ಕರ್ನಾಟಕ ಸರ್ಕಾರವು ಜನಸೇವಕ ಹಾಗೂ ಜನಸ್ಪಂದನೆ ಎನ್ನುವ ಎರಡು ಹೊಸ ಸೇವೆಗಳನ್ನು ಜಾರಿ ಮಾಡಿವೆ. ಸರ್ಕಾರದ ಯೋಜನೆಗಳು, ಸೌಲಭ್ಯಗಳು ಜನರ ಮನೆಯ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಸೇವೆ ಒದಗಿಸಿದೆ. ಹಾಗಾದರೆ, ಜನಸೇವಕ ಅಂದರೇನು, ಜನಸ್ಪಂದನ ಅಂದರೆ ಏನು ತಿಳಿಯೋಣ ಬನ್ನಿ.
ಜನಸೇವಕದಲ್ಲಿ 56 ಸೇವೆ
ಸರ್ಕಾರದ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ದೊರಕಿಸುವುದೇ ಜನಸವೇಕ ಯೋಜನೆ. ಇದನ್ನು ಮನೆಯಲ್ಲೇ ಕೂತು ಮೊಬೈಲ್ ಆಪ್, ವೆಬ್ ಸೈಟ್ ಹಾಗೂ ಕಾಲ್ ಸೆಂಟರ್ ನೆರವಿನಿಂದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು. 56 ಸರ್ಕಾರಿ ಯೋಜನೆ ಅಥವಾ ಸೇವೆಗಳು ಜನಸೇವಕ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ಜಾತಿ ದೃಢೀಕರಣಪತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಆರೋಗ್ಯ ಕಾರ್ಡ್, ಪಡಿತರ ಚೀಟಿ, ಆಸ್ತಿ ಖಾತೆಗಳು ವರ್ಗಾವಣೆ ಮುಂತಾದವುಗಳು ಸೇರಿವೆ.
ಹೇಗೆ ಕೆಲಸ ಮಾಡುತ್ತದೆ
ಜನಸೇವಕ ಸೇವೆ ಜನ ಸಾಮಾನ್ಯರ ಮನವಿಯ ಆಧಾರದ ಮೇಲೆ ಸೇವೆ ಒದಗಿಸಲಾಗುತ್ತದೆ. ಇದರ ವೆಬ್ ಸೈಟ್-www.janasevaka.karnataka.gov.in ಅಥವಾ ಕಾಲ್ ಸೆಂಟರ್ ಸಂಖ್ಯೆ 080-4455 4455 ಮೂಲಕ ಸೇವೆಯ ಲಾಭ ಪಡೆಯಬಹುದು. ಮೊಬೈಲ್ ಒನ್ ಎನ್ನುವ ಆ್ಯಪ್ನಲ್ಲಿಯೂ ಸೇವೆ ಲಭ್ಯ. ಪ್ರತಿ ಮನವಿಗೂ ಒಂದೊಂದು ಒಟಿಪಿ ಸಂಖ್ಯೆ ಬರಲಿದೆ.
ಜನಸೇವಕ ಫೀ ಕೇವಲ 115 ರೂ ಮಾತ್ರ. ಮನವಿ ಸಲ್ಲಿಸಿದ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ, ಅಗತ್ಯ ಪ್ರಮಾಣಪತ್ರ, ಮಾಹಿತಿ ಪಡೆದು ನಾಗರಿಕರ ಮನೆ ಬಾಗಿಲಿಗೆ ತಲುಪಿಸುತ್ತದೆ ಎನ್ನುತ್ತಾರೆ ಯೋಜನ ನಿರ್ದೇಶಕ ವರಪ್ರಸಾದ್ ರೆಡ್ಡಿ. ಈಗಾಗಲೇ ನಗರ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಿದೆ, ನವೆಂಬರ್ 1ರಿಂದ ಎಲ್ಲಾ 28 ವಿಧಾನಸಭ ಕ್ಷೇತ್ರಗಳಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಜನಸ್ಪಂದನೆಯಲ್ಲಿ 600 ಯೋಜನೆ
ಜನರ ಕುಂದುಕೊರೆತಗಳನ್ನು ಆಲಿಸುವ ಸೇವೆ. ಯೋಜನೆಗಳಲ್ಲಿರುವ ಲೋಪ-ದೋಷ, ಸಮಸ್ಯೆಗಳನ್ನು ತಿಳಿದು ಸರಿಪಡಿಸುವುದು ಇದರ ಮೂಲ ಉದ್ದೇಶ. ಜನಸ್ಪಂದನೆಗೆ ಪ್ರತ್ಯೇಕ ಕಾಲ್ ಸೆಂಟರ್ ಇದೆ. 1902 ಕರೆ ಮಾಡಿ ಕುಂದು-ಕೊರತೆ, ದೂರುಗಳನ್ನು ದಾಖಲಿಸಬಹುದು. ಇದು 24/7 ಗಂಟೆ ಸೇವೆಗೆ ಲಭ್ಯ. ಜನಸ್ಪಂದನೆಯಲ್ಲಿ ಸುಮಾರು 600 ಯೋಜನೆಗಳು ಅದಕ್ಕೆ ಸಂಬಂಧಿಸಿದ ಸೇವೆಗಳು ಲಭ್ಯ. ಇ. ಆಡಳಿತ ಸೇವೆ ಎರಡು ತಿಂಗಳ ಹಿಂದೆ ಈ ಸೇವೆಯನ್ನು ಲೋಕಾರ್ಪಣೆ ಮಾಡಿತು. ಗೂಗಲ್ ಪ್ಲೇ ಸ್ಟೋರ್ ಮೂಲಕ ಐಪಿಜಿಆರ್ ಎಸ್ ಆಪ್ ದೊರೆಯಲಿದೆ. ಇದರಲ್ಲಿ ಜನಸ್ಪಂದನೆ ಅನಾವರಣಗೊಳ್ಳಲಿದೆ. ಈಗಾಗಲೇ ಇದು 5ಕ್ಕೆ 3.3 ರೇಟಿಂಗ್ ಹೊಂದಿದೆ.
Karnataka Govt Implements Janasevaka Janaspandana Schemes
‘ಜನಸೇವಕ’ದ ಮೂಲಕ ವೃದ್ಧಾಪ್ಯ ವೇತನ ಪಡೆಯಲು ವೃದ್ಧೆಯೊಬ್ಬರಿಗೆ ಸಹಕರಿಸಿದ ಜನಸೇವಕ ಸಿಬ್ಬಂದಿ.. ಸಂತಸವನ್ನು ಹಂಚಿಕೊಂಡ ಫಲಾನುಭವಿ ಅಜ್ಜಿ.#ಜನಸೇವಕ #Janasevaka pic.twitter.com/BhQ6oAaVWl
— Janasevaka _08044554455 (@Janasevaka0) November 4, 2021
ಇದನ್ನೂ ಓದಿ: Greeting: ಕೂ ಆಪ್‌ನಲ್ಲಿ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಗಣ್ಯರು

























Discussion about this post