• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಜ್ಯೋತಿಷ್ಯ: ಈ ವಾರ ನಿಮ್ಮ ಗ್ರಹಗತಿಗಳು ಹೇಗಿವೆಯೆಂದು ತಿಳಿಯುವ ಕುತೂಹಲವೇ? ವಾರಭವಿಷ್ಯ ನೋಡಿ

ನವೆಂಬರ್ 13, 2021ರಿಂದ ನವೆಂಬರ್ 20, 2021ರವರೆಗಿನ ವಿವಿಧ ರಾಶಿಗಳಲ್ಲಿ ಜನಿಸಿದವರ ವಾರಭವಿಷ್ಯ

Shri News Desk by Shri News Desk
Nov 14, 2021, 02:02 pm IST
in ಆಧ್ಯಾತ್ಮ, ಭವಿಷ್ಯ
Weekly Moon Sign Predictions

ವಾರ ಭವಿಷ್ಯ

Share on FacebookShare on TwitterTelegram

ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.

ಮೇಷರಾಶಿ:  ಈ ವಾರ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳೆಲ್ಲವೂ ಜರುಗುವ ಪರಿಸ್ಥಿತಿ/ಸಾಧ್ಯತೆ ಗೋಚರವಾಗುತ್ತಿದೆ. ಹಣಕಾಸಿನ  ಸ್ಥಿತಿ ಬಹಳ ಸುಧಾರಣೆಯಾಗುತ್ತದೆ. ಮನಸ್ಸಿಗೆ ತುಂಬಾ ಸಂತೋಷ ಕೊಡುವ ವಾರ ಇದಾಗಿದೆ.  ಉದ್ಯೋಗ, ವ್ಯಾಪಾರ, ಭೂಮಿಗೆ ಸಂಬಂಧಿಸಿದ ವಿಚಾರಗಳು, ಹಾಗೂ ಹಣಕಾಸಿನ ಹೂಡಿಕೆಗೆ ಇದು ಸಕಾಲ.  ಕೇತು ಗ್ರಹದ ಆರಾಧನೆ ಹಾಗೂ ಅಶ್ವತ್ಥನಾರಾಯಣನ ಪೂಜೆ ಮಾಡಿದರೆ ಇನ್ನೂ ಉತ್ತಮ ಫಲಿತಾಂಶ ನೋಡಲಿದ್ದೀರಿ.

ವೃಷಭರಾಶಿ: ಭಾಗ್ಯದಲ್ಲಿ ಗುರು ಮತ್ತು ಶನಿಗಳ ವಿಶೇಷ ಫಲ ಇರುವುದರಿಂದ ಮಾಡುವ ಪ್ರಯತ್ನಗಳಲ್ಲಿ ಸಫಲತೆ ಕಾಣುತ್ತದೆ.  ಮನಸ್ಸಿಗೆ ಸ್ವಲ್ಪ ನೆಮ್ಮದಿಯ ವಾತಾವರಣ ಉಂಟಾಗುತ್ತದೆ.  ಹಣ ಬಂದರೂ ಕೈಯಲ್ಲಿ ಉಳಿಯದೆ ಖರ್ಚು ಉಂಟಾಗುತ್ತದೆ.  ಆದರೂ ನಿಮಗೆ ಬೇಕಾದ ಹಣದ ವ್ಯವಸ್ಥೆಯಾಗುತ್ತದೆ. ಒಳ್ಳೆಯ ನಿದ್ರೆ ಮಾಡಿ, ಉಷ್ಣಪದಾರ್ಥಗಳ ಸೇವನೆ ಕಡಿಮೆ ಮಾಡಿ. ವಾಹನ ಓಡಿಸುವಾಗ ಎಚ್ಚರಿಕೆಯಿರಲಿ.  ರಾಹು ಮತ್ತು ಕೇತು ಆರಾಧನೆ, ಅಶ್ವತ್ಥನಾರಾಯಣನ ಆರಾಧನೆ ಮಾಡಿ.

ಮಿಥುನರಾಶಿ: ಮಾಡುವ ಎಲ್ಲಾ ಪ್ರಯತ್ನಗಳಲ್ಲಿ ಅಡೆ-ತಡೆಯಿದೆ.  ಆದರೂ ಎಲ್ಲವನ್ನೂ ಧೈರ್ಯದಿಂದ ಮಾಡುವ ಛಲ ಬರುತ್ತದೆ. ಹಣಕಾಸು ತುಂಬಾ ಖರ್ಚಾಗುತಾದೆ. ಮಕ್ಕಳ ಬಗ್ಗೆ ಸ್ವಲ್ಪ ಗಮನ ಕೊಡಿ.  ನಿಮ್ಮ ಆರೋಗ್ಯದ ಬಗ್ಗೆಯೂ ಎಚ್ಚರ ವಹಿಸಿ. ಗುರು ಮತ್ತು ಶನಿಯ ಆರಾಧನೆ ಮಾಡಿ, ಸ್ವಲ್ಪ ಉತ್ತಮವಾಗುತ್ತದೆ.

