ಚಿಕ್ಕಮಗಳೂರು: ಸಚಿವರು ಅಂದ್ರೆ ಸಾಮಾನ್ಯವಾಗಿ ಹಿಂದುಗಡೆ ಹಿಂಬಾಲಕರು, ಮುಂದುಗಡೆ ಮುಂಬಾಲಕರು, ಅಕ್ಕ ಪಕ್ಕದಲ್ಲಿ ಹಕ್ಕ-ಬುಕ್ಕನಂತವರು ಇದ್ದೇ ಇರ್ತಾರೆ. ಮೊದಲು ಸಚಿವರ ಹತ್ರ ಮಾತಾಡಬೇಕಂದ್ರೆ ಪಿಎ ಹತ್ರ ಹೋಗಿ ಪರ್ಮೀಷನ್ ತಗೋಬೇಕಿರತ್ತೆ. ಆದ್ರೆ ಇವರು ಹಾಗೇನೂ ಇಲ್ಲ ನೋಡಿ. ಅವರು ಬೇರೆ ಯಾರೂ ಅಲ್ಲ ನಮ್ಮ ಹೆಮ್ಮೆಯ ಶಿಕ್ಷಣ ಸಚಿವ ಟಿ.ಸಿ. ನಾಗೇಶ್.
ತೆಂಗಿನ ಸೀಮೆ ತಿಪಟೂರು ಕ್ಷೇತ್ರದ ಶಾಸಕರಾದ ಅವರಿಗೆ ರೈಲು ಓಡಾಟವೇ ಪ್ರಿಯ. ಅದೆಲ್ಲಕ್ಕಿಂತ ಮೊದಲು ಬಹಳ ಸರಳ ವ್ಯಕ್ತಿ, ಸಚಿವ ಎಂಬಂತಹ ಯಾವುದೇ ಹಮ್ಮು ಬಿಮ್ಮು ಇಲ್ಲವೇ ಇಲ್ಲದ ಸಜ್ಜನ ರಾಜಕಾರಣಿ. ಜನಸ್ನೇಹಿ ಮಾತುಕತೆಗಳಲ್ಲೇ ಅವರು ನಮಗೆ ಕಾಣಸಿಗುವುದು. ಜಿರೋ ಟ್ರಾಫಿಕ್ ಅಬ್ಬರ, ಐಷಾರಾಮಿ ಕಾರು ಏನೂ ಅವರಿಗೆ ಆಗಿ ಬರೋದಿಲ್ಲ.
ಕೈಯಲ್ಲೊಂದು ಫೈಲ್, ಸಾಧಾರಣ ಬಟ್ಟೆ ಬರೆಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ರೈಲು ಪ್ರಯಾಣ ಮಾಡುವ ಇವರು ನಮ್ಮ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅಲ್ಲದೆ ರೈಲು ಪ್ರಯಾಣವನ್ನು ಮಾಡುವ ಮೂಲಕ ಸಾರ್ವಜನಿಕರಿಗೂ ರೈಲು ಪ್ರಯಾಣಕ್ಕೆ ಆಸಕ್ತಿ ಮೂಡಿಸುವಂತೆ ಮಾಡಿದ್ದಾರೆ. ಇವರ ಸರಳತೆಯನ್ನು ನಾವುಗಳೆಲ್ಲರೂ ಸಹ ಮೈಗೂಡಿಸಿಕೊಳ್ಳಬೇಕು, ವಿಶೇಷವಾಗಿ ಯುವಜನತೆ, ಮಕ್ಕಳಿಗೆ ಇವರ ಸರಳತೆ ಬಗ್ಗೆ ತಿಳಿಸಿಕೊಡಬೇಕು.

























Discussion about this post