ಸಿಂಪಲ್ ಚೀಸ್ ಬಾಲ್ ರೆಸಿಪಿ (Cheese Ball Recipe)
ಬೇಕಾಗುವ ಸಾಮಗ್ರಿ: 2 ಬೇಯಿಸಿದ ಆಲೂಗಡ್ಡೆ, ಅರ್ಧ ಸ್ಪೂನ್ ತರಿತರಿಯಾಗಿ ಪುಡಿ ಮಾಡಿದ ಕಾಳುಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, 1 ಸ್ಪೂನ್ ಗರಂ ಮಸಾಲೆ, 4ರಿಂದ 5 ಸ್ಪೂನ್ ಕಡಲೆ ಹುಡಿ, ಉಪ್ಪು, 1 ಕಪ್ ತುರಿದ ಚೀಸ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದಕ್ಕೆ ಕಾಳುಮೆಣಸಿನಪುಡಿ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಗರಂ ಮಸಾಲೆ, ಕಡಲೆಹುಡಿ, ಉಪ್ಪು, ತುರಿದ ಚೀಸ್ ಸೇರಿಸಿ ಮಿಕ್ಸ್ ಮಾಡಿ. ಇದನ್ನೇ ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಚೀಸ್ ಬಾಲ್ಸ್ ರೆಡಿ. ಸಾಸ್ ಜತೆ ಕಾಂಬಿನೇಷನ್ ಉತ್ತಮವಾಗಿರುತ್ತದೆ.
=================
Recipe: ತೂಕ ಇಳಿಸಲು ಪ್ರೋಟಿನ್ ಸಲಾಡ್ ರೆಸಿಪಿ (Protein Salad)
Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಜ್ಮಾ, ಕಾಲು ಕಪ್ ಕಪ್ಪು ಕಡಲೆ, ಬ್ರೋಕಲಿ, ಕ್ಯಾಪ್ಸಿಕಂ, ಈರುಳ್ಳಿ, ಟೋಮ್ಯಾಟೋ, ಕ್ಯಾಬೇಜ್, ಸೌತೇಕಾಯಿ ಇದೆಲ್ಲವೂ ಸೇರಿ 1 ಚಿಕ್ಕ ಬೌಲ್ ಆದ್ರೆ ಸಾಕು. ಕಾಲು ಕಪ್ ಹುರಿದ ನೆಲಗಡಲೆ. ಇನ್ನು ಸಿಸನಿಂಗ್‌ಗೆ 1 ಸ್ಪೂನ್ ನಿಂಬೆರಸ, ಆಲಿವ್ ಎಣ್ಣೆ, ಅರ್ಥ ಸ್ಪೂನ್ ಪೆಪ್ಪರ್, ಆರೆಗ್ಯಾನೋ, ಅವಶ್ಯಕತೆ ಇದ್ದಷ್’’ು ಉಪ್ಪು.
ಮಾಡುವ ವಿಧಾನ: ರಾಜ್ಮಾ ಮತ್ತು ಕಡಲೆಯನ್ನು 6 ಗಂಟೆ ನೆನೆಸಿ, ಕುಕ್ಕರ್‌ಗೆ ಹಾಕಿ ಉಪ್ಪು ಮತ್ತು ನೀರಿನ ಜತೆ ಬೇಯಿಸಿ. ಬಳಿಕ ಬ್ರೋಕೋಲಿ, ಕ್ಯಾಪ್ಸಿಕಂ ಕಟ್ ಮಾಡಿ, ಸ್ಟೀಮ್ ಮಾಡಿ.
ಬಳಿಕ 1 ಬೌಲ್‌ನಲ್ಲಿ ಬಿಸಿ ನೀರು, ಪನೀರ್ ಹಾಕಿ ಸ್ವಲ್ಪ ಸಮಯ ಇರಿಸಿ. ಮಿಕ್ಸಿಂಗ್ ಬೌಲ್‌ಗೆ ಈರುಳ್ಳಿ, ಟೋಮ್ಯಾಟೋ, ಕ್ಯಾಬೇಜ್, ಸೌತೇಕಾಯಿ ಕಟ್ ಮಾಡಿ ಹಾಕಿ. ಇದಕ್ಕೆ ಬಿಸಿನೀರಿನಲ್ಲಿ ನೆನೆಸಿದ ಪನೀರ್, ಬೇಯಿಸಿದ ಕಡಲೆ ಮತ್ತು ರಾಜ್ಮಾ, ಸ್ಟೀಮ್ ಬರಿಸಿದ ಬ್ರೋಕಲಿ, ಕ್ಯಾಪ್ಸಿಕಂ, ಹುರಿದ ಶೇಂಗಾ, ಬೇಕಾದರೆ ಕೋರಿಯಾಂಡರ್, ಸೇರಿಸಿ ಮಿಕ್ಸ್ ಮಾಡಿ.
