ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ನಾನು, ರಮ್ಯ, ಧೃವ ನಾರಾಯಣ್ ಸಂಸದರಾಗಿದ್ದಾಗ ಆದ ಯೋಜನೆಗಳು ಎಂಬುದನ್ನು ಹಳ್ಳಿ ಹಕ್ಕಿ ಸಾರಿ ಸಾರಿ ಹೇಳಿದೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ತಮ್ಮ ಪಕ್ಷದವರಾದ ಪ್ರತಾಪ್ ಸಿಂಹ ವಿರುಧ್ಧ ವಾಗ್ದಾಳಿ ನಡೆಸಿದ್ದರು.
‘ಬೆಂಗಳೂರು- ಮೈಸೂರು ಹೆದ್ದಾರಿ ನೀವೇ ಮಾಡಿ, ಕಡಿದು ಕಟ್ಟೆಗೆ ಹಾಕಿದ್ದು ಎಂದು ಸುಳ್ಳು ಹೇಳುವುದು ಸರಿಯಲ್ಲ, ನೀವು ಹೊಸದಾಗಿ ಮಾಡಿಸಿದ್ದರೆ ಹೇಳಿ’ ಎಂದಿದ್ದಾರೆ. ‘ಎಲ್ಲಾ ಜಾತಿಗೂ ಪ್ರಾಧಿಕಾರ ಇರೋವಾಗ, ದಸರಾ ಪ್ರಾಧಿಕಾರ ಏಕಿಲ್ಲ? ಮೊದಲು ಪ್ರಾಧಿಕಾರ ರಚಿಸಿ, ನಂತರ ದಸರಾ ಆಚರಿಸಿ’ ಎಂದು ವಿಶ್ವನಾಥ್ ಹೇಳಿದ್ದಾರೆ. ಇದೇ ವೇಳೆ ‘ಸರ್ಕಾರ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸಿದ್ದಾರಾ? ಎಂದು ಪರಿಶೀಲನೆ ನಡೆಸಬೇಕು’ ಎಂಬುದಾಗಿ ಸಲಹೆ ನೀಡಿದ್ದಾರೆ.

























Discussion about this post