ಉಡುಪಿ: ಎರಡು ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಕೊರೊನಾ ನಿರ್ವಹಣೆಯಲ್ಲಿ ದಕ್ಷತೆ ಪ್ರದರ್ಶಿಸಿದ್ದ ಡಾ. ಜಗದೀಶ್ ಭಡ್ತಿ ಪಡೆದಿದ್ದು, ಇದೀಗ ನೂತನ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಜಗದೀಶ್ ಅವರು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದು, ಉಡುಪಿ ಜಿಲ್ಲಾಧಿಕಾರಿಯಾಗಿ ಕೂರ್ಮ ಎಂ. ರಾವ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಈಶಾನ್ಯ ಸಾರಿಗೆ ವಿಭಾಗದಲ್ಲಿ ಕೂರ್ಮ ಅವರು ಎಂಡಿ ಆಗಿದ್ದರು. ಇದೀಗ ಈಶಾನ್ಯ ಸಾರಿಗೆ ವಿಭಾಗದ ಎಂಡಿ ಆಗಿ ಯಶವಂತರಾವ್ ನೇಮಕವಾಗಿದ್ದಾರೆ.

























Discussion about this post