ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇವತ್ತಿನಿಂದಲೇ ಆನ್ ಲೈನ್ ಮುಖಾಂತರ ಪಾಸ್ ವಿತರಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಸುದ್ಧಿಗಾರರಿಗೆ ತಿಳಿಸಿದ್ದಾರೆ.
ನಗರದಲ್ಲಿ ಈ ವಿಷಯ ತಿಳಿಸಿದ ಅವರು ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರವೇ ಬಸ್ ಪಾಸ್ ಡೌನ್ ಲೋಡ್ ಮಾಡಿಕೊಳ್ಳಬಹುದು ಹಾಗೂ ಬಸ್ ಪಾಸ್ ದರದಲ್ಲಿ ಯಾವುದೇ ಹೆಚ್ಚಳ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದರೂ ಸಹ ಬಸ್ ಪಾಸ್ ಏರಿಕೆ ಮಾಡಿಲ್ಲ, ಡೀಸಲ್ ದರ ಏರಿಕೆಯ ಜೊತೆಗೆ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದ್ದು ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಬಸ್ ಗಳನ್ನು ಸಾರಿಗೆ ವ್ಯವಸ್ಥೆಯಲ್ಲಿ ಅಳವಡಿಸುವುದರಿಂದ ನಷ್ಟ ಕಡಿತ ಮಾಡಬಹುದು. ಜನರಿಗೆ ಸಹ ಹೊರೆ ಆಗದಂತೆ ಲಾಭ ಮಾಡಬೇಕಾಗಿದೆ. ಸೇವೆಯ ಜೊತೆಗೆ ಲಾಭ ಮಾಡುವ ಕಡೆಗೆ ಆಸಕ್ತಿ ವಹಿಸಿರುವುದಾಗಿ ಹೇಳಿದರು.

























Discussion about this post