ಕೋಲಾರ: ಟೊಮೋಟೋ ಬೆಲೆ ದಿಢೀರ್ ಕುಸಿತಗೊಂಡಿದ್ದು, ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯ ರೈತರಿಗೆ ಆತಂಕ ತರಿಸಿದೆ. ಶುಕ್ರವಾರ ಮತ್ತು ಶನಿವಾರ ಟೊಮ್ಯಾಟೋ ಬೆಲೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದು, 15 ಕೆಜಿ ಟೊಮ್ಯಾಟೋಗೆ 400 ರಿಂದ 500 ರೂಪಾಯಿ ನಿಗದಿಯಾಗಿದೆ.
15 ಕೆಜಿ ಬಾಕ್ಸ್ ಟೊಮ್ಯಾಟೋಗೆ ಗುರುವಾರ 800 ರಿಂದ 1000 ರೂಪಾಯಿ ಬೆಲೆ ಇತ್ತು. ಆದರೆ ಶುಕ್ರವಾರ ಮತ್ತು ಶನಿವಾರ 400 ರಿಂದ 500 ರೂಪಾಯಿಗೆ ಕುಸಿದಿದೆ. ಇದರಿಂದಾಗಿ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ರೈತರು ತಾವು ಬೆಳೆದ ಟೊಮ್ಯಾಟೋವನ್ನ ಜೂಜಾಟಕ್ಕೆ ಇಟ್ಟಂತ್ತಾಗಿದೆ.
ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ ಅಪಾರ ಬೆಳೆ ನಾಶವಾಗಿದ್ದು, ಟೊಮೆಟೋ ಬೆಲೆ ದಿಢೀರನೇ ಗಗನಕ್ಕೇರಿತ್ತು. ಇದರಿಂದಾಗಿ ಜನಸಾಮಾನ್ಯರು ತೀವ್ರ ಆತಂಕಕ್ಕೊಳಗಾಗಿದ್ದರು. ಅದರಲ್ಲಿಯೂ ಪ್ರತಿ ಕೆಜಿಗೆ ಟೊಮೆಟೊ ಬೆಲೆ 90-100 ರೂ.ಗಳಾಗಿದ್ದು, ಜನಸಾಮಾನ್ಯರ ಪಾಲಿಗೆ ಇದು ಬಿಸಿ ತುಪ್ಪದಂತಾಗಿದೆ.
ಹಾಪ್ ಕಾಮ್ಸ್‍ನಲ್ಲಿ ಒಂದು ಕೆಜಿ ಟೊಮೆಟೊಗೆ 90 ರೂ. ಇತ್ತು, ಆನ್‍ಲೈನ್‍ನಲ್ಲಿ ಖರೀದಿಸುವವರಿಗೆ 98 ರೂಪಾಯಿ ಆಗಿದೆ. ಸೇಬಿಗಿಂತ ಟೊಮೆಟೊಗೆ ಅಧಿಕ ಬೆಲೆಯಾಗಿತ್ತು. ಆದರೀಗ ಟೊಮೋಟೋ ಬೆಲೆ ಕುಸಿತ ಜನಸಾಮಾನ್ಯರಿಗೆ ಸಂತಸ ತಂದಿದ್ದರೆ, ರೈತರ ಪಾಲಿಗೆ ಬೇಸರ ತರಿಸಿದೆ.
́Sudden fall in tomato prices

























Discussion about this post