Madhya Pradesh crime News: ಇಂದಿನ ಕಾಲದ ಮಕ್ಕಳು ಅದೆಷ್ಟು ಸೆನ್ಸಿಟಿವ್ ಅನ್ನೋದು ಹಲವು ಪ್ರಕರಣಗಳ ಮೂಲಕ ಗೊತ್ತಾಗುತ್ತಿದೆ. ಅಪ್ಪ ಅಮ್ಮ ಬೈದರೆಂದು, ಟಿವಿ ನೋಡಬೇಡ ಎಂದು ಬುದ್ಧಿ ಹೇಳಿದರೆಂದು, ಆಟಿಕೆ ಕೊಡಿಸಲಿಲ್ಲವೆಂದು, ಮೊಬೈಲ್ ಕೊಡಿಸಲಿಲ್ಲವೆಂದು ಎಷ್ಟೋ ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯ ಬಗ್ಗೆ ನಾವು ಕೇಳಿರುತ್ತೇವೆ.
ಅದೇ ರೀತಿ ಮಧ್ಯಪ್ರದೇಶದಲ್ಲೂ ಇಂಥದ್ದೇ ಘಟನೆ ನಡೆದಿದ್ದು, ತಾಯಿ ತನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಿಲ್ಲವೆಂದು 10 ವರ್ಷದ ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಮಧ್ಯಪ್ರದೇಶದ ಬೇಧ್‌ಘಾಟ್ ಎಂಬಲ್ಲಿ ತಾಯಿ ಪ್ರವಾಸಕ್ಕೆ ಹೊರಟಿದ್ದಳು. 5ನೇ ತರಗತಿಯಲ್ಲಿ ಓದುತ್ತಿದ್ದ ಆಕೆಯ ಮಗಳೂ ಕೂಡ, ತಾನೂ ಪ್ರವಾಸಕ್ಕೆ ಬರುತ್ತೇನೆಂದು ಹಠ ಹಿಡಿದಿದ್ದಾಳೆ. ಆದರೆ ತಾಯಿ ಆಕೆಯನ್ನು ಬಿಟ್ಟು ಪ್ರವಾಸಕ್ಕೆ ಹೋಗಿದ್ದಾಳೆ.
ತಾಯಿ ಬರುವುದರೊಳಗೆ ಮಗಳು, ಮನೆಯ ಕಿಟಕಿಗೆ ಹಾಕಿದ್ದ ಕರ್ಟನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಶವ ಪರೀಕ್ಷೆ ಕೂಡ ನಡೆಸಲಾಗಿದೆ.
ನಿಮ್ಮ ಉಪ ಮುಖ್ಯಮಂತ್ರಿ ಮಹಾಶಯ ಪೆನ್ ಡ್ರೈವ್ ಹಂಚಿಕೆಯಲ್ಲಿ ಶಾಮೀಲಾಗಿಲ್ಲವೇ?: ಸಿಎಂಗೆ ಹೆಚ್ಡಿಕೆ ಪ್ರಶ್ನೆ
ತಾಲೂಕು, ಜಿಲ್ಲಾ ಪಂಚಾಯತ್, ಬಿಬಿಎಂಪಿ ಚುನಾವಣೆ ಬಗ್ಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
Discussion about this post