ಬೆಂಗಳೂರು: ಪಡಿತರ ವಿತರಕರ ಕಮಿಶನ್ ಪಾವತಿಸಬೇಕು ಎಂದು ಒತ್ತಾಯಿಸಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯ ಸಮೀತಿ ಪದಾಧಿಕಾರಿಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಡಿ.ಮೀನಳ್ಳಿ ತಾಯಣ್ಣ ಅವರು ಸಚಿವರನ್ನು ಭೇಟಿ ಮಾಡಿ, ಪಡಿತರ ವಿತರಕರ ಕಮಿಶನ್ ಪಾವತಿ ನೆನೆಗುದಿಗೆ ಬಿದ್ದಿದ್ದು, ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಸೆಳೆದರೂ ಕ್ರಮವಿಲ್ಲ, ಪಡಿತರ ವಿತರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ,
ಕೂಡಲೇ ವಿತರಕರ ಕಮಿಶನ್ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯ ಕಾರ್ಯಾಧ್ಯಕ್ಷ ಡಿ.ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ಪಡಿತರ ವಿತರಕರ ಕಮಿಶನ್ ಪಾವತಿ ಸೇರಿದಂತೆ ಇತರೇ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚೆರ್ಚಿಸಲಾಗಿದೆ, ನೆನೆಗುದಿಗೆ ಬಿದ್ದಿರುವ ಕಮಿಶನ್ ಪಾವತಿಗೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ನಂತರ ಕೇಂದ್ರ ಆಹಾರ ಸಚಿವರನ್ನು ಮಾಡಲಾಯಿತು.
ಅವರ ನಿರ್ದೇಶನ ಮೇರೆಗೆ ಆಹಾರ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ನಮ್ಮ ರಾಜ್ಯದ ಪಡಿತರ ವಿತರಿಕರಿಗೆ ಪಾವತಿಸಬೇಕಾದ ಕಮಿಶನ್ ಕುರಿತು ಚೆರ್ಚಿಸಲಾಯಿತು, ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದರ ಜೊತೆಗೆ ಅನ್ಯ ರಾಜ್ಯದಲ್ಲಿ ಕಾರ್ಡ್ ದಾರರಿಗೆ ಆಹಾರ ಧಾನ್ಯಗಳ ಜೊತೆಗೆ ಸಕ್ಕರೆ, ತಾಳೆ ಎಣ್ಣೆ, ಉಪ್ಪುನ್ನು ವಿತರಿಸಲಾಗುತ್ತಿದೆ ಇವುಗಳನ್ನು ನಮ್ಮ ರಾಜ್ಯದಲ್ಲೂ ವಿತರಣೆ ವ್ಯವಸ್ಥೆಯಾದರೇ ಬಡವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಯಿತು, ಇದಕ್ಕೆ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ನಮ್ಮ ಸಂಘದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನಮ್ಮೆಲ್ಲ ಅಂಗಡಿಕಾರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ತಿಳಿಸಿದರು.

























Discussion about this post