ಭಾರತೀಯ ಸೇನೆ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಒದಗಿಸಿಕೊಟ್ಟ ದಿನವಿಂದು. ಭಾರತದಾದ್ಯಂತ ವಿಜಯ ದಿವಸವೆಂದು ಆಚರಿಸಲಾಗುವ ಈ ದಿನದಂದು ಹಲವು ಗಣ್ಯರು ಸೈನಿಕರ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.
ವಿಜಯ್ ದಿವಸ್, ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿದ ಐತಿಹಾಸಿಕ ದಿನವಾಗಿದೆ. ದೇಶಕ್ಕಾಗಿ ಹೋರಾಡಿದ ನಮ್ಮ ಧೀರ ಹೃದಯಗಳಿಗೆ ನಾನು ವಂದಿಸುತ್ತೇನೆ. ಬನ್ನಿ ಈ #SwarnimVijayVarsh ದಂದು ನಮ್ಮ ಧೀರರನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ನೀಡಿ ಅಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿದ #VijayDiwas ರಂದು ಭಾರತೀಯ ಯೋಧರ ಶೌರ್ಯ, ತ್ಯಾಗ, ಸಮರ್ಪಣೆಗೆ ಗೌರವದ ಪ್ರಣಾಮಗಳನ್ನು ಸಲ್ಲಿಸೋಣ. ಪಾಕಿಸ್ತಾನಕ್ಕೆ ಪಾಠ ಕಲಿಸಿ ಭಾರತದ ಶಕ್ತಿ ತೋರಿದ ಯೋಧರ ಸಾಹಸ, ರಾಷ್ಟ್ರಪ್ರೇಮ ಸ್ಮರಣಾರ್ಹವಾಗಿದೆ ಎಂದುಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.
ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಶ್ತೀಮತಿ ಇಂದಿರಾ ಗಾಂಧಿ ಅವರ ದಿಟ್ಟ, ಚಾಣಾಕ್ಷ ನಿರ್ಧಾರಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದು, ಪೂರ್ವ ಪಾಕಿಸ್ತಾನವನ್ನು ಅದರ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸಿ ’ಬಾಂಗ್ಲಾದೇಶ’ ಉದಯಕ್ಕೆ ಕಾರಣವಾದ, ಐತಿಹಾಸಿಕ ’ವಿಜಯ ದಿನ’ದಂದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ, ಬಲಿದಾನವನ್ನು ಸ್ಮರಿಸುತ್ತೇವೆ ಎಂದು ಐಎನ್ ಸಿ ಕರ್ನಾಟಕ ಕೂ ಮಾಡಿದೆ.
”You surrender or we wipe you out”- Field Marshal Sam Manekshaw to Pakistan on 13th December 1971. ಬಾಂಗ್ಲಾದೇಶದ ವಿಮೋಚನೆ ಯುದ್ಧದ ಸಂದರ್ಭದಲ್ಲಿ ವೀರ ಸೇನಾಧಿಕಾರಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ದಿಟ್ಟ ನಾಯಕತ್ವದ ಪರಿಣಾಮ, 93,000 ಪಾಕ್ ಸೈನಿಕರು ಭಾರತಕ್ಕೆ ಶರಣಾಗಿದ್ದರು. Commemorating #SwarnimVijayVarsh ಎಂದು ಸಚಿವ ಕೆ. ಸುಧಾಕರ್ ಕೂ ಮಾಡಿದ್ದಾರೆ.
\
ಇದನ್ನೂ ಓದಿ: ಜನವರಿ 18ರಿಂದ ಕೋವಿಡ್ ನಿಯಮ ಕಟ್ಟುನಿಟ್ಟೆಂದ ಗೂಗಲ್
(Vijay Diwas celebration in Koo App by karnataka CM Basavaraj Bommai and many more)
Discussion about this post