• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ತಾಜಾಸುದ್ದಿ

Bitcoin Explainer: ಬಿಟ್‌ಕಾಯಿನ್‌ ಎಂದರೇನು? ವಹಿವಾಟು ಹೇಗೆ ನಡೆಯುತ್ತೆ? ಇಲ್ಲಿದೆ ವಿವರ

ಇದು ಭಾರತದ ಬಹುಸಂಖ್ಯಾತ ಜನರಿಗೆ ಇನ್ನೂ ಅಪರಿಚಿತ ವಿಷಯವೇ ಆಗಿದೆ.

Shri News Desk by Shri News Desk
Nov 12, 2021, 11:19 am IST
in ತಾಜಾಸುದ್ದಿ, ರಾಜಕೀಯ, ರಾಜ್ಯ, ವಾಣಿಜ್ಯ, ವಿಜ್ಞಾನ-ತಂತ್ರಜ್ಞಾನ
Bitcoin Cryptocurrency

ಬಿಟ್‌ಕಾಯಿನ್‌ (ಪ್ರಾತಿನಿಧಿಕ ಚಿತ್ರ)

Share on FacebookShare on TwitterTelegram

ಕರ್ನಾಟಕದ ರಾಜಕೀಯ ವಲಯದಲ್ಲಿ ಪ್ರಸ್ತುತ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಿಸಿ-ಬಿಸಿ ಸುದ್ದಿ ಎಂದರೆ ಬಿಟ್‌ ಕಾಯಿನ್ ವಿಷಯ.  ಐರೋಪ್ಯ ರಾಷ್ಟ್ರಗಳಲ್ಲಿ ಸುಮಾರು 2008ರಿಂದ ಪ್ರಾರಂಭವಾದ ಈ ವ್ಯವಹಾರ ಅಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದ್ದು ಬಹುತೇಕ ಪ್ರತಿಶತ 80ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು ಇದರ ವಹಿವಾಟಿನಲ್ಲಿ ತೊಡಗಿದ್ದಾರೆ.  ಆದರೂ ಇದು ಭಾರತದ ಬಹುಸಂಖ್ಯಾತ ಜನರಿಗೆ ಇನ್ನೂ ಅಪರಿಚಿತ ವಿಷಯವೇ ಆಗಿದೆ. ಹಾಗಾದರೆ ಏನಿದು ಬಿಟ್ ಕಾಯಿನ್? ಇದರ ವ್ಯವಹಾರ ಹೇಗೆಲ್ಲಾ ನಡೆಯುತ್ತದೆ? ಇಲ್ಲಿದೆ ವಿವರ.

“ಕ್ರಿಪ್ಟೋ ಕರೆನ್ಸಿ” ಎಂದರೇನು?

