• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

School Survey: ಶಾಲೆಗಳ ಮುಚ್ಚುಗಡೆಯಿಂದ ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮ

ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ್ದ ‘ಸ್ಕೂಲ್ ಸರ್ವೆ

Shri News Desk by Shri News Desk
Oct 24, 2021, 06:18 am IST
in ರಾಷ್ಟ್ರೀಯ
Share on FacebookShare on TwitterTelegram

ಹೊಸದಿಲ್ಲಿ: ಕೋವಿಡ್-19 ಲಾಕ್‌ ಡೌನ್ ಮುನ್ನ ಶಾಲೆಗಳಲ್ಲಿ ತಾವು ಕಲಿತಿದ್ದನ್ನು ಹೆಚ್ಚಿನ ಮಕ್ಕಳು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ಎನ್ನುವುದನ್ನು ಸಂಶೋಧಕರ ತಂಡ ರೋಡ್ ಸ್ಕಾಲರ್ಸ್ ಕಳೆದ ಆಗಸ್ಟ್ ನಲ್ಲಿ ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ್ದ ‘ಸ್ಕೂಲ್ ಸರ್ವೆ ’ಯು ಬಹಿರಂಗಗೊಳಿಸಿದೆ.

ಈ ಸರ್ವೆಯ ಅಂಗವಾಗಿ ರಾಜಸ್ಥಾನದ ರಾಜಧಾನಿ ಜೈಪುರದ ಕಠಪುತಲಿ ನಗರ ಬಸ್ತಿ ಮತ್ತು ಹಥರೋಯಿ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದ ಸುದ್ದಿ ಜಾಲತಾಣ thewire.in ಶಾಲೆಗಳ ಮುಚ್ಚುವಿಕೆಯು ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮಗಳನ್ನುಂಟು ಮಾಡಿದೆ ಎಂದು ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

ಕೋವಿಡ್ ಲಾಕ್ಡೌನ್‌ ನಿಂದಾಗಿ ಶಾಲೆಗಳು ಸುದೀರ್ಘ ಅವಧಿಗೆ ಮುಚ್ಚಲ್ಪಟ್ಟ ದೇಶಗಳಲ್ಲಿ ಭಾರತವೂ ಒಂದಾಗಿದ್ದು,ದೇಶಾದ್ಯಂತ ಸರಾಸರಿ 69 ವಾರಗಳ ಕಾಲ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು ಮತ್ತು ಇದು ಕೋಟ್ಯಂತರ ಶಾಲಾ ಮಕ್ಕಳನ್ನು ಅತಂತ್ರಗೊಳಿಸಿತ್ತು. ಅಲ್ಲಿಂದೀಚಿಗೆ ಶಾಲೆಗಳ ಪುನರಾರಂಭ ಕುರಿತು ಎಲ್ಲ ಚರ್ಚೆಗಳು ಆನ್ಲೈನ್ ಶಿಕ್ಷಣದ ಸೌಲಭ್ಯವನ್ನು ಹೊಂದಿದವರಿಗೆ ಮಾತ್ರ ಸೀಮಿತವಾಗಿದ್ದು, ಅಂತರ್ಜಾಲ ಸೌಲಭ್ಯವಿಲ್ಲದ ಭಾರೀ ಸಂಖ್ಯೆಯ ಮಕ್ಕಳನ್ನು ಕಡೆಗಣಿಸಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಂಕಿಅಂಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.70ಕ್ಕೂ ಅಧಿಕ ಜನರು ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ರಾಜಸ್ಥಾನದ ಮಟ್ಟಿಗೆ ಹೇಳುವುದಾದರೆ ಬಾಂಸವಾಡಾ ಜಿಲ್ಲೆಯ ಮಾಧ್ಯಮಿಕ ಶಾಲೆಯೊಂದರಲ್ಲಿ ಕೇವಲ ಶೇ.10ರಷ್ಟು ಮಕ್ಕಳು ಸ್ಮಾರ್ಟ್‌ ಫೋನ್ ಗಳನ್ನು ಹೊಂದಿದ್ದಾರೆ ಎಂದು ಆಂಗ್ಲ ದೈನಿಕವೊಂದು ಈ ಹಿಂದೆ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಸ್ಥಿತಿ ಎಷ್ಟು ಕೆಟ್ಟದಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ.

