Horoscope: ದೇವರ ದಯೆ ಇಲ್ಲದೇ 1 ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುತ್ತಾರೆ. ಅದೇ ದೇವರ ದಯೆ ಇದ್ದರೆ ನಾವಂದುಕ“ಂಡ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಯವರ ಮೇಲೆ ಹೆಚ್ಚು ದೇವರ ದಯೆ ಇದೆ ಎಂದು ತಿಳಿಯೋಣ.
ಕರ್ಕ ರಾಶಿ: ಕರ್ಕ ರಾಶಿಯವರು ಧಾರ್ಮಿಕತೆ, ಪೂಜೆ, ಪುನಸ್ಕಾರಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿ ಮಾಡುತ್ತಾರೆ. ಇವರು ಭಾವನಾತ್ಮಕ ಜೀವಿಯಾಗಿದ್ದು, ಇನ್ನ“ಬ್ಬರಿಗೆ ಕೇಡು ಬಯಸುವುದಿಲ್ಲ. ಈ ಉತ್ತಮ ಮನಸ್ಸಿನಿಂದಲೇ ಈ ರಾಶಿಯವರು ದೇವರ ದಯೆಗೆ ಪಾತ್ರರಾಗುತ್ತಾರೆ. ಹೆಚ್ಚು ಉನ್ನತಿಯೂ ಕಾಣದೇ, ಹೆಚ್ಚು ಅವನತಿಯೂ ಕಾಣದೇ, ಹೆಚ್ಚು ಆಸೆ ಆಕಾಂಕ್ಷೆ ಇಲ್ಲದೇ, ಎಲ್ಲ ದೇವರ ದಯೆ ಎಂದು ಬದುಕುವವರು ಈ ರಾಶಿಯವರು. cancer.
ಕನ್ಯಾ ರಾಶಿ: ಶಿಸ್ತಿಗೆ ಹೆಚ್ಚು ಬೆಲೆ ನೀಡುವ ಕನ್ಯಾ ರಾಶಿಯವರು, ದೇವರಲ್ಲಿಯೂ ಹೆಚ್ಚು ಭಕ್ತಿ ಹ“ಂದಿದವರಾಗಿದ್ದಾರೆ. ಅಲ್ಲದೇ ದೇವರಿಗೆ ಸಂಬಂಧಿಸಿದ ಆಚರಣೆ ಮೇಲೆ ಹೆಚ್ಚು ಆಸಕ್ತಿ, ಶ್ರದ್ಧೆ ಇರಿಸಿದ್ದಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ದೇವರ ಮೇಲೆ ಹೆಚ್ಚು ಭಕ್ತಿ ಇದ್ದು, ಇವರು ಆದಷ್ಟು ಜೀವನದಲ್ಲಿ ನಿಯತ್ತಿನಿಂದ ಇರಲು ಪ್ರಯತ್ನಿಸುತ್ತಾರೆ. ಹಾಗಾಗಿ ದೇವರ ದಯೆ ಇವರ ಮೇಲೆ ಸದಾ ಇರುತ್ತದೆ. Scorpio.
ಧನು ರಾಶಿ: ಧನು ರಾಶಿಯವರು ಕೂಡ ದೇವರಲ್ಲಿ ಹೆಚ್ಚು ಭಕ್ತಿ, ನಂಬಿಕೆ ಉಳ್ಳವರಾಗಿರುತ್ತಾರೆ. ಈ ನಂಬಿಕೆಯೇ ಇವರನ್ನು ಕಷ್ಟ ಕಾಲದಿಂದ ಪಾರು ಮಾಡುತ್ತದೆ. ದಾನ ಧರ್ಮ, ಉತ್ತಮ ಕಾರ್ಯಗಳಲ್ಲಿ ಇವರು ನಂಬಿಕೆ ಹ“ಂದಿದ್ದು, ಇವರು ಮಾಡುವ ಉತ್ತಮ ಕೆಲಸಗಳೇ ಇವರ ಕೈ ಹಿಡಿಯುತ್ತದೆ.
