ಚಿಕ್ಕಮಗಳೂರು: ವೈರಸ್ ಭಯ ಹುಟ್ಟಿಸಿ ವ್ಯಾಪಾರ ವಹಿವಾಟು ನಿಲ್ಲುವಂತೆ ಆಗಬಾರದು ರೂಪಾಂತರಿ ವೈರಸ್ ಬಗ್ಗೆ ಮಾಹಿತಿ ಬರುತ್ತಿದ್ದು ಸುಮ್ಮನೆ ಭಯ ಉಂಟುಮಾಡಿ, ಎಲ್ಲಾ ವ್ಯಾಪಾರ ವಹಿವಾಟನ್ನು ನಿಲ್ಲಿಸುವಂತೆ ಆಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಳಿಸಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಖರವಾಗಿ ಯಾವುದೇ ಪ್ರಕರಣಗಳು ಹೊರಬರುತ್ತಿಲ್ಲ. ಅಲ್ಲಿ, ಇಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ. ಎಲ್ಲೂ ಭಯದ ವಾತಾವರಣ ಸೃಷ್ಟಿಸಬಾರದು. ಸರ್ಕಾರ, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.
ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ. ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿ, ಕೋವಿಡ್ ಪರಿಣಾಮವಾಗಿ ಈಗಾಗಲೇ ಜನರು ನರಳುತ್ತಿರುವುದನ್ನು ಕಾಣುತ್ತಿದ್ದೇವೆ. ಎಲ್ಲರನ್ನೂ ಸೇಫ್ ಮಾಡಲು ಸರ್ಕಾರ ಮುಂದಾಗಬೇಕು. ಇದರಲ್ಲೂ ಕೂಡ ಲಂಚ ಹೊಡೆಯೋದನ್ನು ಸರ್ಕಾರ ಬಿಡಬೇಕು ಎಂದು ಟೀಕಿಸಿದರು
ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಯಾವುದಾದರೂ ಇದ್ದರೆ, ಅದು ಕರ್ನಾಟಕ ಸರ್ಕಾರ ಎಂದು ಹೇಳಿ, ಈ ಸರ್ಕಾರ ಹೆಣದ ಮೇಲೂ ಹಣ ವಸೂಲಿ ಮಾಡುತ್ತಿದೆ. ಕೃಷಿಕರು, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಶೋಭಾ ಕರಂದ್ಲಾಜೆ, ಸಿ ಟಿ ರವಿ ಯಾರೂ ಮಾತನಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

























Discussion about this post