ಬೆಳಗಾವಿ: ಮುಂಬರುವ ಜನವರಿ ೦೧ ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ ಹಾಗೂ ಮೆಕ್ಕೆಜೋಳ ಖರೀದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರಾದ ಉಮೇಶ್ ಕತ್ತಿ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆ ಹಾಗೂ ಅದಕ್ಕೆ ಪೂರಕವಾಗಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಜಿ.ಟಿ.ದೇವೆಗೌಡ, ಕೃಷ್ಣ ಭೈರೇಗೌಡ ಅವರು ಈಗಿನಂದಲೇ ಬೆಂಬಲ ಬೆಲೆಯೊಂದಿಗೆ ಬೆಳೆಗಳ ಖರೀದಿ ಪ್ರಾರಂಭಿಸಬೇಕು. ಯಾವುದೇ ಮಿತಿ ನಿಗದಿ ಪಡಿಸದೇ, ಕಳೆದ ಬಾರಿಯ ಮಾನದಂಡಗಳನ್ನೇ ಅನುಸರಿಸಬೇಕು ಎಂದು ಮಾಡಿದ ಮನವಿಗೆ ಸಚಿವರು ಉತ್ತರಿಸಿದರು.
ಇದೇ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಸಹ ಉತ್ತರಿಸಿ ರೈತರ ನೊಂದಣಿ ಕಾರ್ಯ ನಡೆಯುತ್ತಿದ್ದು, ಹದಿನೈದು ದಿನಗಳಲ್ಲಿ ಖರೀದಿ ಪ್ರಾರಂಭಿಸಲಾಗುವುದು. ಬೆಳೆಯ ಪೂರೈಕೆ ಪ್ರಮಾಣ ಗಮನದಲ್ಲಿ ಇರಿಸಿಕೊಂಡು ಹೆಚ್ಚಿನ ಖರೀದಿಗೆ ಕ್ರಮವಹಿಸಲಾಗುವುದು. ರೈತರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡದೇ ಸರ್ಕಾರಿ ಖರೀದಿ ಕೇಂದ್ರಗಳಿಗೆ ಪೂರೈಸಬೇಕು ಎಂದರು.
Purchase of paddy, ragi, corn with support price from Jan 1

























Discussion about this post