Political News: ಸಿಎಂ ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಹೇಳಿಕೆ ನೀಡುತ್ತ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದು ಬೇಡ ಎಂದಿದ್ದರು. ಈ ವೇಳೆಯೇ ಅವರು ಹಲವು ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವರ್ತಿಸಿದ ರೀತಿ, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ, ಬಿಜೆಪಿ ಸುದ್ದಿಯಂದು ಆಹಾರವಾಗಿ ಸಿಕ್ಕಿದೆ.
ಬೆಳಗಾವಿಯಲ್ಲಿ ಬೆಲೆ ಏರಿಕೆ ವಿಷಯಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭ”ನಾ ಕಾರ್ಯಕ್ರಮ ನಡೆಸಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಅಲ್ಲಿದ್ದ ಕೆಲ ಮಹಿಳಾ ಮಣಿಗಳು ಧಿಕ್ಕಾರ ಕೂಗಲು ಶುರು ಮಾಡಿದರು. ಆದರೆ ಅವರನ್ನು ತಡೆಯುವ ಕೆಲಸವನ್ನು ಯಾರೂ ಮಾಡಲೇ ಇಲ್ಲ. ಹೀಗಾಗಿ ತಾಳ್ಮೆ ಕಳೆದುಕ“ಂಡ ಸಿಎಂ, ಯಾರಯ್ಯಾ ಎಸ್‌ಪಿ, ಬಾರಯ್ಯಾ ಇಲ್ಲಿ ಅಂತಾ ಏಕವಚನದಲ್ಲೇ ಪೋಲೀಸ್ ಅಧಿಕಾರಿಯನ್ನು ಸಂಬೋಧಿಸಿ, ಕರೆದಿದ್ದಾರೆ. ಎಸ್‌ಪಿ ಬಂದ ಬಳಿಕ, ಅವರನ್ನು ಬಡಿಯಲು ಕೈ ಎತ್ತಿದ್ದಾರೆ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಸೇರಿ, ಬಿಜೆಪಿ, ಜೆಡಿಎಸ್ ನಾಯಕರೂ ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳೆಂದರೆ ಕಾಂಗ್ರೆಸ್ಸಿಗರ ಅಡಿಯಾಳುಗಳಲ್ಲ! ಸಿಎಂ @siddaramaiah
ನವರೇ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಗಳಾಗಿ ಬದಲಾಯಿಸಿದ್ದು, ಪೊಲೀಸ್ ಅಧಿಕಾರಿಗಳನ್ನು ನಿಮ್ಮ ಆಳುಗಳು ಎಂದು ಭಾವಿಸಿದ್ದೀರಾ? ಪೊಲೀಸ್ ಅಧಿಕಾರಿಯ ಮೇಲೆ ಏಕವಚನ ಪ್ರಯೋಗಿಸಿದ್ದೂ ಅಲ್ಲದೇ ಹೊಡೆಯಲಿ ಕೈ ಎತ್ತಿದ್ದು ಖಂಡನೀಯ. ಈ ಹಿಂದೆ ವಿಜಯನಗರ ಡಿಸಿ ಮೇಲೂ ಏಕವಚನದಿಂದ ಬೈದು ಕುರ್ಚಿಯಿಂದ ಎಬ್ಬಿಸಿ ಆಚೆ ಕಳುಹಿಸಿದ್ದಿರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ತಮ್ಮ ಹಿರಿತನವನ್ನು ತೋರಬೇಕಿದ್ದು ಕೆಲಸ ಕಾರ್ಯ, ರಾಜ್ಯದ ಅಭಿವೃದ್ಧಿಗಳಿಂದಲೇ ಹೊರತು ಈ ರೀತಿಯ ದರ್ಪ ದುರಹಂಕಾರದ ಮಾತುಗಳಿಂದಲ್ಲ. ಈ ರೀತಿಯ ವರ್ತನೆ ಮುಖ್ಯಮಂತ್ರಿ ಕುರ್ಚಿಗೆ ಶೋಭೆ ತರುವಂಥದ್ದಲ್ಲ ಎಂದು ಪ್ರೀತಂ ಗೌಡ Tweet ಮೂಲಕ ಕಿಡಿಕಾರಿದ್ದಾರೆ.
