Horoscope: ಈ ಪ್ರಪಂಚದಲ್ಲಿ ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಮುಖಚರ್ಯದಿಂದ ಹಿಡಿದು, ಗುಣಲಕ್ಷಣ, ಸ್ವಭಾವ ಎಲ್ಲವೂ ಬೇರೆ ಬೇರೆ ರೀತಿಯೇ ಇರುತ್ತದೆ. ಅದೇ ರೀತಿ ಜನವರಿಯಲ್ಲಿ, ಫೆಬ್ರವರಿ, ಮಾರ್ಚ್ ಈ ಎಲ್ಲ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ನಾವಿವತ್ತು ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
ಮೊದಲನೇಯದಾಗಿ ಏಪ್ರಿಲ್ನಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..
- ಏಪ್ರಿಲ್ ತಿಂಗಳಲ್ಲಿ ಜನಿಸಿದವರು, ಹಸನ್ಮುಖಿಗಳು ಸುಂದರ ಮೊಗವುಳ್ಳವರಾಗಿರುತ್ತಾರೆ. ಇವರು ತಾವು ನಗು ನಗುತ್ತಲಿರುವುದಲ್ಲದೇ, ತಮ್ಮ ಸುತ್ತಮುತ್ತಲಿರುವವರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಇವರಿಗೆ ಸ್ನೇಹಿತರು ಹೆಚ್ಚು ಎನ್ನಬಹುದು.
- ಕಲೆಗೆ ಹೆಚ್ಚಿನ ಬೆಲೆ ಕೊಡುವ ಇವರು, ಯಾವುದಾದರೂ ಒಂದು ಕಲೆಯಲ್ಲಿ ಪರಿಣಿತರಾಗಿರುತ್ತಾರೆ. ಸ್ಪೂರ್ತಿದಾಯಕರಾಗಿರುವ ಇವರಲ್ಲಿ ಆಲಸ್ಯ ಕೊಂಚ ಕಡಿಮೆ ಎನ್ನಬಹುದು. ಸದಾ ಚೈತನ್ಯದಾಯಕರಾಗಿರುವ ಇವರಿಗೆ ಪ್ರವಾಸ, ಚಾರಣದಲ್ಲಿ ಹೆಚ್ಚು ಒಲವು.
- ನಾಯಕತ್ವದ ಗುಣಗಳು ಇವರಲ್ಲಿದ್ದು, ಯಾವುದಾದರೂ ವಿಷಯ ಕುರಿತಂತೆ ಕಲಿಯಬೇಕಿದ್ದರೆ, ಅದನ್ನ ಥಟ್ ಅಂತಾ ಕಲಿಯುವ ವ್ಯಕ್ತಿತ್ವ ಇವರದ್ದಾಗಿದೆ. ಅಲ್ಲದೇ, ಎಲ್ಲದರಲ್ಲೂ ಮುಂದಿರಬೇಕು ಅನ್ನುವ ಮನಸ್ಸು ಇವರದ್ದಾಗಿರುತ್ತದೆ.
- ಅಲ್ಲದೇ, ಗೆಳೆತನಕ್ಕೆ ಬೆಲೆ ಕೊಡುವ ಇವರಿಗೆ ದೊಡ್ಡ ಗೆಳೆಯರ ಬಳಗವಿರುತ್ತದೆ. ಕುಟುಂಬದ ಸದಸ್ಯರಿಗೂ ಹೆಚ್ಚಿನ ಬೆಲೆ ಕೊಡುವ ಇವರು, ಅವರನ್ನ ಪ್ರೀತಿ ಕಾಳಜಿಯಿಂದ ಕಾಣುತ್ತಾರೆ.
