ಬೆಂಗಳೂರು: ಖಾಸಗಿ ಶಾಲಾ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ಗೌರವ ಧನ ಬಿಡುಗಡೆ ಮಾಡುವ ಮೂಲಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಗುಡ್ ನ್ಯೂಸ್ ನೀಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲಾ-ಕಾಲೇಜುಗಳು ಲಾಕ್ ಡೌನ್ ನಿಂದ ಬಂದ್ ಆಗಿದ್ದು, ಶಿಕ್ಷಕರು, ಸಿಬ್ಬಂದಿ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು ಶಿಕ್ಷಕರ ದಿನಾಚರಣೆ (ಸೆ.5)ಗೂ ಮುನ್ನ ಐದು ಸಾವಿರ ಪರಿಹಾರವನ್ನು ನೀಡಲು ಶಿಕ್ಷಣ ಸಚಿವರು ಆದೇಶ ನೀಡಿದ್ದಾರೆ.
ಕೊರೊನಾ ಸಂಕಷ್ಟದಿಂದ ಖಾಸಗಿ ಶಿಕ್ಷಕರು ಐದು ಸಾವಿರ ಪರಿಹಾರ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಂದಿನ ಸಿಎಂ ಬಿಎಸ್ ಯಡಿಯೂರಪ್ಪನವರು ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ತಲಾ ೫ಸಾವಿರ ರೂ. ಗೌರವಧನ ನೀಡಲು ಆದೇಶ ಸಹ ನೀಡಿದ್ದರು.
ಸದರಿ ಆದೇಶ ನೀಡಿ ನಾಲ್ಕು ತಿಂಗಳು ಕಳೆದಿದ್ದರೂ ಗೌರವಧನ ಮಾತ್ರ ಶಿಕ್ಷಕರ ಪಾಕೆಟ್ ತಲುಪಿರಲಿಲ್ಲ. ಇದೀಗ ಮತ್ತೆ ಕಾಮ್ಸ್ ಜೊತೆಗೆ ವಿವಿಧ ಸಂಘಟನೆಗಳು ಹಾಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮರಳಿ ಮನವಿ ಸಲ್ಲಿಸಿದ್ದುವು. ಮನವಿ ಪುರಸ್ಕರಿಸಿರುವ ಶಿಕ್ಷಣ ಸಚಿವರು ಕೂಡಲೇ ೧.೭೨ ಲಕ್ಷ ಖಾಸಗಿ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಪರಿಹಾರ ಧನ ಬಿಡುಗಡೆ ಮಾಡಿ ಆದೇಶ ನೀಡಿದರು.
ಶಿಕ್ಷಕರ ದಿನಾಚರಣೆಗೆ ಮುನ್ನವೇ ಕೊರೊನ ಪರಿಹಾರ ಧನ ಸಹಾಯ ನೀಡುತ್ತಿರುವ ನೂತನ ಶಿಕ್ಷಣ ಸಚಿವರ ತೀರ್ಮಾನಕ್ಕೆ ಖಾಸಗಿ ಶಿಕ್ಷಕರ ಸಂಘಟನೆಗಳು ಅಭಿನಂದನೆ ಸಲ್ಲಿಸಿದೆ. ಇನ್ನ ಐದು ದಿನಗಳಲ್ಲಿ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗುವುದು.

























Discussion about this post