ಈ ಸಲಾಡ್‌ಗೆ ಈಗ ಸೀಸ್‌ನಿಂಗ್ ಮಾಡಲು ನಿಂಬೆರಸ, ಆಲಿವ್ ಎಣ್ಣೆ, ಪೆಪ್ಪರ್ ಪುಡಿ, ಆರೆಗ್ಯಾನೋ, ಉಪ್ಪು ಮಿಕ್ಸ್ ಮಾಡಿ, ಸೇರಿಸಿದ್ರೆ, ಸಲಾಡ್ ರೆಡಿ. ಇನ್ನೂ ರುಚಿಯಾಗಲು ನೀವು ಸಿಹಿ ಬೇಕಾದ್ರೆ ಜೇನುತುಪ್ಪ, ಖಾರಾ ಬೇಕಾದಲ್ಲಿ ಪುದೀನಾ ಚಟ್ನಿ ಬಳಸಬಹುದು.
=======================
ಆಲೂ ಪಾಲಕ್ ಬಜ್ಜಿ ರೆಸಿಪಿ (Palak Pakoda Recipe)
ಬೇಕಾಗುವ ಸಾಮಗ್ರಿ: 1ಕಪ್ ಪಾಲಕ್, ಅರ್ಧ ಕಪ್ ಕಡಲೆ ಹುಡಿ, 2 ಸ್ಪೂನ್ ಕಾರ್ನ್ ಫ್ಲೋರ್, 4 ಆಲೂಗಡ್ಡೆ, ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಕರಿಯಲು ಎಣ್ಣೆ, ಉಪ್ಪು.
ಮಾಡುವ ವಿಧಾನ: ಪಾಲಕ್‌ನ್ನು ಸಣ್ಣಗೆ ಹೆಚ್ಚಿ, ಆಲೂಗಡ್ಡೆಯನ್ನು ತುರಿಯಬೇಕು. ಮಿಕ್ಸಿಂಗ್ ಬೌಲ್‌ಗೆ ಕಡಲೆ ಹುಡಿ, ಕಾರ್ನ್ ಫ್ಲೋರ್, ನೀರು, ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪಾಲಕ್, ಆಲೂಗಡ್ಡೆ ತುರಿ ಕೂಡ ಸೇರಿಸಬೇಕು.
ಬಳಿಕ ಶುಂಠಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು ಇವೆಲ್ಲವನ್ನೂ ಕುಟ್ಟಣಿಗೆಗೆ ಹಾಕಿ, ತರಿತರಿಯಾಗಿ ಪುಡಿ ಮಾಡಬೇಕು. ಇದನ್ನು ಬಜ್ಜಿ ಹಿಟ್ಟಿಗೆ ಮಿಕ್ಸ್ ಮಾಡಬೇಕು. ಬಜ್ಜಿ ಹಿಟ್ಟು ವಡಾ ಹಿಟ್ಟಿನ ರೀತಿ ಗಟ್ಟಿಯಾಗಿರಬೇಕು.
ಬಳಿಕ ಕಾದ ಎಣ್ಣೆಗೆ ಈ ಬಜ್ಜಿ ಹಾಕಿ, ಮಂದ ಉರಿಯಲ್ಲಿ ಕರಿದರೆ, ಪಾಲಕ್ ಬಜ್ಜಿ ರೆಡಿ.
