ಬೆಂಗಳೂರು: ಕರ್ನಾಟಕ ಸಿವಿಲ್ ಕೋರ್ಟ್ ಆಕ್ಟ್ ನ ಸೆಕ್ಷನ್ 28 (3) (ಎ) ಮತ್ತು (ಬಿ) ಅಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಹೈಕೋರ್ಟ್ ದಿನಾಂಕ 24.12.2021 ರಿ೦ದ 1.1.2022ರ ವರೆಗೆ ರಾಜ್ಯದ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ ಚಳಿಗಾಲದ ರಜೆ ಘೋಷಿಸಿದೆ.
ಕಳೆದ ಸಾಲಿನಲ್ಲಿ ಹೊಸ ವರ್ಷದ ಆರಂಭದ ದಿನ ಅಂದರೆ ದಿನಾಂಕ 1.1.2021 ರಂದು ಮಾನ್ಯ ಕನಾ೯ಟಕ ಹೈಕೋರ್ಟ್ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿತ್ತು. ಆದರೆ ಈ ಬಾರಿ ಹೊಸ ವರ್ಷದ ಪ್ರಾರಂಭದ ದಿನ ಸಾರ್ವತ್ರಿಕ ರಜೆ ಘೋಷಿತವಾಗಿಲ್ಲ.
2022 ನೆಯ ಹೊಸ ವರ್ಷದ ಪ್ರಾರಂಭದ ದಿನ ಅಂದರೆ ದಿನಾಂಕ 1.1.2022 ರಂದು ರಾಜ್ಯದ ನ್ಯಾಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸಿವಿಲ್ ನ್ಯಾಯಾಲಯಗಳ ಪೈಕಿ ರಜಾ ಕಾಲೀನ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲಿವೆ. ರಾಜ್ಯಾದ್ಯಂತ ನ್ಯಾಯಾಲಯದ ಕಚೇರಿಗಳಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.
2021 ನೆಯ ಸಾಲಿನ ಚಳಿಗಾಲದ ರಜೆ ದಿನಾಂಕ 1.1.2022 ರಂದು ಕೊನೆಗೊಳ್ಳಲಿದ್ದು ದಿನಾಂಕ 2.1.2022 ಭಾನುವಾರ ಆಗಿರುವುದರಿಂದ ದಿನಾಂಕ 3.1.2022 ರಂದು ರಾಜ್ಯಾದ್ಯಂತ ಸಿವಿಲ್ ನ್ಯಾಯಾಲಯಗಳು ಪುನರಾರಂಭಗೊಳ್ಳಲಿವೆ.
No universal leave for courts
























Discussion about this post