ಕಟಕರಾಶಿ: ತಾಯಿಯ ಬಗ್ಗೆ ಮತ್ತು ಮಕ್ಕಳ ಬಗ್ಗೆ ಚಿಂತೆ ಈ ವಾರವೂ ಮುಂದುವರೆಯುತ್ತದೆ.  ಹಣ ವ್ಯಯದಿಂದ ಸ್ವಲ್ಪ ಚಿಂತೆ. ಮನಸ್ಸಿಗೆ ಅಲ್ಪ ಸಮಾಧಾನ. ರಾಹುವಿನ ಅನುಗ್ರಹದಿಂದ ಬಯಸಿದ ಕಾರ್ಯಕ್ಕೆ ಹಣ ಬಂದು ಸೇರುತ್ತದೆ. ಚಂದ್ರ ಜಪ, ಶಿವನ ಆರಾಧನೆ ಮಾಡಿ.

ಸಿಂಹರಾಶಿ: ಈ ವಾರವೂ ಉತ್ತಮ ಪರಿಸ್ಥಿತಿ ಗೋಚರವಾಗುತ್ತಿದೆ. ಉದ್ಯೋಗ, ವ್ಯಾಪಾರ, ಹಾಗೂ ಭೂಮಿ ಕ್ಷೇತ್ರಗಳಲ್ಲಿ ಉತ್ತಮ ಆದಾಯ ಬರುವ ಸಾಧ್ಯತೆಯಿದೆ.  ಮಕ್ಕಳಿಂದ ಸುಖವಿದೆ.  ಶುಭ-ಮಂಗಳ ಕಾರ್ಯಗಳಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಗುರು ಮತ್ತು ಶನಿಯ ಅರಾಧನೆ ಮಾಡಿ.

ಕನ್ಯಾರಾಶಿ: ಮಾಡುವ ಎಲ್ಲಾ ಕಾರ್ಯಗಳಲ್ಲಿ ಮಧ್ಯಮ ಪ್ರಗತಿ. ಮಕ್ಕಳ ವಿಚಾರದಲ್ಲಿ ಏನೋ ತೊಂದರೆ-ಚಿಂತೆ ಬರುತ್ತದೆ. ಬಹಳ ಚಿಂತೆಯಿಂದ ಈ ವಾರ ಅಸಂತೋಷ ಉಂಟಾಗುತ್ತದೆ.  ಆದ್ದರಿಂದ ಬರುವ ಎಲ್ಲಾ ಸಂಗತಿಗಳನ್ನೂ ಬಹಳ ಸಮಾಧಾನದಿಂದ ಸ್ವೀಕರಿಸಿ. ಆದರೂ ರಾಹುವಿನ ಬಲದಿಂದ ನಿಮಗೆ ಬೇಕಾದ ಹಣಕಾಸಿನ ವ್ಯವಸ್ಥೆಯಾಗುತ್ತದೆ. ಚಂದ್ರ ಮತ್ತು ಶಿವನ ಆರಾಧನೆ ಮಾಡಿ.

ತುಲಾರಾಶಿ: ಈ ವಾರ ಅಷ್ಟೊಂದು ಶುಭವಾಗಿಲ್ಲ.  ತಾಯಿ ಮತ್ತು ಮಕ್ಕಳ ಬಗ್ಗೆ ಚಿಂತೆ ಬರುತ್ತದೆ.  ಹಣಕಾಸಿನ ಖರ್ಚು ಅಧಿಕವಾಗುತ್ತದೆ.  ಉದ್ಯೋಗ, ವ್ಯಾಪಾರ, ಹಾಗೂ ಭೂಮಿಯಿಂದ ಅಲ್ಪ ಲಾಭವಿದೆ. ರವಿ, ಬುಧ, ಹಾಗೂ ಮಂಗಳ ಗ್ರಹಗಳ ಜಪ ಮಾಡಿ. ನವಗ್ರಹಗಳಿಗೆ ಪ್ರತಿನಿತ್ಯ ನಮಸ್ಕಾರ ಮಾಡಿ. ಶ್ರೀಗಂಧ ಧಾರಣೆ ಮಾಡಿ.

ವೃಶ್ಚಿಕರಾಶಿ: ಇರುವ ಹಣವೆಲ್ಲಾ ಖರ್ಚಾಗಿ ಸ್ವಲ್ಪ ಹಣದ ಮುಗ್ಗಟ್ಟು ಬರುವ ಸಾಧ್ಯತೆಯಿದೆ. ಗಂಡ-ಹೆಂಡತಿಯರಲ್ಲಿ ಖರ್ಚು ಮಾಡುವಲ್ಲಿ ಸಾಮ್ಯತೆ, ಒಬ್ಬರಿಗೊಬ್ಬರು ಚಿಂತನೆ-ಸಮಾಲೋಚನೆ ಮಾಡಿ ಖರ್ಚು ಮಾಡಿ. ನಿಮ್ಮ ಬಹುದಿನದ ಆಸೆಯೊಂದು ಈಡೇರುವ ಸಾಧ್ಯತೆಯಿದೆ. ರವಿ ಜಪ ಮತ್ತು ಅರಳಿ ಕಟ್ಟೆ ಪೂಜೆ ಮಾಡಿ.