======================
Recipe: ಗೋಬಿಯಿಂದ ಮಾಡಬಹುದು ಟೇಸ್ಟಿ ಪಾರೋಠಾ (Gobi Parotha)
Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಬಿ (ಹೂಕೋಸು), ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಎಲ್ಲವೂ 1 ಸ್ಪೂನ್. 2 ಕಪ್ ಗೋದಿ ಹುಡಿ, ತುಪ್ಪ ಅಥವಾ ಎಣ್ಣೆ, ಉಪ್ಪು.
ಮಾಡುವ ವಿಧಾನ: ಗೋಬಿಯನ್ನು ತುರಿದುಕ“ಳ್ಳಿ. ನಂತರ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಸ್ವಲ್ಪ ಉಪ್ಪು ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಹೂರಣ ರೆಡಿ.
ಇದಕ್ಕೂ ಮುನ್ನ ಗೋದಿಹುಡಿಗೆ ಬಿಸಿ ನೀರು, ಉಪ್ಪು, ಖಾರದಪುಡಿ, ಅರಿಶಿನ, ಎಣ್ಣೆ ಸೇರಿಸಿ, ಚಪಾತಿ ಹಿಟ್ಟು ಕಲಿಸಿಡಿ. 20 ನಿಮಿಷ ಬಿಟ್ಟು, ಈ ಹಿಟ್ಟಿಗೆ ಕಣಕ ಸೇರಿಸಿ, ಚಪಾತಿಯ ರೀತಿ ಲಟ್ಟಿಸಿ, ಬೇಯಿಸಿದರೆ, ಗೋಬಿ ಪರೋಠಾ ರೆಡಿ. ಕಾಯಿ ಚಟ್ನಿ ಜತೆ ಇದನ್ನು ಸವಿಯಬಹುದು
=========================
ಅಕ್ಕಿಯನ್ನು ಈ ರೀತಿ ಪುಡಿ ಮಾಡಿಟ್ಟುಕೊಂಡರೆ ದಿಢೀರ್ ದೋಸೆ ಮಾಡಬಹುದು..
ಇರುವ ಹಿಟ್ಟಿನಿಂದಲೇ ಇನ್ಸಟಂಟ್ ದೋಸೆ ಮಾಡಿ ತಿಂದು ತಿಂದು ನಿಮಗೆ ಬೋರ್ ಬಂದಿದ್ದರೆ, 2 ಕಪ್ ಅಕ್ಕಿ ಚೆನ್ನಾಗಿ ವಾಶ್ ಮಾಡಿ, ನೀರಿನಲ್ಲಿ ನೆನೆಸಿಡಿ. 5ರಿಂದ 6 ತಾಸು ನೆನೆಸಿದ ಬಳಿಕ, ಅದನ್ನು 1 ಕಾಟನ್ ಬಟ್ಟೆ ಮೇಲೆ ಹರಡಿ, ನೆರಳಿನಲ್ಲೇ 3 ದಿನ ಒಣಗಿಸಿ.
ನಂತರ ತರಿ ತರಿಯಾಗಿ ಅಕ್ಕಿಯನ್ನು ಪುಡಿ ಮಾಡಿ. ಇದನ್ನು ಡಬ್ಬದಲ್ಲಿರಿಸಿ, 1 ವಾರ ಇಡಬಹುದು. ನಿಮಗೆ ಸ್ಪೆಶಲ್ ಆಗಿ ಏನಾದರೂ ತಿನ್ನಬೇಕು ಅಂತಾ ಅನ್ನಿಸಿದರೆ, ಇದೇ ಹಿಟ್ಟಿಗೆ ಕಾಯಿತುರಿ, ಒಣಮೆಣಸು, ಜೀರಿಗೆ, ಕ“ತ್ತ“ಂಬರಿ ಕಾಳು, ಉಪ್ಪು ಇವಿಷ್’’ನ್ನು ರುಬ್ಬಿ, ಮಸಾಲೆ ತಯಾರಿಸಿ, ಸೇರಿಸಿ. ಬಳಿಕ ಈರುಳ್ಳಿ, ಕ್ಯಾಬೇಜ್ ಕತ್ತರಿಸಿ, ಇದಕ್ಕೆ ಸೇರಿಸಿ, ದೋಸೆ ತಯಾರಿಸಬಹುದು.
