ಕಲಬುರಗಿ: ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೊಲೆ ಮೊದಲಾದ ದುಷ್ಕೃತ್ಯಗಳು ಸಹ ರಾಜ್ಯದಲ್ಲಿ ಎಗ್ಗಿಲ್ಲದೆ ಸಾಗಿವೆ. ಸುಮಾರು 15 ವರ್ಷದ ಬಾಲಕಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಮನಕಲಕುವ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ಪಾಯಲ್ (15) ಕಟ್ಟಿಗೆ ತರಲು ಮನೆ ಹಿಂದೆ ಹೋಗಿದ್ದಳು. ಈ ವೇಳೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪಚಿರಿತರಂತೆ ಯಾರಿಗೂ ಕಾಣಿಸದ ಹಾಗೆ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ವಿಷ ಕುಡಿಸಿರುವ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಇದರ ಬೆನ್ನಲ್ಲೇ ಪಾಣೆಗಾಂವ್ ಗ್ರಾಮದ ಸುನಿಲ್, ಸ್ನೇಹಿತನ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ವಿಷ ಕುಡಿಸಿ ಹತ್ಯೆ ಮಾಡಿದ ಈ ದುಷ್ಕೃತ್ಯವನ್ನು ಹಳೆ ವೈಷಮ್ಯದಿಂದಲೇ ಮಾಡಿರುವ ಆರೋಪ ಸಹ ಕೇಳಿಬಂದಿದ್ದು, ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

























Discussion about this post