 6 ದಾಸವಾಳದ ಹೂವು, ಕೊಂಚ ಬೇವಿನ ಎಲೆ, 2 ಸ್ಪೂನ್ ಮೆಂತ್ಯೆ, 2 ರಿಂದ 3 ಕೆಂಪು ಈರುಳ್ಳಿ, 4 ನೆಲ್ಲಿಕಾಯಿ, ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ ಬೇಕು.

ಮೊದಲು ತುಳಸಿ, ಕರಿಬೇವು, ಬ್ರಾಹ್ಮಿಎಲೆ, ಗರಿಕೆ, ದಾಸವಾಳದ ಎಲೆ, ದಾಸವಾಳದ ಹೂವು, ಬೇವಿನ ಎಲೆ, ಮೆಂತ್ಯೆ ಈರುಳ್ಳಿ. ನೆಲ್ಲಿಕಾಯಿ ಇವೆಲ್ಲವನ್ನೂ ಮಿಕ್ಸಿ ಹಾಜ್ರ್‌ಗೆ ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ ಅದಕ್ಕೆ ತೆಂಗಿನ ಎಣ್ಣೆ, ಹರಳೆಣ್ಣೆ ಹಾಕಿ ಕೊಂಚ ಬಿಸಿ ಮಾಡಿಕೊಂಡು, ರೆಡಿ ಮಾಡಿದ ಪೇಸ್ಟ್ ಹಾಕಿ ಮಿಕ್ಸ್ ಮಾಡಬೇಕು.

ನಿಮಗೆ ಎಷ್ಟು ಪ್ರಮಾಣದ ಎಣ್ಣೆ ಬೇಕು ಎಂದು ನೀವೇ ಅಂದಾಜು ಮಾಡಿ ಅಷ್ಟು ಹರ್ಬಲ್ಸ್ ಮತ್ತು ಎಣ್ಣೆ ಬಳಸಿ. ಹೀಗೆ ಪೇಸ್ಟ್ ಹಾಕಿ ಎಣ್ಣೆ ಕುದಿಸುವಾಗ, ಮಂದ ಉರಿಯಲ್ಲಿ ಕುದಿಸಿ. ಮತ್ತು ಹಾಕಿದ ಪೇಸ್ಟ್ ಅಡಿ ಹಿಡಿದು ವಾಸನೆ ಬಾರದಂತೆ ಬಾಡಿಸಬೇಕು. ಚೆನ್ನಾಗಿ ಕುದಿ ಬಂದು, ಎಣ್ಣೆ ಬಣ್ಣ ಚೇಂಜ್ ಆಗಿ, ಹಸಿ ವಾಸನೆ ಆರಿ ಹೋದ ಬಳಿಕ ಎಣ್ಣೆ ರೆಡಿ ಎಂದರ್ಥ.

ಈ ಎಣ್ಣೆ ತಣಿದ ಬಳಿಕ, ಸೋಸಿ ಗಾಜಿನ ಬಾಟಲಿಯಲ್ಲಿ ತುಂಬಿಸಿಡಬೇಕು. ತಲೆ ಸ್ನಾನ ಮಾಡುವ 3ಗಂಟೆ ಮುಂಚೆ ಈ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬಳಿಕ ತಲೆ ಸ್ನಾನ ಮಾಡಬೇಕು.

Shampoo Recipe: ಇನ್ನು ಮನೆಯಲ್ಲೇ ನ್ಯಾಚುರಲ್ ಆಗಿ ಶ್ಯಾಂಪೂ ತಯಾರಿಸೋದು ಹೇಗೆ ಅಂತಾ ಹೇಳಿದ್ರೆ, ಕೊಂಚ ಕೊಂಚ ಅಂಟ್ಲಕಾಯಿ ಅಂದ್ರೆ ರೀಠಾ, ಸೀಗೇಕಾಯಿ, 4ಸ್ಪೂನ್ ಮೆಂತ್ಯೆ, ಒಣಗಿಸಿದ ನೆಲ್ಲಿಕಾಯಿ, 6ರಿಂದ 7 ದಾಸವಾಳದ ಹೂವು, ದಾಸವಾಳದ ಎಲೆ ಇವಿಷ್ಟನ್ನು ಚೆನ್ನಾಗಿ ತೊಳೆದು, ರಾತ್ರಿಯಿಡಿನೆನೆಸಿಡಬೇಕು.