ಕಾಂಗ್ರೆಸ ಸರ್ಕಾರ ಕೇವಲ ದುರಾಡಳಿತದಲ್ಲಿ ಮಾತ್ರವಲ್ಲ ದುರಹಂಕಾರದಲ್ಲೂ ಪರಮಾವಧಿ ಮೀರಿದೆ. ಅಧಿಕಾರದ ಮದದಲ್ಲಿ ಮುಖ್ಯಮಂತ್ರಿಗೆ ಒಬ್ಬ ಕರ್ತವ್ಯ ನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ದರ್ಪ ಬಂದಿದೆ… ಸಂವಿಧಾನದ ರಕ್ಷಣೆ ಎಂದು ನಾಟಕ ಮಾಡಿ, ಕಾನೂನಿನ ರಕ್ಷಕರ ಮೇಲೆ ಕೈ ಎತ್ತುತ್ತಿರುವದು ಅತಿರೇಕದ ವರ್ತನೆ ಹಾಗೂ ದರ್ಪವನ್ನು ಎಸೆಗುವ ಕೃತ್ಯ. ಇದು ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾಾದ್ ಜೋಶಿ ಹೇಳಿದ್ದಾರೆ. ಇನ್ನು ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಸಿಎಂ ಅವರ ಈ ವರ್ತನೆಯನ್ನು ಅಧಿಕಾರದ ಮದ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಈ ಬಗ್ಗೆ, ಈ ರೀತಿಯಾಗಿ ಆಕ್ರೋಶ ಹ“ರಹಾಕಿದ್ದಾರೆ.
ಪಾಕಿಸ್ತಾನದ ಪರ ಸಹಾನುಭೂತಿ ಮಾತನಾಡಿ ಅಖಂಡ ಭಾರತದ ಏಕತೆಯ ನಡುವೆ ಬಿರುಕು ಮೂಡಿಸುವ ಮಾತನಾಡಿರುವ ಮುಖ್ಯಮಂತ್ರಿ @siddaramaiahನವರ ವಿರುದ್ಧ ಇಂದು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳು ಸಮವಸ್ತ್ರದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ.
ಅಧಿಕಾರ ಮದದಲ್ಲಿ ತೇಲುತ್ತಿರುವ ಸಿದ್ದರಾಮಯ್ಯನವರ ನಡೆ, ನುಡಿಗಳು ಇತ್ತೀಚಿನ ದಿನಗಳಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಕೆಲ ತಿಂಗಳ ಹಿಂದೆ ಸಭೆಯೊಂದರಲ್ಲಿ ದಕ್ಷ ಜಿಲ್ಲಾಧಿಕಾರಿಯೊಬ್ಬರನ್ನು ಕೇವಲವಾಗಿ ಅಪಮಾನಿಸಿ, ತಮ್ಮ ಸಂಸ್ಕೃತಿ ಹೀನ ನಡುವಳಿಕೆಯನ್ನು ಸಿದ್ದರಾಮಯ್ಯನವರು ಅನಾವರಣ ಮಾಡಿಕೊಂಡಿದ್ದರು. ಅವರ ವರ್ತನೆ ಇಂದು – ನಿನ್ನೆಯದಲ್ಲ, ತಮ್ಮ ಸ್ವಕ್ಷೇತ್ರದಲ್ಲಿ ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ಪ್ರದರ್ಶಿಸಿದ ಘಟನೆ ಇನ್ನೂ ಹಸಿಯಾಗಿಯೇ ಇದೆ. ಅದೇ ರೀತಿ ಮೈಸೂರು ಭಾಗದ ಹಿರಿಯ ರಾಜಕಾರಿಣಿಯಾಗಿದ್ದ ನಂಜನಗೂಡಿನ ದಿವಂಗತ ಎಂ.ಮಹದೇವು ಅವರ ಮೇಲೂ ಹಲ್ಲೆ ನಡೆಸಿದ ಪ್ರಕರಣವನ್ನು ಮಾಧ್ಯಮಗಳು ʼಸಿದ್ದು-ಗುದ್ದುʼ ಪ್ರಕರಣ ಎಂದೇ ವ್ಯಾಖ್ಯಾನಿಸಿದ್ದವು.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅನುಭವದ ಹಿರಿತನ, ನಡುವಳಿಕೆ, ಹಾಗೂ ಮಾತುಗಳನ್ನು ಮಾಗಿಸಬೇಕು, ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಇದು ತಿರುಗು-ಮುರುಗಾಗಿದೆ, ದಿನೇ ದಿನೇ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಜನರು ಹಾಗೂ ಅಧಿಕಾರಿಗಳ ಮೇಲೆ ಅಹಂಕಾರ ಹಾಗೂ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಹಾಗೂ ಖಂಡನೀಯ ವರ್ತನೆಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಹುದೊಡ್ಡ ಹಿನ್ನೆಲೆಯಿದೆ, ಆ ಸ್ಥಾನದಲ್ಲಿ ಕುಳಿತ ಅನೇಕ ಮಹನೀಯರು ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮೇರುಮಟ್ಟಕ್ಕೆ ಕೊಂಡೊಯ್ದಿದ್ದಾರೆ, ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ.
