ಮೈಸೂರು: ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಈಗ ಜೆಡಿಎಸ್ನಂತೆ ಪ್ರಾದೇಶಿಕ ಪಕ್ಷವಾಗಿ ಉಳಿದಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಇದನ್ನೂ ಓದಿ: Recruitment in banks: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನೇಮಕಾತಿ: ಕಾನೂನು ಅಧಿಕಾರಿ, ಕೃಷಿ ಅಧಿಕಾರಿಸಹಿತ 1828 ಹುದ್ದೆ
ಮೈಸೂರಿನಲ್ಲಿ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ ಘಟಕದಿಂದ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಆತಂರಿಕ ಕಚ್ಚಾಟ ಹೆಚ್ಚಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಲೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರರು ಗುಂಪುಗಾರಿಕೆ ಮಾಡುತ್ತಾ ಕಚ್ಚಾಡುತ್ತಿದ್ದಾರೆ.
ಇದನ್ನೂ ಓದಿ: 21 NOV ( ನಿತ್ಯ ಭವಿಷ್ಯ)
ಕಾಂಗ್ರೆಸ್ನವರ ಆಡಳಿತ, ಕಚ್ಚಾಟವನ್ನು ನೋಡಿ ಬೇಸೆತ್ತಿರುವ ದೇಶದ ಜನರು ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಸಿಂಧಗಿಯ ಉಪಚುನಾವಣೆಯಲ್ಲಿ ಕುರುಬರ 35 ಸಾವಿರ ಮತವಿದ್ದರೂ, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಗೆಲ್ಲಿಸಲು ಸಾಧ್ಯವಾಗಿಲ್ಲ, ಬಿಜೆಪಿ ಅಲ್ಲಿ 31 ಸಾವಿರ ಮತಗಳ ಅಂತರದಿAದ ಗೆಲುವು ಸಾಧಿಸಿದೆ.
ಇದನ್ನೂ ಓದಿ: Crop Loss Survey: ಬೆಳೆನಷ್ಟ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹ
ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯನವರನ್ನು ಜನರು ಸೋಲಿಸಲಿದ್ದಾರೆ. ರಾಜ್ಯದಲ್ಲಿ ಒಂದೆರೆಡು ಸ್ಥಾನದಲ್ಲಿ ಗೆಲುವು ಸಾಧಿಸಲಿರುವ ಕಾಂಗ್ರೆಸ್ನ ಸ್ಥಿತಿ ಜೆಡಿಎಸ್ನ ಪ್ರಾದೇಶಿಕ ಪಕ್ಷದಂತಾಗಿದೆ. ಹೀಗಿದ್ದರೂ ಕೂಡ ಕಾಂಗ್ರೆಸ್ನ ನಾಯಕರು ತಮ್ಮದು ರಾಷ್ಟ್ರೀಯ ಪಕ್ಷ ಎಂದು ಹೇಳುತ್ತಿದ್ದಾರೆ ಎಂದು ಮೂದಲಿಸಿದರು.
Congress party is now a regional party like JD(S)

























Discussion about this post