ಹಾಸನ: ಡೀಸೆಲ್ ಟ್ಯಾಂಕರ್ ಮತ್ತು ಬೊಲೆರೋ ವಾಹನದ ನಡುವೆ ಅಪಘಾತವಾಗಿ ನೂರಾರು ಕೋಳಿಗಳು ಸಾವನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ಹೊರವಲಯದ ರಾಷ್ಟೀಯ ಹೆದ್ದಾರಿ-೭೫ರಲ್ಲಿ ಈ ದುರ್ಘಟನೆ ನಡೆದಿದೆ.
ಡೀಸೆಲ್ ಟ್ಯಾಂಕರ್ ವಾಹನವು ಕೋಳಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ವೇಳೆ ಬೊಲೆರೋ ವಾಹನಕ್ಕೆ ಡಿಕ್ಕಿಹೊಡೆದಿದೆ. ಈ ಸಮಯ ಆದ ಅಪಘಾತದಲ್ಲಿ ವಾಹನದಲ್ಲಿದ್ದ ನೂರಾರು ಕೋಳಿಗಳು ಸಾವನಪ್ಪಿದೆ. ಡೀಸೆಲ್ ಟ್ಯಾಂಕರ್ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ರೈಲ್ವೆ ತಡೆಗೋಡೆಗೂ ಡಿಕ್ಕಿ ಹೊಡೆದಿದೆ.
ಸದರಿ ಘಟನೆಯಿಂದ ಹೆದ್ದಾರಿಯಲ್ಲಿ ಕೆಲವು ಸಮಯಗಳ ಕಾಲ ವಾಹನ ಸಂಚಾರ ಕೂಡ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

























Discussion about this post