ಬೆಂಗಳೂರು: ಗಣೇಶ ಚತುರ್ಥಿ ಆಚರಣೆ ಕುರಿತಂದೆ, ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದೆ. ತಾಲ್ಲೂಕು ಮಟ್ಟದಲಿ ಕೊರೊನಾ ಮಾಹಿತಿ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸೂಚನೆ ಇದೆ.
ಗಣೇಶ ಬಪ್ಪ ಮೋರ್ಯಾ ಎಂದು ಸಂಭ್ರಮಿಸಲು ಜನ ಕಾಯ್ತಾ ಇದ್ರೆ, ಸರ್ಕಾರ ಇನ್ನೂ ರೂಲ್ಸ್ ಮಾಡುವಲ್ಲಿ ನಿದಾನಗತಿಯಿಂದಿದೆ. ಕೊರೊನಾ ಉಪಟಳದಿಂದ ಹಬ್ಬಗಳನ್ನು ಸರಳವಾಗಿ ಆಚರಿಸಲು ಬ್ರೇಕ್ ಬೀಳುವ ಸಾಧ್ಯತೆಯಂತೂ ಇದ್ದೇ ಇದೆ. ಆದರೂ ಇದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಲು ಸೆಪ್ಟೆಂಬರ್ ೫ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಸರ್ಕಾರ.
ಇದಕ್ಕಾಗಿ ಡಿಸಿ, ಎಸ್ ಪಿ ಜತೆ ಸಭೆ ನಡೆಸಿದ್ದು, ಗಣೇಶೋತ್ಸವ ಆಚರಣೆ ಕುರಿತಂತೆ ಆಯೋಜಕರ ಜೊತೆಗೆ ಕೂಡಾ ಚರ್ಚೆ ನಡೆಸಬೇಕಿದೆ, ಹಿಂದಿನ ವರ್ಷ ಅದ್ಧೂರಿಯಾಗಿ ಆಚರಿಸಿದವರ ಜೊತೆಗೆ ಸಭೆ ಮಾಡುತ್ತೇವೆ. ಡಿಸಿ, ಎಸ್ ಪಿ ಚರ್ಚೆ ನಡೆಸಿ ವರದಿ ನೀಡಲಿದ್ದು, ನಂತರ ಸೆಪ್ಟೆಂಬರ್ ೫ ರಂದು ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ನಮ್ಮ ಸರ್ಕಾರ ಜನರ ಅಭಿಪ್ರಾಯಕ್ಕೆ ಆಧ್ಯತೆ ನೀಡುವುದು ಎಂದು ಆರ್. ಅಶೋಕ್ ಸುದ್ಧಿಗಾರರಿಗೆ ತಿಳಿಸಿದರು.

























Discussion about this post