ಧನಸ್ಸುರಾಶಿ: ಉದ್ಯೋಗ ಸಂಬಂಧ ಪ್ರಯತ್ನಗಳು ಉತ್ತಮ. ಕೆಲಸದಲ್ಲಿ ಶುಭ ಸುದ್ದಿ ಬರುತ್ತದೆ. ವಿದ್ಯಾಭ್ಯಾಸ ಮಾಡುವವರಿಗೆ ಉತ್ತಮ ರೀತಿಯಲ್ಲಿ ಸಾಗುತ್ತದೆ. ಭೂಮಿ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ. ಸೋಮವಾರ ಶಿವನ ಆರಾಧನೆ ಮಾಡಿ. ಅರಳಿ ಕಟ್ಟೆ ಪೂಜೆ ಮಾಡಿ.

ಮಕರರಾಶಿ: ಮಾಡುವ ಶುಭಕಾರ್ಯಗಳಿಗೆ ಸ್ವಲ್ಪ ಅಡ್ಡಿ ಬರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಅವರಿಗೆ ಏನಾದರೂ ಮಾಡುವ ಆಲೋಚನೆ. ಹಣಕಾಸಿನ ಚಿಂತೆ. ಮನಸ್ಸಿಗೆ ಅಲ್ಪ ಸಮಾಧಾನ ಉಂಟಾಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮತ್ತು ಭೂಮಿಗೆ  ಸಂಬಂಧಿಸಿದ ಕೆಲಸಗಳು ಉತ್ತಮ. ಶನಿ ಮತ್ತು ಗುರು ಗ್ರಹರ ಜಪ ಮಾಡುವುದರಿಂದ ಉತ್ತಮ ಫಲಗಳು ದೊರೆಯಲಿವೆ.

ಕುಂಭರಾಶಿ: ನೀವು ಅಂದುಕೊಂಡಂತೆಯೇ ಎಲ್ಲಾ ನಡೆಯುತ್ತಿದ್ದರೂ ಸ್ವಲ್ಪ ಅನುಮಾನ ಹಾಗೂ ಚಿಂತೆ ಎದ್ದು ಕಾಣುತ್ತದೆ. ಕೆಲಸಗಳು ಚೆನ್ನಾಗಿ ಆದರೂ ಅವುಗಳಲ್ಲಿ ಸ್ವಲ್ಪ ಲೋಪ-ದೋಷಗಳುಂಟಾಗಿ ಅವುಗಳನ್ನು ಸರಿಪಡಿಸಲು ಮರುಪ್ರಯತ್ನಗಳು ನಡೆಯುತ್ತವೆ. ತಾಯಿಯ ಬಗ್ಗೆ ಚಿಂತೆ ಬರುತ್ತದೆ. ಗುರು ಮತ್ತು ಶನಿಯ ಜಪಗಳನ್ನು ಮಾಡಿದರೆ ಉತ್ತಮವಾಗುತ್ತದೆ.

ಮೀನರಾಶಿ: ಮಾಡುವ ಎಲ್ಲಾ ಕಾರ್ಯಗಳಲ್ಲಿ ಜಯವಾಗತ್ತದೆ. ಹಣಕಾಸಿನ ಸ್ಥಿತಿ ಸುಧಾರಣೆಯಾಗುತ್ತದೆ. ಹಿರಿಯರಿಂದ ಗೌರವ ಲಭಿಸುತ್ತದೆ. ಆದರೂ ಮನಸ್ಸಿಗೆ ಏನೋ ಕೊರತೆ ಮತ್ತು ಅಸಮಾಧಾನ ಕಾಡುತ್ತದೆ. ಚಂದ್ರಜಪ ಮತ್ತು ಸೋಮವಾರ ಶಿವನ ಆರಾಧನೆ ಮಾಡಿದರೆ ಉತ್ತಮ.

Ramakrishna-Gunjur
ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರು. ಮೊಬೈಲ್ ಸಂಖ್ಯೆ: 98806 98049

Know what your stars and planets are foretelling about your future this week

ಇದನ್ನೂ ಓದಿ: Opinion: ಜ್ಯೋತಿಷ್ಯ ಎಂದರೆ ಬೆಳಕಿನ ಆಟ

ಇದನ್ನೂ ಓದಿ: ಮನುಜ ಮತ -ವಿಶ್ವ ಪಥ, ಭಾವೈಕ್ಯತೆ ಸಂದೇಶ ಸಾರಿದ ಕುವೆಂಪು

Tags: #Weekly PredictionsAstrologyTOP NEWS
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In