Pahalgam Updates: ಕಳೆದೆರಡು ದಿನಗಳ ಹಿಂದಷ್ಟೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು, 27 ಜನ ಸಾವನ್ನಪ್ಪಿದ್ದಾರೆ. ಕರ್ನಾಟಕದ ಇಬ್ಬರು ಈ ದಾಳಿಯಲ್ಲಿ ಸಾವನ್ನಪ್ಪಿದ್ದು, ಸರ್ಕಾರಿ ಗೌರವ ನೀಡಿ, ಅವರ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇನ್ನು ಈ ದಾಳಿಗೆ ಪ್ರತೀಕಾರವಾಗಿ, ಭಾರತ ಸರ್ಕಾರ ಐವರು ಉಗ್ರರ ಮನೆಯನ್ನು ಧ್ವಂಸ ಮಾಡಿದೆ. ನಿನ್ನೆಯಷ್s ಇಬ್ಬರು ಉಗ್ರರ ಮನೆಯನ್ನು ಧ್ವಂಸ ಮಾಡಿದ್ದು, ಇಂದು ಮಹಮ್ಮದ್ ಅನಸ್ ಎಂಬ ಉಗ್ರನ ಮನೆಯನ್ನು ಉಡೀಸ್ ಮಾಡಲಾಗಿದೆ. ಅನಸ್ 2018ರಲ್ಲೇ ಉಗ್ರವಾದಿಯಾಗಿ, ಪಾಕಿಸ್ತಾನಕ್ಕೆ ಹೋಗಿದ್ದ. ಇದೀಗ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಆತನ ಕೈವಾಡವೂ ಇದೆ ಎಂದು ಶಂಕಿಸಲಾಗಿದ್ದು, ಆತನ ಮನೆಯನ್ನು ಧ್ವಂಸ ಮಾಡಲಾಗಿದೆ.
ಭಾರತದಲ್ಲಿ ಎಷ್ಟು ಪಾಕಿಸ್ತಾನಿಗಳಿದ್ದಾರೆ..?
ಪಹಲ್ಗಾಮ್ ದಾಳಿಯ ಬಳಿಕ, ಪಾಕಿಸ್ತಾನದಲ್ಲಿರುವ ಭಾರತೀಯರನ್ನು ಭಾರತಕ್ಕೆ ಬರುವಂತೆ ಸೂಚಿಸಲಾಗಿದ್ದು, ಭಾರತದಲ್ಲಿರುವ ಪಾಕಿಸ್ತಾನಿಗಳಿಗೂ ಗೇಟ್ ಪಾಸ್ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಎಷ್ಟು ಜನ ಪಾಕಿಸ್ತಾನಿಗಳಿದ್ದಾರೆಂದು ನೋಡಿದಾಗ, 14 ಸಾವಿರ ಪಾಕಿಗಳು ಭಾರತದಲ್ಲಿ ವಾಸವಿರುವುದು ತಿಳಿದು ಬಂದಿದೆ. ಇನ್ನು ಪಾಕಿಸ್ತಾನದಿಂದ 200ಕ್ಕೂ ಹೆಚ್ಚು ಭಾರತೀಯರನ್ನು ಕರೆಯಿಸಿಕಳ್ಳಲಾಾಗಿದೆ.
ಪಾಕಿಸ್ತಾನಿಗಳಿಗೆ ಚಿಕಿತ್ಸೆಗಾಗಿ ದೊರೆಯಲಿದೆ ವೀಸಾ..
ಭಾರತಕ್ಕೆ ಬಂದು ಚಿಕಿತ್ಸೆ ಪಡೆಯಬೇಕು ಎಂದಿಗೂ ಪಾಕಿಸ್ತಾನಿಗಳಿಗೆ ವೈದ್ಯಕೀಯ ವೀಸಾ ನೀಡಲಾಗುತ್ತದೆ. 3 ತಿಂಗಳಿಗಾಗಿ ಇದ್ದು ಹೋಗುವವರಿಗೆ ವಿಸಿಟರ್ಸ್ ವೀಸಾ ಇರುತ್ತದೆ. ಸಿಖರು ಧಾರ್ಮಿಕ ಕಾರ್‌ಯಗಳಿಗಾಗಿ ಭಾರತಕ್ಕೆ ಬರಲು ಯಾತ್ರಾರ್ಥಿ ವೀಸಾ ಪಡೆಯುತ್ತಾರೆ.