ಆನ್ಲೈನ್ ಶಿಕ್ಷಣದ ಇನ್ನಷ್ಟು ತಳಮಟ್ಟದ ವಾಸ್ತವಗಳನ್ನು ತಿಳಿದುಕೊಳ್ಳಲು ಜೈಪುರದ ಮೇಲ್ಕಾಣಿಸಿದ ಪ್ರದೇಶಗಳಲ್ಲಿಯ ಸುಮಾರು 45 ಮನೆಗಳ ಸಮೀಕ್ಷೆಯನ್ನು thewire.in ನಡೆಸಿತ್ತು. ತುಲನಾತ್ಮಕವಾಗಿ ವಂಚಿತ ಕುಗ್ರಾಮಗಳು ಮತ್ತು ಬಸ್ತಿಗಳಲ್ಲಿಯ 1,400ಕ್ಕೂ ಅಧಿಕ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಸಮೀಕ್ಷೆಯಲ್ಲಿ ಇತರ ಅಂಶಗಳೊಂದಿಗೆ ನಗರ ಪ್ರದೇಶಗಳಲ್ಲಿ ಕೇವಲ ಶೇ.24 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.8ರಷ್ಟು ಮಕ್ಕಳು ಆನ್ಲೈನ್ನಲ್ಲಿ ವ್ಯಾಸಂಗ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಶಿಕ್ಷಣದಲ್ಲಿನ ನಗರ-ಗ್ರಾಮೀಣ ವಿಭಜನೆಯು ಸಮೀಕ್ಷೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.28ರಷ್ಟು ಮಕ್ಕಳು ನಿಯಮಿತವಾಗಿ ಶಾಲೆಗಳಿಗೆ ಹಾಜರಾಗುತ್ತಿದ್ದರು ಮತ್ತು ಶೇ.37ರಷ್ಟು ಮಕ್ಕಳು ಶಾಲೆಗಳ ದಿಕ್ಕಿಗೆ ಮುಖವನ್ನೇ ಮಾಡಿರಲಿಲ್ಲ. ಸರಳವಾದ ಓದುವಿಕೆ ಪರೀಕ್ಷೆಯಲ್ಲಿ ಸುಮಾರು ಶೇ.50ರಷ್ಟು ಗ್ರಾಮೀಣ ಮಕ್ಕಳಿಗೆ ಕೆಲವೇ ಶಬ್ದಗಳನ್ನು ಓದಲೂ ಸಾಧ್ಯವಾಗಿರಲಿಲ್ಲ ಮತ್ತು ಲಾಕ್ಡೌನ್ ಬಳಿಕ ತಮ್ಮ ಮಕ್ಕಳ ಓದುವಿಕೆ/ಬರೆಯುವಿಕೆ ಸಾಮರ್ಥ್ಯಗಳು ಕಡಿಮೆಯಾಗಿವೆ ಎಂದು ನಗರ ಪ್ರದೇಶಗಳಲ್ಲಿಯ ಮೂರನೇ ಎರಡರಷ್ಟು ಪೋಷಕರು ಭಾವಿಸಿದ್ದಾರೆ. ಶಾಲೆಗಳು ಸಾಧ್ಯವಾದಷ್ಟು ಶೀಘ್ರ ಆರಂಭಗೊಳ್ಳಬೇಕು ಎಂದು ಗ್ರಾಮೀಣ ಪ್ರದೇಶಗಳಲ್ಲಿಯ ಶೇ.97ರಷ್ಟು ಪೋಷಕರು ಬಯಸಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳು ಲಾಕ್ಡೌನ್ನಿಂದಾಗಿ ಶಾಲೆಗಳ ಮುಚ್ಚುವಿಕೆಯು ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ಉಂಟು ಮಾಡಿರುವ ವಿನಾಶಕಾರಿ ದುಷ್ಪರಿಣಾಮಗಳನ್ನು ತೋರಿಸಿದೆ. ಜೈಪುರ ಇದಕ್ಕೆ ಅಪವಾದವಾಗಿಲ್ಲ ಎನ್ನುವುದು ಅಚ್ಚರಿಯನ್ನೇನೂ ಮೂಡಿಸಿಲ್ಲ. ಆನ್ಲೈನ್ ಶಿಕ್ಷಣವನ್ನು ಪಡೆಯಲು ಸ್ಮಾರ್ಟ್ ಫೋನ್ ಗಳ ಕೊರತೆ ಮತ್ತು ರಾಜ್ಯದಲ್ಲಿ ಸುಮಾರು 8,000 ಖಾಸಗಿ ಶಾಲೆಗಳ ಮುಚ್ಚುವಿಕೆಯಿಂದಾಗಿ ಹಿಂದಿನ ವರ್ಷದ 81 ಲ.ಕ್ಕೆ ಹೋಲಿಸಿದರೆ 2020-21ರಲ್ಲಿ ಸುಮಾರು 88 ಲ.ಮಕ್ಕಳು ಸರಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಮಕ್ಕಳು ಸಮೀಪದ ಸರಕಾರಿ ಶಾಲೆಗಳಿಗೆ ದಾಖಲಾದವರು. ಈ ಮಕ್ಕಳು ಶಾಲೆಗೆ ಹೋಗುವುದು ಪಡಿತರ ವಿತರಣೆ ಸಂದರ್ಭದಲ್ಲಿ ಮಾತ್ರ. ಇದನ್ನು ಬಿಟ್ಟರೆ ಈ ಆಫ್ಲೈನ್ ಮಕ್ಕಳಲ್ಲಿ ಹೆಚ್ಚಿನವರಿಗೆ ಶಾಲೆ ಅಥವಾ ಶಿಕ್ಷಕರ ಸಂಪರ್ಕವೂ ಇಲ್ಲ,ಬೆಂಬಲವೂ ಇಲ್ಲ. ದಿನಗಳೆದಂತೆ ಮಸುಕಾಗುತ್ತಿರುವ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣುತ್ತ ಸೋಮಾರಿಗಳಾಗಿ ಮನೆಗಳಲ್ಲಿ ಕುಳಿತುಕೊಂಡು ಅಥವಾ ಮನೆಗೆಲಸಗಳಲ್ಲಿ ನೆರವಾಗುತ್ತ ಈ ಮಕ್ಕಳು ಕಾಲ ಕಳೆಯುತ್ತಿದ್ದಾರೆ.

