ಬೆಂಗಳೂರು: ತಮಿಳುನಾಡು-ಕರ್ನಾಟಕ ನಡುವೆ ಸ್ಥಗಿತವಾಗಿದ್ದ ಬಸ್ ಸೇವೆಗಳು ಮತ್ತೆ ಪ್ರಾರಂಭವಾಗಲಿದೆ ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಿಸಿದೆ. ಚನ್ನೈ, ತಿರುವೆಲ್ಲೂರ,ಕಂಚಿ ಸೇರಿದಂತೆ ಬಸ್ ಸಂಚಾರವನ್ನು ಇದೇ ಸೋಮವಾರದಿಂದ ಚಾಲನೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೊದಲ ಹಂತದಲ್ಲಿ ೨೫೦ ಬಸ್ ರಸ್ತೆ ಸಂಚಾರ ಪ್ರಾರಂಭಿಸಲಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ವ್ಯವಸ್ಥೆ ಕೈಗೊಳ್ಳಲಿದೆ. ಕೊರೊನಾ ಎರಡನೆ ಅಲೆಯಿಂದಾಗಿ ಏಪ್ರಿಲ್ ನಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಮತ್ತೆ ಸಂಚರಿಸುವ ಬಸ್ ಗಳಲ್ಲಿನ ನಿರ್ವಾಹಕರು, ಚಾಲಕರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಪ್ರಯಾಣಿಕರು ಸಹ ನಿಯಮಗಳ ಅನುಸಾರ ಪ್ರಯಾಣಿಸಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ.

























Discussion about this post