ಬೆಂಗಳೂರು: ತಾಲಿಬಾನಿಗಳು ವಶಪಡಿಸಿಕೊಂಡ ಅಫ್ಘಾನಿಸ್ತಾನ ದೇಶದಿಂದ 7 ಮಂದಿ ಕನ್ನಡಿಗರು ಸಹ ನೂರಾರು ಮಂದಿ ಭಾರತೀಯರೊಂದಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಬೆಂಗಳೂರಿನ ಒಬ್ಬರು, ಮಂಗಳೂರಿನ ಐವರು ಹಾಗೂ ಬಳ್ಳಾರಿಯ ಒಬ್ಬರು ಕಾಬೂಲ್ ನಿಂದ ಹೊರಟು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬಂದಿದ್ದು, ಇನ್ನೂ ಮೂವರು ಅಲ್ಲಿಯೇ ಇದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ಹಂಚಿವೆ.
ಬೆಂಗಳೂರು, ಮಾರತ್ತಳ್ಳಿಯ ಹೀರಕ್ ದೇಬನಾಥ್, ಬಳ್ಳಾರಿಯ ತನ್ವೀರ್ ಬಳ್ಳಾರಿ ಅಬ್ದುಲ್ -ಸಂಡೂರು, ದಿನೇಶ್ ರೈ- ಬಜ್ಪೆ, ಮಂಗಳೂರು, ಜಗದೀಶ ಪೂಜಾರಿ-ಮೂಡಬಿದ್ರೆ, ಮಂಗಳೂರು, ಶ್ರವಣ ಅಂಚನ್-ಮಂಗಳೂರು, ಪ್ರಸಾದ್ ಆನಂದ್-ಉಳ್ಳಾಲ, ಮಂಗಳೂರು, ಡೆಸ್ಮಂಡಡ್ ಡಿಸೋಜಾ-ಮಂಗಳೂರು ಸದ್ಯ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ.
ಇನ್ನೂ ಮೂವರು ಕನ್ನಡಿಗರು ಕಾಬೂಲ್ ಏರ್ ಪೋರ್ಟ್ ನಲ್ಲಿಯೇ ಇದ್ದಾರೆ, ಆ ಮೂವರಲ್ಲಿ ಮಂಗಳೂರು ಮೂಲದ ತೆರೆಸಾ ಕ್ರೋಸ್ತಾ ಅವರು ಅಪ್ಘಾನಿಸ್ತಾನದಿಂದ ನೇರವಾಗಿ ಇಟಲಿಗೆ ಹೋಗಲಿದ್ದಾರೆ. ಅವರನ್ನು ಬಿಟ್ಟು ರಾಬರ್ಟ್ ಕ್ಲೀವ್ ಎನ್ ಆರ್ ಪುರ, ಚಿಕ್ಕಮಗಳೂರು ಮೂಲದವರು ಹಾಗೂ ಜಿರೋನಾ ಸೆಕ್ವೆರಾ ಮಂಗಳೂರು ಮೂಲದವರಾದ ಇಬ್ಬರು ತಾಯ್ನಾಡಿಗೆ ಬರಲು ಕಾಯುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

























Discussion about this post