ಮೀನ ರಾಶಿ: ಮೀನ ರಾಶಿಯವರು ಸಾತ್ವಿಕ ಸ್ವಭಾವದರು. ಅಲ್ಲದೇ ದೇವರಲ್ಲಿ ನಂಬಿಕೆ ಇರಿಸಿಕ“ಂಡವರು. ಇವರ ಸೌಮ್ಯ ಸ್ವಭಾವವರೇ ಇವರಿಗೆ ವರವಾಗಿದ್ದು, ಉತ್ತಮ ಕರ್ಮಗಳನ್ನು ಮಾಡುವಲ್ಲಿ ಸಹಕಾರಿಯಾಗಿದೆ. ಈ ಉತ್ತಮ ಕಾರ್ಯಗಳೇ ಇವರನ್ನು ಕಾಪಾಡುತ್ತದೆ.
ಈ ರಾಶಿಯವರು ತಾಳ್ಮೆ ಸ್ವಭಾವದವರು
ಕೆಲವರಿಗೆ ಏನಾದರೂ ಹೇಳಿದರೆ ಥಟ್ ಅಂತಾ ಕೋಪ ಬರುತ್ತದೆ. ಹಾಗಾಗಿ ಅವರ ಜತೆ ಮಾತನಾಡುವುದಕ್ಕೂ ಭಯವಾಗುತ್ತದೆ. ಆದರೆ ಕೆಲ ವ್ಯಕ್ತಿಗಳು ಹೇಗಿರುತ್ತಾರೆಂದರೆ, ಎದುರಿನವರು ಹೇಳಿದ್ದನ್ನು ಕೇಳಿ, ಮತ್ತೆ ಮಾತನಾಡುತ್ತಾರೆ. ತಮ್ಮ ನಿರ್ಧಾರ ತಿಳಿಸುತ್ತಾರೆ. ಅಂದ್ರೆ ಅವರು ಹೆಚ್ಚು ತಾಳ್ಮೆ ಇದ್ದವರಾಗಿರುತ್ತಾರೆ. ಇಂದು ನಾವು ಹೆಚ್ಚು ತಾಳ್ಮೆ ಇರುವ ರಾಶಿಗಳು ಯಾವುದು ಅಂತಾ ಹೇಳಲಿದ್ದೇವೆ.
ಮಿಥುನ: ಮಿಥುನ ರಾಶಿಯವರಿಗೆ ಹೆಚ್ಚು ಸಮಯ ಕೋಪ ಮಾಡಿ, ಸಮಯ ವ್‌ಯರ್ಥ ಮಾಡುವ ಮನಸ್ಸಿರುವುದಿಲ್ಲ. ಹಾಗಾಗಿ ಇಂದು ಕೋಪ ಮಾಡಿ, ನಾಳೆ ಚೆನ್ನಾಗಿರಲು ಬಯಸುತ್ತಾರೆ. ನಗು ನಗುತ್ತ ಮಾತನಾಾಡಿಸುತ್ತಾರೆ. ನಿನ್ನೆಯದು ನಿನ್ನೆಗೆ ಎನ್ನುವ ಸ್ವಭಾವ ಇವರದ್ದು. ಜೀವನ ನಡೆಸಲು ಇಂಥ ಸ್ವಭಾವವೇ ಬೇಕಾಗಿರುತ್ತದೆ. Gemini.
ಕರ್ಕ: ಕರ್ಕ ರಾಶಿಯವರಿಗೆ ಕೋಪ ಬಂದರೆ, ಅದನ್ನು ಸರಿ ಮಾಡಲು ತುಂಬ ಸಮಯ ಬೇಕಾಗುತ್ತದೆ. ಆದರೆ ಅದು ಮನಸ್ಸಿನಲ್ಲೇ ಕುದಿಯುತ್ತಿರುತ್ತದೆ. ಅವರು ಕೋಪವನ್ನು ಆಚೆ ತೋರಿಸುವುದಿಲ್ಲ. ಬದಲಾಗಿ ಮನಸ್ಸಿನಲ್ಲೇ ಕಿಡಿ ಕಾರುತ್ತಾರೆ.
