ಮುಂಬೈ: ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುವಾಗ ಸಿಕ್ಕಿಬಿದ್ದಿರುವ ಶಾರುಖ್ ಖಾನ್ ಪುತ್ರ ತಾನು ನಾಲ್ಕು ವರ್ಷಗಳಿಂದ ಸತತವಾಗಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್ ಸಿಬಿ ಖಚಿತಪಡಿಸಿದೆ.
ಯುಕೆ, ದುಬೈ ಮೊದಲಾದ ಕಡೆ ವಿಹಾರಕ್ಕೆ ಎಂದು ತೆರಳಿದಾಗಲೂ ಸಹ ಡ್ರಗ್ಸ್ ಸೇವಿಸುವ ಚಟ ಇರಿಸಿಕೊಂಡಿದ್ದ ಎಂದು ತನಿಖೆ ಬಹಿರಂಗಪಡಿಸಿದೆ. ಎನ್ ಸಿಬಿ ಬಂಧಿಸುವಾಗಲೇ ಆರ್ಯನ್ ಖಾನ್ ಜೋರಾಗಿ ಅತ್ತಿದ್ದ ಹಾಗೂ ತನ್ನ ಡ್ರಗ್ಸ್ ಸೇವನೆ ಕುರಿತಂತೆ ಸತ್ಯಾಂಶ ತಿಳಿಸಿದ್ದಾನೆ ಎನ್ನಲಾಗಿದೆ.
ಐಷಾರಾಮಿ ಕ್ರೂಸ್ ಹಡಗಿನಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು ೮ ಮಂದಿಯನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದರು. ದೆಹಲಿ ಮೂಲದ ಕಂಪನಿಯೊಂದ ಕ್ರೂಸ್ ಹಡಗಿನಲ್ಲಿ ಪಾರ್ಟಿ ಆಯೋಜಿಸಿತ್ತು.
ಸದರಿ ಪಾರ್ಟಿಗೂ ತನಗೂ ಸಂಬಂಧವಿಲ್ಲ ಎಂದು ಹಡಗು ಕಂಪನಿ ತಿಳಿಸಿದೆ.
ಮುನ್ ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಜೋಕರ್ ಬಂಧಿತರಾಗಿದ್ದಾರೆ. ಇವರಲ್ಲಿ ಆರ್ಯನ್ ಖಾನ್ ಗೆ ಅರ್ಬಾಜ್ ಮರ್ಚಂಟ್ ಜೊತೆಗೆ ಸುಮಾರು ೧೫ ವರ್ಷಗಳಿಂದ ಸ್ನೇಹ ಇದೆ ಎಂದು ಖಚಿತವಾಗಿದೆ. ಬಹುಶಃ ಮಿತ್ರತ್ವದಿಂದಲೇ ಇಂಥಾ ಚಟ ಕಲಿತಿರಬಹುದು

























Discussion about this post