ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜ್ಯಮಟ್ಟದ ಕವಿಗೋಷ್ಟಿಯೊಂದಿಗೆ ಆಚರಿಸಲಿದ್ದಾರೆ.
ಕಡ್ಡಾಯವಾಗಿ ಕೋವಿಡ್-೧೯ ನಿಯಮಗಳ ಪಾಲನೆಯೊಂದಿಗೆ ಕೆಲವೇ ಕೆಲವು ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಒದಗಿಸಲಾಗಿದೆ ಎಂದು ಗಾಂಧಿಭವನದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವೊಡೆ ಪಿ.ಕೃಷ್ಣ ನಡೆಸಿಕೊಡಲಿದ್ದು, ಇತ್ತೀಚೆಗೆ ನಿದನರಾದ ಗಾಂಧಿವಾದಿ ಡಾ. ಎಚ್.ಎಸ್.ದೊರೆಸ್ವಾಮಿ ಯವರ ಎರಡು ಪುಸ್ತಕಗಳು ಸೇರಿದಂತೆ ಮೂರು ಪುಸ್ತಕಗಳ ಬಿಡುಗಡೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯ ಅತಿಥಿಗಳಾಗಿ ಪ್ರತಾಪ್ ಲಿಂಗಯ್ಯ, ವನಮಾಲ ಸಂಪನ್ನಕುಮಾರ್, ಎ. ಹನುಮನರಸಯ್ಯ, ಜೀರಿಗೆ ಲೋಕೇಶ್ ಭಾಗವಹಿಸಲಿದ್ದಾರೆ. ಕವಿಗೋಷ್ಟಿಯಲ್ಲಿ ವಿವಿಧ ಜಿಲ್ಲೆಗಳ ಕವಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಯುವ ಸಬಲೀಕರಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಗಾಂಧಿ ಶಾಂತಿ ಪ್ರತಿಷ್ಠಾನ, ಹುಬ್ಬಳ್ಳಿಯ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘಟನೆಗಳು ಜಂಟಿಯಾಗಿ ಗಾಂಧಿಭವನದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

























Discussion about this post