ತುಲಾ: ತುಲಾ ರಾಶಿಯವರು ತಾಳ್ಮೆ ವಹಿಸುತ್ತಾರೆ. ಆದರೆ ಅವರಿಗೂ ಹೆಚ್ಚು ಕೋಪ ಬರುತ್ತದೆ. ಆ ಕೋಪವನ್ನು ಸಹಿಸಿ, ತಾಳ್ಮೆಯಿಂದ ಇರುತ್ತಾರೆ. ಇದರ ಹಿಂದೆ ಕಾರಣವಂತೂ ಇದ್ದೇ ಇರುತ್ತದೆ. ಕಾಳಜಿ, ಪ್ರೀತಿ, ರಕ್ಷಣೆ ಹೀಗೆ ಯಾವುದಾದರೂ ಕಾರಣವಿರುವುದಕ್ಕೇ, ಅವರು ಕೋಪವನ್ನು ತೋರಿಸುವುದಿಲ್ಲ.
ಮೀನ: ಮೀನ ರಾಶಿಯವರು ಸೌಮ್ಯ ಸ್ವಭಾವದವರು. ಯಾರಾದರೂ ಬೈದರೆ, ಬಯ್ಯಿಸಿಕ`ಂಡು ಬರುತ್ತಾರೆ ವಿನಃ, ಎದುರುತ್ತರ ನೀಡುವುದಿಲ್ಲ. ಬೇಕಾದರೆ, ನಾಲ್ಕು ಗೋಡೆ ಮಧ್ಯ ಕುಳಿತು ಅದನ್ನು ನೆನಪಿಸಿ, ಅಳುತ್ತಾರೆ. ಆದರೆ ಅವರ ಬಳಿ ಕೋಪ ತೋರಿಸುವುದಿಲ್ಲ.
===============================================
ನಾಯಕತ್ವದ ಗುಣವುಳ್ಳ ರಾಶಿಯವರು ಇವರು
ಎಲ್ಲ ರಾಶಿಯವರಿಗೂ ಅವರದ್ದೇ ಆದ ಗುಣಗಳಿರುತ್ತದೆ. ಅಂಥ ಗುಣಗಳು ಯಾವುದು ಅನ್ನೋದು ಕೆಲವರನ್ನು ಉನ್ನತಿಗೆ ಕೆಲವರನ್ನು ಅವನತಿಗೆ ತರುತ್ತದೆ. ಹಾಗಾಗಿ ಉತ್ತಮ ಗುಣಗಳು ನಮ್ಮ ಜೀವನದ ಭಾಗವಾಗಿರಬೇಕು ಅಂತಾ ಹಿರಿಯರು ಹೇಳೋದು. ಇಂದು ನಾವು ನಾಯಕತ್ವದ ಗುಣಗಳು ಇರುವ ರಾಶಿಗಳು ಯಾವುದು ಅಂತಾ ತಿಳಿಯೋಣ.
ಮೇಷ: ಮೇಷ ರಾಶಿಯ ಹೆಣ್ಣು ಮಕ್ಕಳು ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುತ್ತಾರೆ. ಅದೇನೇ ಇರಲಿ. ವಿದ್ಯಾಭ್ಯಾಸ, ಪ್ರಮೋಷನ್, ಉದ್ಯಮ ಹೀಗೆ ಯಾವುದೇ ವಿಷಯದಲ್ಲೂ ನಾನು ಗೆಲುವು ಸಾಧಿಸಬೇಕು ಅಂತಾ ನಿರ್ಧರಿಸಿದರೆ, ಅದು ಪೂರ್ಣ ಮಾಡಿಯೇ ಮಾಡುತ್ತಾರೆ. ಹಾಗಾಗಿ ಇದೇ ಸ್ವಭಾವ ಅವರನ್ನು ಲೀಡರ್ ಆಗಲು ಸಹಾಯ ಮಾಡುತ್ತದೆ.
ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಕೂಡ ಹಿಡಿದ ಕೆಲಸ ಸಂಪೂರ್ಣ ಮಾಡುವವರು. ಆದರೆ ಇವರು ತಾಳ್ಮೆಯಿಂದ, ಜಾಣ್ಮೆಯಿಂದ ನಿರ್ಧಾರ ತೆಗೆದುಕ“ಳ್ಳುತ್ತಾರೆ. ಅಲ್ಲದೇ, ಹೆಚ್ಚು ಪರಿಶ್ರಮ ಪಡುತ್ತಾರೆ. ಅದಕ್ಕೆ ತಕ್ಕ ಫಲ ಸಿಗುವ ತನಕ ಯಾವುದಕ್‌ಕೂ ಅಂಜದೇ ಮುನ್ನಡೆಯುತ್ತಾರೆ. ಈ ಗುಣವೇ ಇವರನ್ನು ಲೀಡರ್ ಆಗಿ ಮಾಡುತ್ತದೆ.
ಮಿಥುನ: ಮಿಥುನ ರಾಶಿಯವರು ಬೇಗ ವಿಷಯವನ್ನು ಕ್ಯಾಚ್ ಮಾಡಿಕ“ಳ್ಳುವವರು. ಮುಂದಾಲೋಚನೆ ಉಳ್ಳವರು. ಚಿಕ್ಕ ವಯಸ್ಸಿನಿಂದಲೇ ಜಾಣರಾಗಿರುತ್ತಾರೆ. ತಮಗೆ ಯಾವುದಾದರೂ ಆಪತ್ತು ಬರುತ್ತಿದೆ ಅಂತಾ ಅನ್ನಿಸಿದರೆ, ಅದನ್ನು ಆ ಕ್ಷಣ ಹೇಗೆ ಎದುರಿಸಬೇಕು ಎಂದು ತಿಳಿದಿರುವಂಥವರಾಗಿರುತ್ತಾರೆ. ಇಂಥ ಗುಣವೇ ಮುಂದೆ ಅವರು ನಾಯಕಿಯಾಗಲು ಸಹಕಾರಿಯಾಗಿರುತ್ತದೆ.
ಕುಂಭ: ಕುಂಭ ರಾಶಿಯವರು ಹುಂಭ ಸ್ವಭಾವದವರು ಎನ್ನುತ್ತಾರೆ. ಅಂದರೆ ಇವರು ಯಾವುದಕ್ಕೂ ಹೆದರುವುದಿಲ್ಲ. ಬಂದಿದ್ದು ಬರಲಿ ಎಂದು ಮುನ್ನುಗ್ಗುವ ಸ್ವಭಾವದವರು. ಆದರೆ ಇದೇ ಸ್ವಭಾವ ಅವರಿಗೆ ಧೈರ್ಯ ತರುತ್ತದೆ. ಇಂಥ ಧೈರ್ಯದ ಸ್ವಭಾವವೇ, ಭದ್ರ ಭವಿಷ್ಯದ ಬುನಾದಿಗೆ ಅನುಕೂಲವಾಗುತ್ತದೆ.
========================================
ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು
ಎಲ್ಲ ರಾಶಿಯವರಿಗೂ ಅವರದ್ದೇ ಆದ ಗುಣಗಳಿರುತ್ತದೆ. ಅವರದ್ದೇ ಆದ ಪರ್ಸನಾಲಿಟಿ ಇರುತ್ತದೆ. ಕೆಲವರು ಕುಳ್ಳಗೆ, ಕೆಲವರು ಬೆಳ್ಳಗೆ, ಎತ್ತರ, ಕಪ್ಪು, ಹೀಗೆ ವಿಭಿನ್ನ ಸೌಂದರ್ಯ ಹೊಂದಿರುತ್ತಾರೆ. ಆದರೆ ಇಂದು ಎಲ್ಲರ ಮಧ್ಯೆ ಆಕರ್ಷಕವಾಗಿರುವ ರಾಶಿಯವರ ಬಗ್ಗೆ ತಿಳಿಯೋಣ.
