ಬೆಂಗಳೂರು, ನವೆಂಬರ್ 14, 2021: ಪ್ರಭಾಸ್ ಹಾಗೂ ಪೂಜಾ ಹೆಗಡೆ ಜೋಡಿಯಾಗಿ ನಟಿಸಿರುವ ರಾಧೇ ಶ್ಯಾಮ್ ಚಿತ್ರದ ಮೊದಲ ಹಾಡು ನಾಳೆ (ನ.15) ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದ್ದು ಅಭಿಮಾನಿಗಳ ಕುತೂಹಲ ತಾರಕಕ್ಕೇರಿದೆ. ರಾಧಾ ಕೃಷ್ಣಕುಮಾರ್ ನಿರ್ದೇಶನದ ಪ್ರಣಯಪ್ರಧಾನ ಚಿತ್ರ ಇದಾಗಿದ್ದು ಅಭಿಮಾನಿ ಬಳಗದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಅತ್ಯಾಕರ್ಷಕ ಭಿತ್ತಿಚಿತ್ರವೊಂದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಇದರ ಘೋಷಣೆಯನ್ನು ಚಿತ್ರದ ನಿರ್ಮಾಪಕರು ಮಾಡಿದ್ದಾರೆ.
ವಿಕ್ರಮಾದಿತ್ಯನಾಗಿ ಪ್ರಭಾಸ್ ಹಾಗೂ ಪ್ರೇರಣಾ ಆಗಿ ಪೂಜಾ ಹೆಗಡೆ ಕಾಣಿಸಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಈ ವರ್ಷಾರಂಭದಲ್ಲೇ ಮುಗಿದಿದ್ದು ಚಿತ್ರದ ನಿರ್ಮಾಣಾನಂತರದ ತಾಂತ್ರಿಕ ಕಾರ್ಯಗಳೂ ಸಹ ಸದ್ಯದಲ್ಲೇ ಮುಗಿಯಲಿವೆ. ಚಿತ್ರದ ಚಿತ್ರೀಕರಣ ಹಾಗೂ ಬಿಡುಗಡೆ ಪ್ರಕ್ರಿಯೆಗಳು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪ್ರಭಾವಿತವಾಗಿದ್ದವು.
ಚಿತ್ರದ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್ ನವೆಂಬರ್ 13ರಂದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ನವೆಂಬರ್ 15ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಚಿತ್ರವು ಜನವರಿ 14, 2022ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದ್ದು ಪ್ರಭಾಸ್ ಹಸ್ತರೇಖಾ ತಜ್ಞನ ಪಾತ್ರದಲ್ಲಿದ್ದರೆ ಪೂಜಾ ಹೆಗಡೆ ರಾಜಕುಮಾರಿಯ ಪಾತ್ರದಲ್ಲಿದ್ದಾರೆ. ರಾಣಾ ದಗ್ಗುಬಾಟಿ ಹಾಗೂ ಪವನ್ಕಲ್ಯಾಣ್ ನಟಿಸಿರುವ ಬಹುನಿರೀಕ್ಷಿತ ಭೀಮ್ಲಾ ನಾಯಕ್ ಚಿತ್ರವೂ ಸಹ ಅಂದೇ ಬಿಡುಗಡೆಯಾಗಲಿದ್ದು ಎರಡೂ ಚಿತ್ರಗಳ ಪೈಪೋಟಿ ಹೇಗಿರಬಹುದೆಂಬ ಕುತೂಹಲ ಮನೆ ಮಾಡಿದೆ.
The wait is over! ☺️☺️
Get ready for the #FirstRadheShyamSong to dominate your playlist! 💓 #RadheShyam
Starring #Prabhas & @hegdepooja pic.twitter.com/HMPELs2Bsz— UV Creations (@UV_Creations) November 13, 2021
Producers of Radhe Shyam to launch the duet filmed on Prabhas and Pooja Hegde tomorrow
ಇದನ್ನೂ ಓದಿ: ‘ಅಪ್ಪು’ ಭಾವಚಿತ್ರದ ಎದುರು ಶಾಂಪೇನ್ ಬಾಟಲಿ ತೆರೆದು ಹಾಡು ಬಿಡುಗಡೆ: ಕ್ಷಮೆ ಕೋರಿದ ರಚಿತಾ ರಾಮ್
ಇದನ್ನೂ ಓದಿ: ವಿಭಿನ್ನವಾಗಿ ಸೀರೆ ಉಟ್ಟ ವಿದ್ಯಾ ಬಾಲನ್: ಇಲ್ಲಿವೆ ನೋಡಿ ಚಿತ್ರಗಳು…
Discussion about this post