- ಇನ್ನು ಯಾವುದಾದರೂ ಕೆಲಸ ಮಾಡಲೇಬೇಕೆಂದು ಇವರು ನಿಶ್ಚಯಿಸಿದರೆ, ಅದನ್ನು ಮಾಡದೇ ಬಿಡುವುದಿಲ್ಲ. ಅಂದುಕೊಂಡ ಕೆಲಸ ಮಾಡಿ ಮುಗಿಸುವುದರಲ್ಲಿ ಇವರು ಹಠಮಾರಿ ಎನ್ನಬಹುದು.
- ಇನ್ನು ಇವರು ಹಾರುವ ಹಕ್ಕಿಯಂತಿರಲು ಬಯಸುತ್ತಾರೆ. ಆದ್ದರಿಂದ ಇವರಿಗೆ ಮದುವೆ ಎಂದರೆ ಇಷ್ಟವಿರುವುದಿಲ್ಲ.
ಏಪ್ರಿಲ್ನಲ್ಲಿ ಜನಿಸಿದವರ ಉತ್ತಮವಲ್ಲದ ಗುಣದ ಬಗ್ಗೆ ಹೇಳುವುದಾದರೆ,
- ಇವರು ಹೇಳಿದ ಹಾಗೆ ನೀವು ಕೇಳಿದರಷ್ಟೇ ಇವರು ನಿಮ್ಮ ಉತ್ತಮ ಸ್ನೇಹಿತರಾಗಿರುತ್ತಾರೆ. ಒಮ್ಮೆ ನೀವು ಇವರ ಮಾತನ್ನು ತಿರಸ್ಕರಿಸಿದರೆ, ನಿಮ್ಮ ಮುಖವನ್ನ ಕೂಡ ಇವರು ನೋಡುವುದಿಲ್ಲ. ಇದರಿಂದಲೇ ಇವರ ಸ್ನೇಹಿತರು, ಸಂಬಂಧಿಕರು ದೂರಾಗಬಹುದು. ಇವರ ಈ ಗುಣದಿಂದಾಗಿ ಸಂಸಾರ ಸುಖ ಅನುಭವಿಸುವ ಯೋಗ ಕೊಂಚ ಕಡಿಮೆ.
- ಹೆಚ್ಚಾಗಿ ಸಿಟ್ಟು ಮಾಡಿಕೊಳ್ಳದ ಇವರು, ಸಿಟ್ಟು ಬಂದಾಗ ಮಾತ್ರ ರಾಕ್ಷಸರಂತೆ ವರ್ತಿಸುತ್ತಾರೆ. ಹಾಗಾಗಿ ಇವರಿಗೆ ಸಿಟ್ಟು ಬಂದಾಗ ಇವರನ್ನ ಯಾರೂ ಮಾತನಾಡಿಸದಿದ್ದರೇ ಉತ್ತಮ. ಕೆಲ ಸಮಯದ ಬಳಿಕ ಅವರೇ ಶಾಂತರಾಗುತ್ತಾರೆ.
- ಏಪ್ರಿಲ್ ತಿಂಗಳಲ್ಲಿ ಜನಿಸಿದವರಿಗೆ ಅಹಂಕಾರ ಕೊಂಚ ಹೆಚ್ಚು ಎನ್ನಬಹುದು.
- ಇನ್ನು ಇವರು ನಟನಾ ವೃತ್ತಿ, ಸಂಗೀತ ಕ್ಷೇತ್ರ, ರಾಜಕೀಯ, ಬರಹಗಾರರಾದರೆ ಬೇಗ ಯಶಸ್ಸು ಕಾಣುತ್ತಾರೆ. 3,5,7 ಮತ್ತು 9 ಇವರ ಲಕ್ಕಿ ಅಂಕವಾಗಿದೆ. ಹಳದಿ, ಹಸಿರು, ಗುಲಾಬಿ ಬಣ್ಣ ಅದೃಷ್ಟದ ಬಣ್ಣವಾದರೆ, ರವಿವಾರ, ಸೋಮವಾರ ಮತ್ತು ಮಂಗಳವಾರ ಶುಭದಿನವಾಗಿದೆ.
Discussion about this post