ಚಿಕ್ಕಮಗಳೂರು: ಇತ್ತೀಚಿನ ಯುಗದಲ್ಲಿ ಸಾಮಾನ್ಯ ವ್ಯಕ್ತಿಗಳು, ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ತೋರುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಮೂರುವರೆ ವರ್ಷದಲ್ಲಿಯೇ ತನ್ನ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಸಾಧನೆ ತೋರಿದ್ದಾನೆ.
ಚಿಕ್ಕಮಗಳೂರು ತಾಲ್ಲೂಕಿನ ತಿರುಗುಣ ಗ್ರಾಮದ ಪಟೇಲ್ ಹುಚ್ಚೇಗೌಡ ಮತ್ತು ಮಲ್ಲಿಗಮ್ಮ ಅವರ ಮೊಮ್ಮಗ ಹಾಗೂ ಮಧು ಮತ್ತು ಶೃತಿ ದಂಪತಿಯ ಮೂರುವರೆ ವರ್ಷದ ಟಿ.ಎಂ.ಆರುಷ್ ಪಟೇಲ್ ಏಕಕಾಲದಲ್ಲಿ ಬರೋಬ್ಬರಿ ೩೦ ವಾಹನಗಳ ಹೆಸರು, ೧೫ ಹಣ್ಣುಗಳು, ೧೦ ಪಕ್ಷಿಗಳ ಹೆಸರು, ದೇಹದ ವಿವಿಧ ೨೨ ಭಾಗಗಳು, ೧ ರಿಂದ ೨೦ ರವರೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅಂಕಿಸಂಖ್ಯೆಗಳನ್ನು ಹೇಳುವುದು ಮತ್ತು ಬರೆಯುವುದು, ಜೊತೆಗೆ ಕನ್ನಡ, ಆಂಗ್ಲ, ಮತ್ತು ಹಿಂದಿ ಭಾಷೆಯಲ್ಲಿ ತಿಂಗಳು, ದಿನಗಳನ್ನು ಹೇಳುವುದು, ೧೬ ದೇಶಗಳ ರಾಷ್ಟೀಯ ಧ್ವಜಗಳನ್ನು ಗುರುತಿಸಲಿದ್ದಾನೆ. ಈ ಅಪರೂಪದ ಸಾಧನೆಯನ್ನು ಇಂಡಿಯಾ ಬುಕ್ ಆಪ್ ರೆಕಾರ್ಡ್ ಗುರುತಿಸಿ ಪ್ರಮಾಣ ಪತ್ರ ನೀಡಿದೆ.
ಈ ಪುಟ್ಟ ಪೋರನ ಸಾಧನೆಗೆ ಪೋಷಕರು ಹಾಗೂ ಕುಟುಂಬ ವರ್ಗ ನೀರೆರೆದು ಪ್ರೋತ್ಸಾಹಿಸಿದ್ದು ಬುಕ್ ರೆಕಾರ್ಡ್ ದಾಖಲಾಗುವ ಮೂಲಕ ಪೋಷಕರು, ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದು ಇವನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
India Book of Record
























Discussion about this post