ಮೇಷ: ಮೇಷ ರಾಶಿಯವರು ಎಲ್ಲದರಲ್ಲೂ ತಾವು ಮುಂದಿರಬೇಕು ಎಂದು ಬಯಸುವವರು. ಎಲ್ಲ ವಿಷಯದಲ್ಲೂ ಜ್ಞಾನ ಉಳ್ಳವರು. ಅದೇ ರೀತಿ ತಮ್ಮ ಸೌಂದರ್ಯ, ಉಡುಪು, ಹಾವಭಾವ ಎಲ್ಲದರ ಮೇಲೆ ಗಮನ ನೀಡುವವರು. ನಾಲ್ಕು ಜನರ ಮಧ್ಯೆ ತಾನು ಚೆಂದಗಾಣಿಸಬೇಕು. ಆಕರ್ಷಕವಾಾಗಿರಬೇಕು ಎಂದು ಬಯಸುವವರು. ಅಲ್ಲದೇ, ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಉಳ್ಳವರು. ಇದೇ ಗುಣಗಳು ಇವರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಸಿಂಹ: ನಾಯಕತ್ವದ ಸ್ವಭಾವ ಇರುವ ಸಿಂಹ ರಾಶಿಯವರು, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಎಂದು ಬಯಸುತ್ತಾರೆ. ಅದರಂತೆ ಅವರು ತಾವು ಧರಿಸುವ ಬಟ್ಟೆ, ಅದಕ್ಕೆ ತಕ್ಕಂತೆ ಆರ್ನಾಮೆಂಟ್ಸ್, ಶೂಸ್ ಹೀಗೆ ಎಲ್ಲದರ ಬಗ್ಗೆ ಗಮನ ನೀಡುತ್ತಾರೆ. ಶಿಸ್ತಿನಿಂದಿರಲು ಬಯಸುತ್ತಾರೆ.Leo.
ತುಲಾ: ತುಲಾ ರಾಶಿಯವರಿಗೆ ಹಳೆಯ ವಸ್ತು, ಹಳೆಯ ಊಟ ಇವೆಲ್ಲದರ ಮೇಲೆ ಬೇಗ ಬೇಸರ ಬರುತ್ತದೆ. ಇವರಿಗೆಲ್ಲವೂ ನೂತನವಾಾಗಿಯೇ ಇರಬೇಕು. ಅದೇ ರೀತಿ, ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರ ಸಹ ಇದಕ್ಕೆ ಸಹಕರಿಸುತ್ತಾನೆ. ಇವರು ಖರ್ಚು ಮಾಡಿದ ಹಾಗೆ, ಇವರಿಗೆ ಹಣ ಬರುವಂತೆ ಆಶೀರ್ವದಿಸಿರುತ್ತಾನೆ. ಹಾಗಾಗಿ ತುಲಾ ರಾಶಿಯವರು ಬಟ್ಟೆ, ವಾಚ್, ಪರ್ಫ್ಯೂಮ್, ಶೂಸ್ ಹೀಗೆ ಎಲ್ಲ ವಸ್ತುಗಳನ್ನು ಆಗಾಗ ಬದಲಿಸಿ, ಆಕರ್ಷಕವಾಗಿರಲು ಪ್ರಯತ್ನಿಸುತ್ತಾರೆ.
ಧನು: ಧನು ರಾಶಿಯವರು ರಾಶಿಯ ಹೆಸರಿಗೆ ತಕ್ಕಂತೆ, ಧನವಂತರಾಾಗಿಯೇ ಇರುತ್ತಾರೆ. ಇವರ ಗುಣ, ತಾಳ್ಮೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹಾಗಾಗಿ ಇವರು ಜೀವನದಲ್ಲಿ ಆದಷ್ಟು, ಶಿಸ್ತಾಗಿ ಇರಲು ಪ್ರಯತ್ನಿಸುತ್ತಾರೆ. ಊಟ, ಬಟ್ಟೆ, ವಸತಿ, ಪ್ರವಾಸ ಎಲ್ಲದರಲ್ಲೂ ಏನಾದ್ರೂ ಡಿಫ್ರೆಂಟ್ ಆಗಿರಬೇಕು ಎಂದು ಬಯಸುತ್ತಾರೆ. ಅಲ್ಲದೇ, ಜೀವನದಲ್ಲಿ ಬಿಂದಾಸ್ ಆಗಿರಲು ಬೇಕಾದ ಹಣದ ಜತೆ ಜ್ಞಾನವನ್ನು ಗಳಿಸಿರುತ್ತಾರೆ. ಹಾಗಾಗಿಯೇ ಧನು ರಾಶಿಯವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ.