ಬೇಕಾಗುವ ಸಾಮಗ್ರಿ: 1 ಬೌಲ್ ಗೋಧಿ, 4ರಿಂದ 5 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ ಕಾಯಿತುರಿ, ಉಪ್ಪು. ಎಣ್ಣೆ.
ಮಾಡುವ ವಿಧಾನ: ಗೋಧಿಯನ್ನು 1 ರಾತ್ರಿ ನೀರಿನಲ್ಲಿ ನೆನೆ ಹಾಕಿ, ಚೆನ್ನಾಗಿ ವಾಶ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ. ಇದರ ಜತೆ ಕೆಂಪು ಮೆಣಸು, ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಯಿತುರಿ, ಉಪ್ಪು ನೀರು ಹಾಕಿ ರುಬ್ಬಿ, ದೋಸೆ ಹಿಟ್ಟು ತಯಾರಿಸಿ. ಬಳಿಕ ಪ್ಯಾನ್‌ಗೆ ಎಣ್ಣೆ ಸವರಿ ದೋಸೆ ಹಾಕಿ. ಕಾಯಿ ಚಟ್ನಿಯ ಜತೆ ಈ ದೋಸೆ ಉತ್ತಮ ಕಾಂಬಿನೇಷನ್. ಇದು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ನೀವು ಚಪಾತಿಯ ಬದಲು, ಹೀಗೆ ದೋಸೆ ಮಾಡಿಕ“ಡಬಹುದು.
==========================
Recipe: ಪಾತೋಳಿ ರೆಸಿಪಿ
ಬೇಕಾಗುವ ಸಾಮಗ್ರಿ: ಅರಿಶಿನ ಎಲೆ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿತುರಿ, ಉಪ್ಪು. ಇದಿಷ್ಟು ಹಿಟ್ಟಿಗಾದರೆ, ಹೂರಣಕ್ಕಾಗಿ 1 ಕಪ್ ಕಾಯಿತುರಿ, ಸಿಹಿ ಬೇಕಾಗುವಷ್ಟು ಬೆಲ್ಲ, ಏಲಕ್ಕಿ.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ಸ್ವಚ್ಚ ಮಾಡಿ, 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ ಅಕ್ಕಿ, ಉಪ್ಪು, ಕಾಯಿತುರಿ ಹಾಕಿ ರುಬ್ಬಿಕ“ಳ್ಳಿ. ಹಿಟ್ಟು ಹೆಚ್ಚು ಗಟ್ಟಿಯಾಗಿಯೂ, ಹೆಚ್ಚು ತೆಳುವಾಗಿಯೂ ಇರದೇ, ಸಮವಾಗಿರಬೇಕು.
ಬಳಿಕ ಅರಿಶಿನ ಎಲೆಯನ್ನು ಚೆನ್ನಾಗಿ ಸ್ವಚ್ಛ ಮಾಡಿ, ಕಡೆ ಕುಡಿ ಎರಡೂ ಕಡೆ ಸ್ವಲ್ಪ ಕತ್ತರಿಸಿಕ“ಳ್ಳಿ. ನಂತರ ಹೂರಣ ಮಾಡಲು, ಬೆಲ್ಲ ಪಾಕ ಬರಿಸಿ, ಅದಕ್ಕೆ ಕಾಯಿ ತುರಿ ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಹೂರಣ ಚೆನ್ನಾಗಿ ರೆಡಿಯಾದ ಬಳಿಕ ಅರಿಶಿನ ಎಲೆಗೆ ಅಕ್ಕಿಹಿಟ್ಟು ಸವರಿ, ಅದರ ಮೇಲೆ ಹೂರಣ ಹಾಕಿ ಎಲೆ ಮಡಿಚಿ, ನಿಧಾನವಾಗಿ, 15 ಮುಂಚೆ ಹಬೆ ಬರಿಸಿದ್ದ ಇಡ್ಲಿ ಪಾತ್ರೆಗೆ ಹಾಕಿ, 15ರಿಂದ 20 ನಿಮಿಷ ಬೇಯಿಸಿದರೆ ಪಾತೋಳಿ ರೆಡಿ.
