ನಟ ಪುನೀತ್ ರಾಜ್‌ಕುಮಾರ್ ಅವರ ನೆನಪುಗಳು ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಲಿದೆ. ಅಭಿಮಾನದ ಪರಾಕಾಷ್ಟೆ ಮತ್ತೊಂದು ಉದಾಹರಣೆ ಶಿವಮೊಗ್ಗದ ಸಕ್ರೆಬೈಲಿನ ಆನೆಯ ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಟ್ಟಿರುವುದು.
ಆನೆಯ ಮರಿಗೆ ಹೆಸರು ಇಡಲು ಮತ್ತೊಂದು ಕಾರಣ ಏನೆಂದರೆ, ಪುನೀತ್ ನಿಧನರಾಗುವ ಕೆಲ ದಿನಗಳ ಹಿಂದೆ ಅವರು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಆನೆಗಳ ಬಗ್ಗೆ ವಿಶೇಷ ಕಾಳಜಿತೋರಿದ್ದರು. ಹೀಗಾಗಿ, ಪುನೀತ್ ಅವರು ಹೆಸರನ್ನು ಆನೆಗೆ ಇಡಲಾಗಿದೆ.
ಮರಿಯಾನೆಯ ತಾಯಿ ನೇತ್ರಾಳಿಂದ ಮರಿಯನ್ನು ಬೇರ್ಪಡಿಸುವ ಸಂದರ್ಭದಲ್ಲಿ ಹೆಸರಿಡುವುದು ರೂಢಿ. ಸಾಮಾನ್ಯವಾಗಿ, ಕೂಸು ಹುಟ್ಟಿದ ಎರಡು ವರ್ಷದ ತನಕ ತಾಯಿ ಜೊತೆ ಇರಲು ಬಿಡುತ್ತೇವೆ. ಆನಂತರ ಬೇರ್ಪಡಿಸಿ, ಮರಿಯನ್ನು ಕಾಡಿನಲ್ಲಿ ಬಿಟ್ಟು ಸ್ವತಂತ್ರ ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಡವುದು ಪದ್ಧತಿ. ಈ ಸಲ ಶಿವಮೊಗ್ಗ ಸುತ್ತಮುತ್ತ ಮಳೆ ಹೆಚ್ಚಾಗಿದ್ದರಿಂದ ನೇತ್ರಾಳ ಮಗುವನ್ನು ಬೇರ್ಪಡಿಸಲು ಆಗಿರಲಿಲ್ಲ. ಅಷ್ಟರಲ್ಲಿ ಪುನೀತ್ ನಿಧನರಾದರು. ಇತ್ತ ತಾಯಿಂದ ಬೇರ್ಪಡಿಸುವ ಮೊದಲು ಅದಕ್ಕೆ ಹೆಸರಿಡಬೇಕಿತ್ತು. ನಟರ ನೆನಪು ಸದಾ ಇರಲಿ ಎಂದು ಆನೆಯ ಮರಿಗೆ ಪುನೀತ್ ಅವರ ಹೆಸರು ಇಟ್ಟಿದ್ದೇವೆ ಎನ್ನುತ್ತಾರೆ ಸಕ್ರೆಬೈಲಿನ ಉಪ ಅರಣ್ಯಾಧಿಕಾರಿ ನಾಗರಾಜ್.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ನಮಗೆ ಕಲಿಸುವ ಪಾಠವೇನು?
Discussion about this post