ಕರೆನ್ಸಿ ಎಂದರೇನೆಂದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ.  ಸಾಮಾನ್ಯ ಜನರು ಹಣಕಾಸಿನ ವಹಿವಾಟು ನಡೆಸಲು, ಅಂದರೆ ದಿನ ನಿತ್ಯದ ಕೊಡು-ಕೊಳ್ಳುವ ವ್ಯವಹಾರಗಳನ್ನು ಮಾಡಲು ವಿನಿಮಯ ಮಾಡಿಕೊಳ್ಳುವ, ಸರಕಾರದಿಂದ ಅಧಿಕೃತವಾಗಿ ಮುದ್ರಣ ಮಾಡಲಾಗಿರುವ ನೋಟುಗಳು ಹಾಗೂ ನಾಣ್ಯಗಳನ್ನು ನಾವು ಕರೆನ್ಷಿ ಎನ್ನುತ್ತೇವೆ.  ಹಾಗೆಯೇ, ಕ್ರಿಪ್ಟೋ ಕರೆನ್ಸಿ ಎನ್ನುವುದು ಒಂದು ಕಾಲ್ಪನಿಕ ಡಿಜಿಟಲ್‌ ಕರೆನ್ಸಿಯಾಗಿದ್ದು ಒಬ್ಬರಿಂದ ಒಬ್ಬರಿಗೆ ಹಸ್ತಾಂತರ ಮಾಡಲು ಸಾಧ್ಯವಿಲ್ಲದ ಆದರೆ ಅತ್ಯಾಧುನಿಕ ಗಣಕಯಂತ್ರಗಳು ಹಾಗೂ ಮೊಬೈಲ್‌ ಫೋನ್‌ಗಳ ಮುಖಾಂತರ ಒಬ್ಬರು ಇನ್ನೊಬ್ಬರೊಂದಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿರುವ ಕರೆನ್ಸಿಯಾಗಿದೆ.  ಇಂತಹ ಕ್ರಿಪ್ಟೋ ಕರೆನ್ಸಿಗಳು ನೂರಾರು ಸಂಖ್ಯೆಯಲ್ಲಿದ್ದು ಇವುಗಳಲ್ಲಿ ಬಿಟ್‌ ಕಾಯಿನ್‌ ಕೂಡಾ ಒಂದು.  ಹಾಗಾದರೆ, ಇನ್ನಿತರ ಪ್ರಮುಖ ಕ್ರಿಪ್ಟೋಕರೆನ್ಸಿ ಕಾಯಿನ್‌ಗಳು ಯಾವುವೆಂದು ನೋಡುವುದಾದರೆ ಬಿಟ್‌ಕಾಯಿನ್‌ ಕ್ಯಾ‍ಷ್, ಇಥೇರಿಯಮ್, ಲೈಟ್‌ ಕಾಯಿನ್, ರಿಪಲ್‌, ಸ್ಟೆಲ್ಲಾರ್, ಡಾಗಿ ಕಾಯಿನ್‌, ಬಿಎಟಿ (ಬೇಸಿಕ್‌ ಅಟೆನ್ಷನ್ ಟೋಕನ್), ಕಾರ್ಡಾನೋ, ಬಿನಾನ್ಸ್, ಟ್ರಾನ್, ಮೊನೆರೋ, ಝಿ ಕ್ಯಾಷ್‌, ವೇವ್ಸ್‌ ಕಾಯಿನ್‌, ಹಾಗೂ ಹೊರೈಝನ್‌ ಮುಂತಾದವು.  ಇವುಗಳು ಪ್ರಾಥಮಿಕ ಹಂತದಲ್ಲಿ ಬಂದ ಡಿಜಿಟಲ್ ಕರೆನ್ಸಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಡಿಫೈ (ಡಿಸೆಂಟ್ರಲೈಸ್‌ಡ್‌ ಫೈನಾನ್ಸ್) ಕರೆನ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಗೆ ಬರುತ್ತಿದ್ದು ಇವುಗಳ ವ್ಯವಹಾರವು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದ್ದು ಮಾನವ ನಿಯಂತ್ರಣ ಇರುವುದಿಲ್ಲವಾಗಿ ಇವು ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.

ಕ್ರಿಪ್ಟೋಕರೆನ್ಸಿಗಳ ವ್ಯವಹಾರ ಹೇಗೆ ನಡೆಯುತ್ತದೆ?