=====================
Recipe: ಕರಿಬೇವಿನ ರೈಸ್ (curry leaves rice)
ಬೇಕಾಗುವ ಸಾಮಗ್ರಿ: ಕಾಲು ಕಪ್ ಕರಿಬೇವು ಪುಡಿ, ಕರಿಬೇವನ್ನು ಪೇಸ್ಟ್ ಮಡಿ ಬಳಸಿದರೂ ನಡೆಯುತ್ತದೆ. ಅನ್ನ, 2 ಹಸಿಮೆಣಸು, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಸ್ವಲ್ಪ ಶೇಂಗಾ, 1 ಈರುಳ್ಳಿ, ಅರಿಶಿನ, ಗರಂ ಮಸಾಲೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕರಿಬೇವಿನ ಪೇಸ್ಟ್ ಹಾಕಿ, ಹಸಿವಾಸನೆ ಹೋಗುವವರೆಗೂ ಬಾಡಿಸಿ.
ಬಳಿಕ ಅರಿಶಿನ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಕ“ನೆಗೆ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ ಕರಿಬೇವಿನ ರೈಸ್ ರೆಡಿ. ಇದು ಆರೋಗ್ಯಕ್ಕೆ ಉತ್ತಮವಲ್ಲದೇ, ರುಚಿಕರವೂ ಆಗಿದೆ.
================================
Recipe: ಸ್ವಲ್ಪ ಸಮಯದಲ್ಲೇ ತಯಾರಿಸಬಹುದಾದ ಪಡ್ಡು ರೆಸಿಪಿ
ಬೇಕಾಗುವ ಸಾಮಗ್ರಿ: 1 ಕಪ್ ರವಾ, ಕಾಾಲು ಕಪ್ ಕರ್ಡ್, 1 ತುರಿದ ಕ್ಯಾರೆಟ್, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ತುರಿದ ಶುಂಠಿ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಹಿಂಗು, ಎಣ್ಣೆ, ಉಪ್ಪು.
ಮಾಡುವ ವಿಧಾನ: ರವಾ, ಕರ್ಡ್, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ 15 ನಿಮಿಷ ಬದಿಗಿರಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಹಿಂಗು, ಉದ್ದಿನಬೇಳೆ, ಕರಿಬೇವು, ಹಸಿಮೆಣಸು, ಕಡಲೆಬೇಳೆ, ಹಾಕಿ ಹುರಿಯಿರಿ. ನಂತರ ಈರುಳ್ಳಿ, ತುರಿದ ಶುಂಠಿ ಹಾಕಿ ಹುರಿಯಿರಿ. ಬಳಿಕ ಕ್ಯಾರೆಟ್ ಸೇರಿಸಿ. ಗ್ಯಾಸ್ ಆಫ್ ಮಾಡಿ, ಇದಕ್ಕೆ ಕೊತ್ತೊಂಬರಿ ಸೊಪ್ಪು ಸೇರಿಸಿ. ಈ ಮಿಶ್ರಣ ತಣಿದ ಬಳಿಕ, ರೆಡಿ ಮಾಡಿರುವ ಹಿಟ್ಟಿಗೆ ಇದನ್ನು ಸೇರಿಸಿ. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಪಡ್ಡು ಮಾಡಿ. ಕಾಯಿ ಚಟ್ನಿ ಜತೆ ಉತ್ತಮ ಕಾಂಬಿನೇಷನ್.
====================
Recipe: ಕಾಶ್ಮೀರಿ ಪಲಾವ್ ರೆಸಿಪಿ (Kashmiri Pulao)
ಬೇಕಾಗುವ ಸಾಮಗ್ರಿ: ಅಕ್ಕಿ, 2 ಸ್ಪೂನ್ ತುಪ್ಪ, ಅವಶ್ಯಕತೆ ಇದ್ದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮ್, ಪಿಸ್ತಾ, ನಿಮಗೆ ಯಾವ ಡ್ರೈಫ್ರೂಟ್ಸ್ ಬೇಕೋ ಆ ಡ್ರೈಫ್ರೂಟ್ಸ್, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಸ್ಟಾರ್ ಚಕ್ಕೆ, ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, 1 ಆ್ಯಪಲ್, ದಾಳಿಂಬೆ, ದ್ರಾಕ್ಷಿ, ಅನಾನಸ್, 1 ಈರುಳ್ಳಿ, ತುರಿದ ಶುಂಠಿ, ಉಪ್ಪು. ಬೇಕಾದ್ದಲ್ಲಿ ಕೇಸರಿ ದಳ, ಸ್ವಲ್ಪ ಹಾಲು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ, ಡ್ರೈಫ್ರೂಟ್ಸ್ ಹುರಿದುಕ“ಳ್ಳಿ. ಬಳಿಕ ಅದನ್ನು ಬದಿಗಿರಿಸಿ, ಅದೇ ಪ್ಯಾನ್‌ಗೆ ಮತ್ತೆ ತುಪ್ಪ ಹಾಕಿ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಸ್ಟಾರ್ ಚಕ್ಕೆ, ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, ಈರುಳ್ಳಿ, ತುರಿದ ಶುಂಠಿ ಹಾಕಿ ಹುರಿಯಿರಿ.
