ಚಿಕ್ಕಮಗಳೂರು: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ವಿ.ಸುನೀಲ್ ಕುಮಾರ್ ಅಕ್ಟೋಬರ್ ೦೩ ರಂದು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ . ಅ.೩ ರಂದು ರಾತ್ರಿ ೮.೦೦ ಗಂಟೆಗೆ ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಅಥಿತಿ ಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ .
ಅಕ್ಟೋಬರ್ ೦೪ ರಂದು ಬೆಳಗ್ಗೆ ೮.೦೦ ಗೆ ದತ್ತಪೀಠಕ್ಕೆ ಭೇಟಿನೀಡಿ, ಬೆಳಗ್ಗೆ ೧೦.೦೦ ಗಂಟೆಗೆ ನೂತನವಾಗಿ ನಿರ್ಮಿಸಲಾಗಿರುವ ಮೆಸ್ಕಾಂ ಕಛೇರಿ ಸಂಕೀರ್ಣ ಕಟ್ಟಡದ ಉದ್ಘಾಟನ, ಮಲ್ಲೇನಹಳ್ಳಿ ಪ್ರಸ್ತಾವಿತ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಶಂಕುಸ್ಥಾಪನೆ, ಬೆಳಗ್ಗೆ ೧೧.೦೦ ಗಂಟೆಗೆ ವಿದ್ಯುತ್ ವಿತರಣಾ ಕೇಂದ್ರದ ಶಂಕುಸ್ಥಾಪನೆ ನೇರವೆರಿಸುವರು.
ಬೆಳಗ್ಗೆ ೧೨.೧೫ ಗಂಟೆಗೆ ಚಿಕ್ಕಮಗಳೂರು ಜಿಲ್ಲಾ ಪ್ರಗತಿ ಪರಿಶೀಲಾ ಸಭೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಭೆ ನಡೆಸಲಿದ್ದು, ಸಂಜೆ ೪.೦೦ ಗಂಟೆಗೆ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಕಛೇರಿಗೆ ಭೇಟಿ, ೪.೩೦ ಗಂಟೆಗೆ ಕುವೆಂಪು ಕಲಾ ಮಂದಿರದಲ್ಲಿ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಂಜೆ ೭.೩೦ ಗಂಟೆ ಚಿಕ್ಕಮಗಳೂರಿನಿಂದ ನಿರ್ಗಮಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳಾದ ವಿಜಯಕುಮಾರ್ ಎನ್. ತೋರಗಲ್ ತಿಳಿಸಿದ್ದಾರೆ.

























Discussion about this post