ಬೆಂಗಳೂರು: ಬಿಬಿಎಂಪಿಯಿಂದ ರಾಜ್ಯದ ರಾಜದಾನಿ ಬೆಂಗಳೂರು ಮಹಾನಗರದಲ್ಲಿ ಅನಧಿಕೃತವಾಗಿ (ಒಪ್ಪಿಗೆ ಪಡೆಯದೆ) ನಿರ್ಮಿಸಲಾಗಿದ್ದ ವಿವಿಧ ನಾಯಕರ ಪುತ್ಥಳಿಗಳನ್ನು ತೆರವುಗೊಳಿಸಲು ಮುಂದಾಗಿದೆ. ಬಿಬಿಎಂಪಿ ಸರ್ವೆ ಮಾಡಿದ್ದ ಪ್ರಕಾರ, ಅನುಮತಿ ನೀಡಿರದ ಪುತ್ಥಳಿಗಳನ್ನು ಮಾತ್ರ ತೆರವು ಮಾಡಲು ಯೋಜನೆ ನಡೆಸಿದೆ.
ಬಸವಣ್ಣ, ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಸುಮಾರು ಐನೂರಕ್ಕೂ ಅಧಿಕ ಪುತ್ಥಳಿಗಳನ್ನು ಈಗ ತೆರವುಗೊಳಿಸಬೇಕಗಿದೆ. ಪಾಲಿಕೆ ಅನುಮತಿ ಪಡೆಯದೆ ರಾಜಧಾನಿಯ ಪ್ರಮುಹ ವೃತ್ತಗಳು, ರಸ್ತೆಗಳಲ್ಲಿ ಇವುಗಳನ್ನು ನಿರ್ಮಿಸಲಾಗಿತ್ತು.
ಇದರ ಬೆನ್ನಲ್ಲೇ ಜನಪ್ರಿಯ ನಾಯಕರ ಪುತ್ಥಳಿ ತೆರವು ಮಾಡುವುದು ವಿವಾದಕ್ಕೆ ಸಹ ಕಾರಣವಾಗಿದೆ.

























Discussion about this post