ಇವುಗಳನ್ನು ಹೊಂದಲು ಅನೇಕ ಮಾರ್ಗಗಳಿದ್ದು ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ.  ಮೊದಲನೆಯ ಮಾರ್ಗವು ಇವುಗಳನ್ನು ‍ಷೇರು ಮಾರುಕಟ್ಟೆಯಲ್ಲಿ ‍ಷೇರುಗಳನ್ನು ಕೊಳ್ಳುವಂತೆ ಇವುಗಳಿಗೇ ನಿಗದಿಯಾದ ಕ್ರಿಪ್ಟೋಕರೆನ್ಸಿ ವಿನಿಮಯ (ಎಕ್ಸ್‌ಛೇಂಜ್‌)ಗಳಿಂದ ಕೊಳ್ಳಬಹುದಾಗಿದೆ. ಎರಡನೆಯ ವಿಧಾನವೆಂದರೆ ಈ ಕ್ರಿಪ್ಟೋಕರೆನ್ಸಿಯ ವ್ಯವಹಾರ ನಡೆಸುವ ಕಂಪನಿಗಳು ತಮ್ಮ-ತಮ್ಮ ಫಾಸೆಟ್‌ಗಳ ಮೂಲಕ ನಿಯಮಿತ ಕಾಲಾವಧಿಗಳಲ್ಲಿ (ಉದಾಹರಣೆಗೆ 15 ನಿಮಿಷ, 30 ನಿಮಿಷ, 60 ನಿಮಿಷ, 24 ಗಂಟೆಗಳಲ್ಲಿ ಇತ್ಯಾದಿ) ಅತಿ ಸಣ್ಣ ಪ್ರಮಾಣದಲ್ಲಿ (ನಲ್ಲಿಯಿಂದ ನೀರು ಒಂದೊಂದೇ ಹನಿ ಬೀಳುವಂತೆ) ಉಚಿತವಾಗಿ ನೀಡುತ್ತವೆ.  ಇದು ಬಹಳ ಕಡಿಮೆಯಾಗಿ ಸಿಗುವುದು ಹಾಗೂ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಳ್ಳುವುದು.  ಮೂರನೆಯ ವಿಧಾನವೆಂದರೆ ಕ್ರಿಪ್ಟೋಕರೆನ್ಸಿಗಳ ಮೈನಿಂಗ್‌ (ಯಾಂತ್ರಿಕ ಗಣಿಗಾರಿಗೆ).  ಈ ವಿಧಾನದಲ್ಲಿ ಅನೇಕ ಬಗೆಯ ಯೋಜನೆಗಳಿದ್ದು ಅವುಗಳನ್ನು ಕೊಂಡುಕೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಸಂಪಾದಿಸಬಹುದಾಗಿದೆ.  ಇವುಗಳೆಲ್ಲವನ್ನೂ ನಿಯಂತ್ರಿಸಲು “ಬ್ಲಾಕ್‌ಚೈನ್‌” ಎಂಬ ವ್ಯವಸ್ಥೆಯಿದ್ದು ಸಂಪೂರ್ಣ ವ್ಯವಹಾರಗಳಿಗೆ ಇದರ ಅನುಮೋದನೆ ಬೇಕಾಗುತ್ತದೆ.

ಇದರಲ್ಲಿ ವ್ಯವಹಾರ ಮಾಡುವವರು ಪ್ರತ್ಯೇಕ ಕಾಯಿನ್‌ಗಳಿಗೆ ಪ್ರತ್ಯೇಕ ವಾಲೆಟ್‌ಗಳನ್ನು (ಒಂದು ರೀತಿ ನಮ್ಮ ಹಣದ ಪರ್ಸ್‌ಗಳಿಗೆ ಹೋಲಿಸಬಹುದಾಗಿದೆ) ಸ್ಥಾಪಿಸಿಕೊಳ್ಳಬೇಕಾಗಿದ್ದು ಅದಕ್ಕೆ ಕೊಡಲಾಗಿರುವ ಅವರಿಗೆಂದೇ ನಿಗದಿಯಾದ 64 ಸಂಖ್ಯೆಗಳ (ಅಂಕೆಗಳು ಹಾಗೂ ಇಂಗ್ಲಿಷ್ ಅಕ್ಷರಗಳಿಂದ ಕೂಡಿದ) ವಾಲೆಟ್‌ ಅಡ್ರೆಸ್‌ (ವಿಳಾಸ) ನೀಡಲಾಗಿರುತ್ತದೆ.  ಇದರಲ್ಲಿ ವ್ಯವಹಾರ ನಡೆಸುವವರು ಬೇರೆಯವರ ವಾಲೆಟ್‌ಗಳಿಗೆ ಕಾಯಿನ್‌ಗಳನ್ನು ವರ್ಗಾಯಿಸಬಹುದಾಗಿದೆ ಹಾಗೂ ಇತರರಿಂದ ಕಾಯಿನ್‌ಗಳನ್ನು ಪಡೆಯಬಹುದಾಗಿರುತ್ತದೆ.  ಇದು ಸ್ಥೂಲವಾಗಿ  ಕ್ರಿಪ್ಟೋಕರೆನ್ಸಿಗಳ ವ್ಯವಹಾರದಲ್ಲಿ ನಡೆಯುವ ಪ್ರಮುಖ ಘಟ್ಟಗಳು.  ಇದಕ್ಕಿಂತ ಮುಖ್ಯವಿಚಾರವೆಂದರೆ ಇವುಗಳಲ್ಲಿ ಕೆಲವು ಕಾಯಿನ್‌ಗಳಿಗಿರುವ ಲಕ್ಷಾಂತರ ರೂಪಾಯಿಗಳ ಅಗಾಧ ಮೌಲ್ಯ.  ಉದಾಹರಣೆಗೆ ಒಂದು ಬಿಟ್‌ಕಾಯಿನ್‌ನ ಇಂದಿನ ಮಾರುಕಟ್ಟೆಯ ಬೆಲೆ ಸುಮಾರು 48,37,813/= (ನಲವತ್ತೆಂಟು ಲಕ್ಷದ ಮೂವತ್ತೇಳು ಸಾವಿರದ ಎಂಟು ನೂರ ಹದಿಮೂರು ರೂಪಾಯಿಗಳು).  ಬಹತೇಕ ಜನರು ಜೀವಮಾನಪೂರಾ ದುಡಿದರೂ ದುಡಿಯಲಾಗದ ಮೊತ್ತವಿದು.  ಇದರಿಂದಾಗಿಯೇ, ಇದು ಇಂದು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯವಾಗಿದೆ.

ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಬಿಟ್‌ಕಾಯಿನ್?

ರಾಜ್ಯದ ರಾಜಕೀಯಕ್ಕೆ ಬಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರವಿದ್ದಾಗ ಬಂಧಿತನಾಗಿದ್ದ ಶ್ರೀಕೃಷ್ಣ ಎನ್ನುವ ಹ್ಯಾಕರ್‌ ಒಬ್ಬನಿಂದ ಬಹಿರಂಗಗೊಂಡ ವಿ‍ಷಯಗಳಿಂದ ಇದು ಮುನ್ನೆಲೆಗೆ ಬಂದಿತು.  ಇವನು ಕ್ರಿಪ್ಟೋಕರೆನ್ಸಿ ಸಂಸ್ಥೆಗಳ ಸರ್ವರ್‌ಗಳನ್ನೇ ಹ್ಯಾಕ್‌ ಮಾಡಿ ಸುಮಾರು 21 ಬಿಟ್‌ಕಾಯಿನ್‌ಗಳನ್ನು ವಾಮಮಾರ್ಗದಲ್ಲಿ ಸಂಪಾದಿಸಿದ್ದನೆಂಬುದು ಬಹಿರಂಗಗೊಂಡಿತಲ್ಲದೇ ಇವನೊಂದಿಗೆ ಕೆಲ ಪ್ರತಿಷ್ಠತ ರಾಜಕಾರಣಿಗಳ ಮಕ್ಕಳೂ ಭಾಗಿಯಾಗಿದ್ದಾರೆಂಬ ಸುದ್ದಿಯಾಯಿತು.  ಇದೇ ವಿಚಾರದಲ್ಲಿ ಸದ್ಯ ಕರ್ನಾಟಕದ ರಾಜಾಕಾರಣಿಗಳು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದು ಸಾರ್ವಜನಿಕರ ಕುತೂಹಲ ಕೆರಳಿಸಿದೆ.  ಕೇಂದ್ರ ತನಿಖಾ ಸಂಸ್ಥೆಗಳು ಇದರ ತನಿಖೆ ನಡೆಸುತ್ತಿದ್ದು ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕಿದೆ.

kannada explainer detailing how Cryptocurrency and Bitcoin technology work

ಇದನ್ನೂ ಓದಿ: ಅಜಿತ್‌ ಪವಾರ್‌ಗೆ ನಂಟು ಹೊಂದಿರುವ ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ವಶ

ಇದನ್ನೂ ಓದಿ:  Bribery: ಎನ್​ಸಿಬಿ ಅಧಿಕಾರಿಗಳ ವಿರುದ್ಧ 25 ಕೋಟಿ ರೂ. ಲಂಚದ ಆರೋಪ

Tags: Bit CoinCryptocurrencyKarnataka PoliticsTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In