ಕರ್ನಾಟಕ ಎಂದರೆ ಸಜ್ಜನಿಕೆಯ ರಾಜಕಾರಣ, ಸಂಸ್ಕೃತಿ-ಸಂಸ್ಕಾರದ ನೆಲೆಬೀಡು ಎಂಬ ಮಾತಿದೆ, ಆದರೆ ಸಿದ್ದರಾಮಯ್ಯನವರ ವರ್ತನೆಯಿಂದಾಗಿ ಇತಿಹಾಸದ ಪರಂಪರೆಗೆ ಕಪ್ಪು ಮಸಿ ಬಳಿಯುತ್ತಿದೆ. ಕರ್ನಾಟಕದ ಗೌರವ ಹಾಗೂ ಮುಖ್ಯ ಮಂತ್ರಿ ಸ್ಥಾನದ ಘನತೆ ಸಂಪೂರ್ಣ ಕುಗ್ಗುತ್ತಿದೆ. ರಾಷ್ಟ್ರ ಭಕ್ತರೆಂದರೆ ಕೆಂಡಕಾರುವ, ದೇಶ ಸುರಕ್ಷತೆಯ ಬಗ್ಗೆ ಉಡಾಫೆಯ ಮಾತನಾಡುವ ಸಿದ್ದರಾಮಯ್ಯನವರಿಂದಾಗಿ ಇಡೀ ರಾಷ್ಟ್ರ ‘ಭಾರತದ ಸುಭದ್ರತೆಗೆ’ ಒಕ್ಕೊರಲ ದನಿಯಾಗಿ ನಿಂತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಮುಖ್ಯಮಂತ್ರಿ ವರ್ತಿಸುತ್ತಿದ್ದಾರೆ.
ಕರ್ನಾಟಕದ ಜನತೆಯ ದೇಶಾಭಿಮಾನವನ್ನು ಮೆಟ್ಟಿ ನಿಲ್ಲುವ ವರ್ತನೆ ಸಿದ್ದರಾಮಯ್ಯನವರು ತೋರುತ್ತಿದ್ದಾರೆ, ಅದರ ಮುಂದುವರೆದ ಭಾಗ ಬೆಳಗಾವಿಯ ಘಟನೆ. ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗುವ ಮೂಲಕ ರಾಷ್ಟ್ರ ಭಕ್ತಿ ಮೆರೆದ ದಿಟ್ಟ ಮಹಿಳೆಯರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಕರ್ತವ್ಯ ನಿರತ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ದರ್ಪ ತೋರಿ ಅವರ ಮೇಲೆ ಹಲ್ಲೆಗೆ ಮುಂದಾದ ಸಿದ್ದರಾಮಯ್ಯನವರ ವರ್ತನೆ ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅವಮಾನಕ್ಕೊಳಗಾದ ಪೊಲೀಸ್ ಅಧಿಕಾರಿ ಹಾಗೂ ಇಡೀ ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ.
ಸರ್ಕಾರಿ ಅಧಿಕಾರಿಗಳೆಂದರೆ ಕಾಂಗ್ರೆಸ್ಸಿಗರ ಅಡಿಯಾಳುಗಳಲ್ಲ!
ಸಿಎಂ @siddaramaiah ನವರೇ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಗಳಾಗಿ ಬದಲಾಯಿಸಿದ್ದು, ಪೊಲೀಸ್ ಅಧಿಕಾರಿಗಳನ್ನು ನಿಮ್ಮ ಆಳುಗಳು ಎಂದು ಭಾವಿಸಿದ್ದೀರಾ? ಪೊಲೀಸ್ ಅಧಿಕಾರಿಯ ಮೇಲೆ ಏಕವಚನ ಪ್ರಯೋಗಿಸಿದ್ದೂ ಅಲ್ಲದೇ ಹೊಡೆಯಲಿ ಕೈ… pic.twitter.com/tbkJCPeDQ4— Preetham J Gowda (@preethamgowda_j) April 28, 2025
Discussion about this post