=============================================
ಸಾಂಪ್ರದಾಯಿಕ ಉಡುಪು ಧರಿಸಲು ಇಷ್ಟಪಡುವವರು ಈ ರಾಶಿಯವರು
ಇಂದಿನ ಕಾಲದಲ್ಲಿ ಸಾಂಪ್ರದಾಯಿಕ ಉಡುಪು ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲೋ ಕೆಲವರು ಮಾತ್ರ, ಸಾಂಪ್ರದಾಾಯಿಕ ಉಡುಪುಗಳಿಗೆ ಮಹತ್ವ ನೀಡುತ್ತಾರೆ. ಇನ್ನು ಕೆಲವರು ಸಾಂಪ್ರದಾಯಿಕ ಉಡುಪಿನ ಹೆಸರಿನಲ್ಲೂ ಸ್ಟೈಲ್ ಮಾಡುತ್ತಿದ್ದಾರೆ. ಆದರೆ ಯಾವ ಫ್ಯಾಷನ್ ಬರಲಿ, ನಾವು ಸೀರೆ, ಚೂಡಿದಾರ್ ಅತೀ ಹೆಚ್ಚು ಇಷ್ಟಪಡುತ್ತೇವೆ ಅಂತಾರೆ ಈ ರಾಶಿಯವರು. ಹಾಗಾದ್ರೆ ಯಾವ ರಾಶಿಯವರಿಗೆ ಸಾಂಪ್ರಾದಾಯಿಕ ಉಡುಗೆ ಇಷ್ಟ ಅಂತಾ ತಿಳಿಯೋಣ ಬನ್ನಿ..
ವೃಷಭ: ವೃಷಭ ರಾಶಿಯವರು ಸಿಂಪಲ್ ಆಗಿ ಜೀವನ ಮಾಡಲು ಇಚ್ಛಿಸುವವರು. ಸರಳ ಜೀವಿಗಳು. ಹಾಗಾಗಿ ಇವರು ಹೆಚ್ಚು ಸ್ಟೈಲ್ ಮಾಡುವುದಿಲ್ಲ. ಆದರೆ ಫ್ಯಾಷನ್ ಮಾಡಲೇಬೇಕ್ು ಎಂದಾಗ, ಸೀರೆ, ಕುರ್ತಿಗಳಲ್ಲೇ ಫ್ಯಾಷನ್ ಮಾಡಲು ಇಚ್ಛಿಸುತ್ತಾರೆ. ಇವರ ಆಯ್ಕೆ ರೀತಿ ಅತ್ಯುತ್ತಮವಾಗಿರುವ ಕಾರಣ, ಸಾಂಪ್ರದಾಯಿಕ ಉಡುಪಿನ ಸೆಲೆಕ್ಷನ್ ಕೂಡ ಸಖತ್ ಆಗಿಯೇ ಇರುತ್ತದೆ.