ಬಳಿಕ ಕ್ಲೀನ್ ಮಾಡಿದ ಅಕ್ಕಿ ಹಾಾಕಿ ಮತ್ತೆ ಸ್ವಲ್ಪ ಹುರಿದು, ಬೇಕಾದಷ್ಟು ನೀರು ಹಾಕಿ ಅನ್ನ ಬೇಯಿಸಿ. ಅನ್ನ ಅರ್ಧ ಬೇಂದ ಬಳಿಕ ಅದಕ್ಕೆ ಕಾಲು ಮತ್ತು ಕೇಸರಿ ದಳ ಸೇರಿಸಿ. ಬೇಕಾದರೆ ಕಸ್ಟರ್ಡ್ ಪುಡಿ ಕೂಡ ಹಾಕಬಹುದು.
ಇದೆಲಲ ಹಾಕಿ ಆದ ಬಳಿಕ ಅನ್ನ ಬೇಯಿಸಿ. ಎಲ್ಲ ರೆಡಿಯಾದ ಬಳಿಕ ಗ್ಯಾಸ್ ಆಫ್ ಮಾಡಿ, ದಾಳಿಂಬೆ, ಆ್ಯಪಲ್, ದ್ರಾಕ್ಷಿ, ಅನಾನಸ್, ಹುರಿದ ಡ್ರೈಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿದ್ರೆ ಕಾಶ್ಮೀರಿ ಪಲಾವ್ ರೆಡಿ.
==============================
Recipe: ಪನೀರ್ 65 (paneer 65)
ಬೇಕಾಗುವ ಸಾಮಗ್ರಿ: ಪನೀರ್, 1 ಸ್ಪೂನ್ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಗರಂಮಸಾಲೆ, ಉಪ್ಪು, 3 ಕಾಲು ಕಪ್ ಮ“ಸರು, 1 ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಕಾಲು ಕಪ್ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ, ಸ್ವಲ್ಪ ಹಿಂಗು, 2 ಹಸಿಮೆಣಸು, Tomato ಸಾಸ್, ಕರಿಬೇವು.
ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್‌ನಲ್ಲಿ ಪನೀರ್, ಖಾರದ ಪುಡಿ, ಅರಿಶಿನ, ಧನಿಯಾಪುಡಿ, ಗರಂಮಸಾಲೆ, ಉಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಕಾರ್ನ್ ಫ್ಲೋರ್, ಕರ್ಡ್ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬದಿಗಿರಿಸಿ.
ಬಳಿಕ ಕಾದ ಎಣ್ಣೆಯಲ್ಲಿ ಈ ಮಿಶ್ರಣವನ್ನು ಹಾಕಿ, ಬಜ್ಜಿಯ ರೀತಿ ಕರಿಯಿರಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಹಿಂಗು, Tomato ಸಾಸ್, ಕರಿಬೇವು ಎಲ್ಲವನ್ನೂ ಹಾಕಿ ಹುರಿಯಿರಿ. ಬಳಿಕ ಕರಿದ ಪನೀರ್‌ನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ, ಪನೀರ್ 65 ರೆಡಿ. ಬರ್ತ್‌ಡೇ ಪಾರ್ಟಿ, ಇವ್‌ನಿಂಗ್ ಸ್ನ್ಯಾಕ್ಸ್ ಆಗಿ ಇದನ್ನ ಬಳಸಬಹುದು.
Discussion about this post