ಬಸ್ತಿಯಲ್ಲಿನ ಹೆಚ್ಚಿನ ನಿವಾಸಿಗಳು ಬದುಕುಳಿಯಲು ಹೋರಾಡುತ್ತಿದ್ದಾರೆ. ಲಾಕ್ಡೌನ್ ಬಳಿಕ ಅಗತ್ಯ ವಸ್ತುಗಳನ್ನು ಕೊಳ್ಳಲೂ ತಮ್ಮ ಬಳಿ ಹಣವಿಲ್ಲ ಮತ್ತು ಬದುಕುಳಿಯಲು ಮಕ್ಕಳು ಶಾಲೆಯಿಂದ ತರುವ ಪಡಿತರವನ್ನೇ ನೆಚ್ಚಿಕೊಳ್ಳಬೇಕಾಗಿದೆ ಎಂದು ಹಲವಾರು ಮಹಿಳೆಯರು ಅಳಲು ತೋಡಿಕೊಂಡರು.

ಇಂತಹ ಕುಟುಂಬಗಳ ಮಕ್ಕಳ ಪಾಲಿಗೆ ಆನ್ಲೈನ್ ಶಿಕ್ಷಣವು ಒಂದು ಮಿಥ್ಯೆಯಾಗಿದೆ. ಸಮಸ್ಯೆ ಆಫ್ಲೈನ್ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವ ಮಕ್ಕಳೂ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಮಕ್ಕಳಿಗೆ ಪ್ರತಿದಿನ 10 ನಿಮಿಷ ಅವಧಿಯ ವೀಡಿಯೊ ಬಿಟ್ಟರೆ ಶಾಲೆಯಿಂದ ಅಥವಾ ಶಿಕ್ಷಕರಿಂದ ಇತರ ಯಾವುದೇ ಬೆಂಬಲ ದೊರಕಿಲ್ಲ.

ದೇಶದಲ್ಲಿ ಶಾಲೆಗಳ ಮುಚ್ಚುವಿಕೆಯು ಮಕ್ಕಳ ಶಿಕ್ಷಣದ ಮೇಲೆ,ವಿಶೇಷವಾಗಿ ದುರ್ಬಲ ಜಾತಿಗಳು ಮತ್ತು ವರ್ಗಗಳ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿವೆ ಎನ್ನುವುದನ್ನು ಸಮೀಕ್ಷೆಯ ಫಲಿತಾಂಶಗಳು ಸ್ಪಷ್ಟಪಡಿಸಿವೆ. ನಾವು ನಮ್ಮ ಮಕ್ಕಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಶಾಲೆಗಳ,ವಿಶೇಷವಾಗಿ ರಾಜಸ್ಥಾನ ಮತ್ತು ಇತರ ಕಡೆಗಳಲ್ಲಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಮಟ್ಟಗಳಲ್ಲಿ ಶಾಲೆಗಳ ಪುನರಾರಂಭದ ತುರ್ತು ಅಗತ್ಯವಿದೆ ಎಂದು thewire.in ವರದಿಯಲ್ಲಿ ಒತ್ತಿ ಹೇಳಿದೆ.

e Paper – October 24, 2021

Achievement: ಗುರಿಯೊಂದಿಗೆ ಕಠಿಣ ಪರಿಶ್ರಮವಿದ್ದಾಗ ಸಾಧನೆ ಫಲ ಸಿಗಲಿದೆ

Tags: School SurveyTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In