ಕರ್ಕ: ಕರ್ಕ ರಾಶಿಯವರಿಗೆ ಹಳೆಯ ವಸ್ತುಗಳೆಂದರೆ ಹೆಚ್ಚು ಇಷ್ಟ. ಅವರು ಹಳೆಯ ವಸ್ತುಗಳನ್ನು ನೋಡಿ ಹೆಚ್ಚು ಆಕರ್ಷಿತರಾಗುತ್ತಾರೆ. ಅವರಿಗೆ ಹಳೆ ಕಾಲದ ಶೈಲಿಯ ಮನೆ, ವಸ್ತುಗಳು, ಶಿಲ್ಪಕಲೆ, ಸ್ಥಳ, ಉಡುಪು, ಫ್ಯಾಷನ್ ಇಷ್ಟ. ಹಾಗಾಗಿ ಇವರು ಸಾಂಪ್ರದಾಯಿಕ ಉಡುಗೆಗೆ ಹೆಚ್ಚು ಮಹತ್ವ ನೀಡುತ್ತಾರೆ.
ಸಿಂಹ : ನಾಯಕತ್ವದ ಗುಣ ಇರುವ ಸಿಂಹ ರಾಶಿಯವರು ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದು ಬಯಸುವವರು. ಹಾಗಾಗಿ ಇವರು ಕಾಣುವುದರಲ್ಲೂ ತಾವೇ ಚೆಂದಗಾಣಿಸಬೇಕು. ತಾವು ಸೆಂಟರ್ ಆಫ ಅಟ್ರ್ಯಾಕ್ಷನ್ ಆಗಿರಬೇಕು ಎಂದು ಬಯಸುತ್ತಾರೆ. ಹಾಗಾಗಿ ಇವರು ಉಡುಪಿಗೂ ಮಹತ್ವ ನೀಡುತ್ತಾರೆ. ಸಾಂಪ್ರದಾಯಿಕ ಉಡುಪು ಧರಿಸಲು ಇಚ್ಛಿಸುತ್ತಾರೆ.
ಮೀನ: ಮೀನ ರಾಶಿಯವರು ಸೌಮ್ಯ ಸ್ವಭಾವದವರು. ಇವರು ಧಾರ್ಮಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿ ಇವರಿಗೆ ಸಾಂಪ್ರದಾಯಿಕ ಉಡುಪು ಧರಿಸಲು ಹೆಚ್ಚು ಇಷ್ಟ. ಪುರುಷರಾದರೆ, ಧೋತಿ-ಕುರ್ತಾ ಧರಿಸುತ್ತಾರೆ. ಮಹಿಳೆಯರಾದರೆ, ಸೀರೆ ಉಡಲು ಇಚ್ಛಿಸುತ್ತಾರೆ.
========================================
ಈ ರಾಶಿಯವರು ನಿಷ್ಠಾವಂತ ಪತಿಯಾಗುವರು (Rashi-Bhavishya)
ಕೆಲ ಪುರುಷರು ಸಂಗಾತಿಯ ಜತೆ ಎಷ್ಟೇ ಕೋಪತಾಪ ಇದ್ದರೂ, ಅದನ್ನು ಆಚೆ ಹೇಳಿಕ“ಳ್ಳುವುದಿಲ್ಲ. ಏಕೆಂದರೆ, ಅವರು ಪತ್ನಿಯ ಬಗ್ಗೆ ಉತ್ತಮ ಅಭಿಪ್ರಾಯ ಇಟ್ಟುಕ“ಂಡಿರುತ್ತಾರೆ. ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಬೇರೆ ಮಹಿಳೆಯ ಯೋಚನೆ ಎಂದಿಗೂ ಮಾಡುವುದಿಲ್ಲ. ನಿಮಗೂ ಇಂಥ ಲಾಯಲ್ ಹಸ್ಬಂಡ್ ಬೇಕಾದ್ರೆ ನೀವು ಈ ರಾಶಿಯವರ ಗುಣ ಪರಿಶೀಲಿಸಬಹುದು. ಹಾಗಾದ್ರೆ ಯಾವ ರಾಶಿಯವರು ಲಾಯಲ್ ಹಸ್ಬೆಂಡ್ ಆಗ್ತಾರೆ ಅಂತಾ ತಿಳಿಯೋಣ ಬನ್ನಿ..
