ಚಿಕ್ಕಮಗಳೂರು: ಜಾತ್ಯತೀತ ಜನತಾದಳದ ಮುಖಂಡರಾದ ಎಚ್.ಎಚ್.ದೇವರಾಜ್ ಮತ್ತು ಬಿ.ಎಚ್.ಹರೀಶ್ ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಉಮೇಶ್,ಅಜೀಜ್ ಅಹ್ಮದ್, ಶ್ರೀನಿವಾಸ, ಪಿ.ಎಚ್.ರವಿ, ವಾಸುದೇವಶೆಟ್ಟಿ, ಪುಟ್ಟಸ್ವಾಮಿ, ಹಿರೇಗೌಡ ಉಮೇಶ್, ಲೋಕೇಶ್, ಮಾದಯ್ಯ, ಮಲ್ಲಿಕಾರ್ಜುನ, ತನುಜಕುಮಾರ್, ಕಿರಣ್‌ಕುಮಾರ್, ವಸಂತಕುಮಾರ್, ಅಮೀರ್ ಅಹ್ಮದ್, ನಾಗೇಶ್, ಅನಿಲ್‌ಕುಮಾರ್, ಹರೀಶ್, ಜಯಣ್ಣ, ಪ್ರಸನ್ನ, ರವಿಕುಮಾರ್, ಸೋಮಣ್ಣ, ರಮೇಶ್, ಪದೀಪ್‌ಕುಮಾರ್, ವೀರಭದ್ರಶೆಟ್ಟಿ, ಜಗದೀಶ್, ಎಸ್.ಈ.ರವಿ ಕಾಂಗ್ರೆಸ್ ಸೇರಿದ ಪ್ರಮುಖರು. ಪಕ್ಷದ ಬಾವುಟ ನೀಡಿ ಅವರುಗಳನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಸೇರಿದ ಎಚ್.ಎಚ್.ದೇವರಾಜ್ ಮಾತನಾಡಿ, ಜನತಾದಳದಲ್ಲಿ ಜಾತ್ಯತೀತ ನಿಲುವು ಇಲ್ಲವಾಗಿದೆ. ಕೋಮುವಾದಿ ಪಕ್ಷದ ಕೈಗೊಂಬೆಯಾಗಿದ್ದು, ತತ್ವ, ಸಿದ್ಧಾಂತವನ್ನು ಬದಿಗೊತ್ತಲಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಖಾಲಿಮನೆಯಾಗಲಿದೆ ಎಂದು ಹೇಳಿದರು.
ಬಿ.ಎಚ್.ಹರೀಶ್ ಮಾತನಾಡಿ, ಕಾಂಗ್ರೆಸ್ ಸೇರಿದ ಮೇಲೆ ಹೋರಾಡುವ ಶಕ್ತಿ ಬಂದಿದ್ದು, ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದೇ ಮುಖ್ಯಗುರಿಯಾಗಿದೆ. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದರು.
ತರೀಕೆರೆಯ ಗೋಪಿಕೃಷ್ಣ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿಶಾಂತೇಗೌಡ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸುತ್ತೇವೆಂದು ಹೇಳಿದರು.

























Discussion about this post