ಪ್ರಧಾನಿ ಮೋದಿ ಅವರ ಬೆಂಬಲಕ್ಕಿದೆ ಹಲವು ರಾಷ್ಟ್ರಗಳು
ಪಹಲ್ಗಮ್ ನಲ್ಲಿ ನಡೆದ ದಾಳಿಯನ್ನು ಅಮೆರಿಕ, ರಷ್ಯಾ, ಇಸ್ರೇಲ್ ಸೇರಿ ಹಲವು ರಾಷ್dರಗಳು ವಿರೋಧಿಸಿದೆ. ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಮಾತನಾಡಿ, ಹಮಾಸ್ ಉಗ್ರರು ಈ ದಾಳಿಯಲ್ಲಿ ಶಾಮೀಲಾಗಿರುವ ಶಂಕೆ ಇದೆ. ಏಕೆಂದರೆ, ಹಮಾಸ್ ಉಗ್ರರು ಕೆಲ ದಿನಗಳ ಹಿಂದೆ ಕಾಶ್ಮೀರಕ್ಕೆ ಬಂದಿದ್ದರು. ಅವರು ಸ್ಥಳೀಯ ಉಗ್ರರಿಗೆ ಈ ಬಗ್ಗೆ ತರಬೇತಿ ನೀಡಿರಬಹುದು. ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ದಾಳಿ ಮಾಡುವ ಮುನ್ನ ಧರ್ಮ ಕೇಳಿ, ಗುಂಡು ಹಾರಿಸಿದ್ದರು, ಕಾಶ್ಮೀರದಲ್ಲಿಯೂ ಹೀಗೆ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಹಮಾಸ್ ಉಗ್ರರು ಕೂಡ ಭಾಗಿಯಾಗಿರುವ ಶಂಕೆ ಇದೆ ಎಂದಿದ್ದಾರೆ. ಅಲ್ಲದೇ, ಭಾರತದೊಂದಿಗೆ ಸದಾ ಇಸ್ರೇಲ್ ಬೆಂಬಲವಿರುತ್ತದೆ. ನನ್ನ ಸ್ನೇಹಿತನ ಬೆಂಬಲಕ್ಕೆ ನಾನು ಸದಾ ಸಿದ್ಧ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಯಾರೂ ಪಾಕ್ ಪ್ರವಾಸಕ್ಕೆ ಹೋಗುವಂತಿಲ್ಲ: ರಷ್ಯಾ ಅಧ್ಯಕ್ಷ
ಇನ್ನು ರಷ್ಯಾಾದಲ್ಲಿ ಪುತಿನ್ ಸಹ ತನ್ನ ಪ್ರಜೆಗಳಿಗೆ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹೋಗಬಾರದು ಎಂದು ಎಚ್ಚರಿಸಿದ್ದಾರೆ. ಈ ಕ್ರೂರ ಅಪರಾಧವನ್ನು ಸಹಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಕೃತ್ಯ ಎಸಗಿದವರಿಗೆ ಸರಿಯಾದ ಶಿಕ್ಷೆ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ. ಇಂಥ ವೇಳೆಯಲ್ಲಿ ನಾವು ಸದಾ ಭಾರತದ ಬೆಂಬಲಕ್ಕೆ ಇದ್ದೇವೆ. ಅಲ್ಲದೇ ಉಗ್ರರ ದಾಳಿಯಲ್ಲಿ ಮಡಿದವರಿಗೆ ನನ್ನ ಸಂತಾಪಗಳು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡಿ, ಇಲ್ಲವಾದಲ್ಲಿ ಭಾರತೀಯರ ರಕ್ತ ಹರಿಯುತ್ತದೆ: ಭುಟ್ಟೋ
ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದನ್ನು ಬಂದ್ ಮಾಡಬೇಕು ಎಂದು ಭಾರತ ಸರ್ಕಾರ ನಿರ್ಧಾರ ತೆಗೆದುಕಂಡಿದ್ದು. ಇದಕ್ಕೆ ಕಂಗಾಲಾಗಿರುವ ಬಿಲಾವರ್ ಭುಟ್ಟೋ, ಸಿಂಧು ನದಿ ನಮ್ಮದು, ಸಿಂಧು ನದಿ ನೀರು ಪಾಕಿಸ್ತಾನಕ್ಕೆ ಹರಿಯಬೇಕು. ಇಲ್ಲವಾದಲ್ಲಿ, ಭಾರತೀಯರ ರಕ್ತ ಹರಿಯುತ್ತದೆ ಎಂದು ಭುಟ್ಟೋ ಬಾಯಿ ಬಡಿದುಕಂಡಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ: ಪಾಕ್ ಪ್ರಧಾನಿ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ. ಯಾವುದೇ ಅಂತರಾಷ್’’್ರೀಯ ತನಿಖೆಗೆ ನಮ್ಮ ದೇಶ ಸಿದ್ಧ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ. ಈ ಮೂಲಕ ಸತ್ಯ ಇಡೀ ಪ್ರಪಂಂಚದ ಮುಂದಿದ್ದರು, ತಮ್ಮ ತಪ್ಪನ್ನು ಒಪ್ಪದ ಈ ಭಿಕಾರಿ ರಾಷ್dರ, ಇನ್ನೂ ತನ್ನ ಉದ್ಧlತನ ಮುಂದುವರಿಸಿದೆ.
ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇನ್ನೂ ಹಲವು ವರ್ಷ ಜಗಳವಾಗಬಹುದು: ಟ್ರಂಪ್
ಇನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಖಂಡಿಸಿದ್ದು, ಇದು ಅತ್ಯಂತ ಘೋರ ಘಟನೆ ಎಂದಿದ್ದಾರೆ. ಆದರೆ ಭಾರತ ಪರ ನಿಲ್ಲಲು ಟ್ರಂಪ್ ಹಿಂಜರಿದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದxದಿಗೆ ನನ್ನ ಸಂಬಂಧ ಉತ್ತಮವಾಗಿದೆ. ಮತ್ತು ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಜಗಳ ಹಲವು ವರ್ಷಗಳಿಂದ ನಡೆಯುತ್ತಿದೆ. ಇದು ಇನ್ನೂ ಹಲವು ವರ್ಷಗಳವರೆಗೆ ನಡೆಯಬಹುದು ಎಂಬ ಹೇಳಿಕೆ ನೀಡಿದ್ದಾರೆ.
Discussion about this post