ವೃಷಭ: ವೃಷಭ ರಾಶಿಯ ಪುರುಷರಾಗಲಿ, ಮಹಿಳೆಯರಾಗಲಿ ಹೆಚ್ಚು ತಾಳ್ಮೆ ಉಳ್ಳವರು. ಮತ್ತು 1 ಸಂಸಾರ ಉತ್ತಮವಾಗಿ ಸಾಗಲು, ಇಬ್ಬರಲ್ಲಿ ಒಬ್ಬರಿಗೆ ತಾಳ್ಮೆ ಇರುವುದು ತುಂಬಾ ಮುಖ್ಯ. ಹಾಗಾಗಿ ಈ ರಾಶಿಯ ಪುರುಷರು ಖಂಡಿತವಾಗಿಯೂ ಉತ್ತಮ ಪತಿಯಾಗಬಲ್ಲರು.
ಕರ್ಕ: ಕರ್ಕ ರಾಶಿಯವರು ಸೌಮ್ಯ ಸ್ವಭಾವದವರು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವವರಾಗಿದ್ದು, ಸಂಬಂಧ ಉಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಜೀವನ ಸಂಗಾತಿಗೆ ಹೆಚ್ಚು ಪ್ರೀತಿ ನೀಡುತ್ತಾರೆ. ಕಾಳಜಿ ಮಾಡುತ್ತಾರೆ. ಆದರೆ ಅದನ್ನು ತೋರಿಸಿಕ“ಳ್ಳುವುದಿಲ್ಲ. ನೋುವವರಿಗೆ ಇವರು ಯ್ಯೂಸ್‌ಲೆಸ್ ಅನ್ನಿಸಿದರೂ, ನಿಮ್ಮ ಕಾಳಜಿಗೆ ಬೇಕಿರುವ ಎಲ್ಲ ಕೆಲಸವನ್ನು ಅವರು ಮಾಡುತ್ತಿರುತ್ತಾರೆ.
ಕನ್ಯಾ: ಕನ್ಯಾ ರಾಶಿಯವರು ಹಿಡಿದ ಕೆಲಸವನ್ನು ಮುಗಿಸಿಯೇ ತೀರುವೆ ಎನ್ನುವರು. ಅದೇ ರೀತಿ ಜೀವನ ಸಂಗಾತಿಗಾಗಿ ಅವರು ಎಂಥ ನಿರ್ಧಾರ ಬೇಕಾದ್ರೂ ತೆಗೆದುಕ“ಳ್ಳುತ್ತಾರೆ. ಅಲ್ಲದೇ, ಸಂಗಾತಿಗೆ ಎಲ್ಲವೂ ಒಳಿತಾಗಲಿ ಎಂದು ಅವರು ಕಹಿಯಾಗಿಯೂ ನಡೆದುಕ“ಳ್ಳುತ್ತಾರೆ. ಇವರು ಕಾಳಜಿ ಮಾಡುವ ರೀತಿ ಕಹಿ ಇದ್ದರೂ, ಇದರ ಹಿಂದೆ ನಿಮಗೆ ಸದಾ ಒಳ್ಳೆಯದಾಗಲಿ ಎಂಬ ಭಾವವೇ ಇರುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಎಂಥದ್ದೇ ಸಮಯದಲ್ಲೂ ತಮ್ಮ ಬಾಳ ಸಂಗಾತಿಯನ್ನು ಬಿಟ್ಟುಕ“ಡುವುದಿಲ್ಲ. ಸದಾ ಸಂಗಾತಿಯನ್ನು ಕಾಳಜಿ ಮಾಡುತ್ತಾರೆ. ಇವರು ಗಂಭೀರ ಸ್ವಭಾವದವರಾಗಿದ್ದರೂ ಕೂಡ, ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವ ಕಾರಣಕ್ಕೆ, ಗದರಿದರೂ ಅದು ಸಂಬಂಧಿಕರ ಲಾಭಕ್ಕಾಗಿಯೇ ಇರುತ್ತದೆ. ಹಾಗಾಗಿ ವೃಶ್ಚಿಕ ರಾಶಿಯವರು ಉತ್ತಮ ಪತಿಯಾಗಬಲ್ಲರು.
Discussion about this post