ಮರುದಿನ ಬೆಳಿಗ್ಗೆ ಸ್ವಲ್ಪ ಬೇವಿನ ಎಲೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ತೊಳೆದು, ಹೊಸ ನೀರಿನೊಂದಿಗೆ ಇವೆಲ್ಲವನ್ನೂ ಕುದಿಸಬೇಕು. ಚೆನ್ನಾಗಿ ಕುದಿ ಬಂದ ಬಳಿಕ, ನೀರಲ್ಲಿರುವ ಮಿಶ್ರಣವನ್ನು ಆ ನೀರಿನಲ್ಲಿಯೇ ಚೆನ್ನಾಗಿ ಹಿಂಡಬೇಕು. ಬಳಿಕ ಈ ಮಿಶ್ರಣವನ್ನು ಗಾಳಿಸಿ, ಸಂಶೋಧಿಸಿದರೆ ಶ್ಯಾಂಪೂ ರೆಡಿ.

ಸೀಗೇಕಾಯಿ, ಮೆಂತ್ಯೆ, ದಾಸವಾಳ, ಅಂಟ್ಲಕಾಯಿಯನ್ನು ಪುಡಿ ಮಾಡಿ ಅದನ್ನು ನೀರಿನಲ್ಲಿ ಕುದಿಸಿ, ಸೋಸಿ ಶ್ಯಾಂಪು ಮಾಡುತ್ತಾರೆ. ಅದು ಕೂಡ ಕೂದಲಿಗೆ ಉತ್ತಮವಾಗಿರುತ್ತದೆ. ಈ ಶ್ಯಾಂಪೂವನ್ನು ನೀವು 1 ವಾರಗಳ ಕಾಲ ಬಳಸಬಹುದು. ಆದರೆ ರಾತ್ರಿ ನೆನೆಸಿ, ಬೆಳಿಗ್ಗೆ ಕುದಿಸಿ, ತಣಿಸಿ ಫ್ರೆಶ್ ಆಗಿ ಶ್ಯಾಂಪೂ ಮಾಡಿಕೊಂಡು ಬಳಸುವುದು ತುಂಬಾ ಉತ್ತಮ. ತುಂಬ ದಿನ ಇಟ್ಟ ಶ್ಯಾಂಪೂವಿನ ಗುಣ ಅಷ್ಟು ಚೆನ್ನಾಗಿರುವುದಿಲ್ಲ.

ಕೂದಲು ದಡ್ಡವಾಗಿ ಉದ್ದ ಬರಲು ಇರುವ ಮತ್ತೊಂದು ರೆಮಿಡಿ ಎಂದರೆ, 4 ಸ್ಪೂನ್ ಅಕ್ಕಿಯನ್ನು ಮೊದಲ ವಾಶ್‌ನಲ್ಲಿ ಚೆನ್ನಾಗಿ ತೊಳೆದು, 1 ಗ್ಲಾಸ್ ನೀರಿನಲ್ಲಿ ನೆನೆಸಿಡಬೇಕು. ಇಂದು ಬೆಳಿಗ್ಗೆ ನೆನಸಿಟ್ಟು, ಮರುದಿನ ಬೆಳಿಗ್ಗೆ ಆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಬೇರೆ ಅಕ್ಕಿ ಬೇರೆ ಮಾಡಬೇಕು. ಹಾಗೆ ಸಪರೇಟ್ ಮಾಡಿದ ಫರ್ಮೆಂಟೆಡ್ ರೈಸ್ ವಾಟರ್‌ನ್ನು ಸ್ಪ್ರೇ ಬಾಟಲಿಗೆ ಹಾಕಿ. ತಲೆ ಸ್ನಾನ ಮಾಡುವ 2 ಗಂಚೆ ಮುಂಚೆ, ಕೂದಲಿಗೆ, ಕೂದಲ ಬುಡಕ್ಕೆ ಸ್ಪ್ರೇ ಮಾಡಿಕೊಳ್ಳಬೇಕು.

ನೀವು ಇದಕ್ಕೆ 1 ಕೆಂಪು ಈರುಳ್ಳಿಯ ರಸ ತೆಗೆದು ಸೇರಿಸಿ, ಬಳಿಕ ಸ್ಪ್ರೇ ಮಾಡಿಕೊಂಡರೆ, ಇನ್ನೂ ಉತ್ತಮವಾದ ಫಲಿತಾಂಶ ಕಾಣುವಿರಿ. ಏಕೆಂದರೆ, ಫರ್ಮೆಂಟ್ ಆಗಿರುವ ರೈಸ್ ವಾಟರ್ ಮತ್ತು ಫ್ರೆಶ್ ಆಗಿರುವ ಈರುಳ್ಳಿ ರಸ, ತಲೆಗೂದಲ ಬುಡವನ್ನು ಗಟ್ಟಿಗೊಳಿಸಿ, ಕೂದಲು ಉದುರದಂತೆ ತಡೆಯುತ್ತದೆ. ಮತ್ತು ಕೂದಲು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ.

Tags: Beauty tipsdietFoodfruitsHair careHair care tipsHair fallHealth TipsNonvegremedysleepVegetableswater
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In