ರಾಂಚಿ: ಜಾರ್ಖಂಡ್ನಲ್ಲಿ ಧನಬಾದ್ ರೈಲ್ವೆ ವಲಯದ ಗರ್ವಾ ರಸ್ತೆ ಮತ್ತು ಬರ್ಕಾನಾ ಮಧ್ಯೆ ಹಳಿಯ ಬಳಿ ಶನಿವಾರ ಮುಂಜಾನೆ ಬಾಂಬ್ ಸ್ಫೋಟಗೊಂಡಿದ್ದು, ಇದರಿಂದ ಡಿಸೇಲ್ ಇಂಜಿನ್ ಹಳಿಯಿಂದ ಕೆಳಗೆ ಇಳಿದಿದೆ. ಸಾವು-ನೋವು ಸಂಭವಿಸಿಲ್ಲ. ನಕ್ಸಲರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.
ಈ ವಿಭಾಗದಲ್ಲಿ ಬಾಂಬ್ ಸ್ಫೋಟ ತೀರ ಅಪರೂಪದ ರ್ದುಘಟನೆ. ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು. ಇದರಿಂದ ಒಂದು ಇಂಜಿನ್ ಹಳಿ ತಪ್ಪಿದೆ ಮತ್ತು ಹಳಿ ಕಿತ್ತು ಬಂದಿದೆ. ಬೇರೆ ಯಾವುದೇ ನಷ್ಟವಾಗಿಲ್ಲ ಎಂದು ಧನ್ಬಾದ್ ರೈಲ್ವೆ ವಲಯ ಹೇಳಿದೆ. ಬಾಂಬ್ ಸ್ಫೋಟದ ಘಟನೆಯ ನಂತರ ಈ ಮಾರ್ಗದ ಎರಡೂ ಬದಿಯಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸ್ಥಳಕ್ಕೆ ರೈಲ್ವೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ, ಹಿರಿಯ ವಿಭಾಗೀಯ ಮೆಕಾನಿಕಲ್ ಇಂಜಿನಿಯರ್, ಹಿರಿಯ ವಿಭಾಗೀಯ ಇಂಜಿನಿಯರ್ ಸೇರಿ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದು, ಹಳಿ ಸರಿಪಡಿಸುವ ಕಾರ್ಯ ಸಾಗಿದೆ. ಮಧ್ಯಾಹ್ನದ ಹೊತ್ತಿ ಒಂದು ಬದಿಯ ಹಳಿ ಸರಿಪಡಿಸುವ ಕಾರ್ಯ ಮುಗಿದಿದ್ದು, ಇನ್ನೊಂದು ಕಡೆಯಲ್ಲಿ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ರೈಲು ಸಂಚಾರ ಮರುಆರಂಭಗೊಳ್ಳಲಿದೆ. ಈ ಮಾರ್ಗದ ಅನೇಕ ರೈಲುಗಳು ಬೇರೊಂದು ಮಾರ್ಗದಲ್ಲಿ ಸಂಚರಿಸುತ್ತಿವೆ. ಸಮೀಪದ ರೈಲು ನಿಲ್ದಾಣದಲ್ಲಿ ನಿಂತಿರುವ ರೈಲುಗಳು ಮಾತ್ರ ರಿಪೇರಿ ಕೆಲಸದ ನಂತರ ಇದೇ ಮಾರ್ಗದಲ್ಲಿ ಸಂಚಾರ ಮುಂದುವರಿಸಲಿವೆ. ಬರ್ವಾಡಿಹ್ ಪ್ಯಾಸೆಂಜರ್, ಬರ್ವಾಡಿಹ್-ನೇತಾಜಿ ಸುಭಾಷ್ ಚಂದ್ರಬೋಸ್ ಗೋಮೊ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
Bomb Blast On Rail Tracks In Jharkhand: Derails Diesel Locomotive
ಇದನ್ನು ಓದಿ: ಡೀಸಲ್ ಟ್ಯಾಂಕರ್-ಬೊಲೆರೋ ಅಪಘಾತ
ಇದನ್ನು ಓದಿ: ಮೋದಿಗೆ ಕ್ಲೀನ್ಚಿಟ್ ನೀಡಿದ ಎಸ್ಐಟಿ; ತನಿಖಾ ಲೋಪ ಪಟ್ಟಿ ಮಾಡಿದ ಜಾಕಿಯಾ ಜಾಫ್ರಿ
Discussion about this post