ಬೆಂಗಳೂರು: ಮಾಡೆಲ್ ಸೋನಿಯಾ ಅಗರ್ ವಾಲ್ ಬಂಧನದ ಬಳಿಕ ಆಕೆಯ ಗೆಳೆಯ ದಿಲೀಪ್ ಸಹ ಅರೆಸ್ಟ್ ಆಗಿದ್ದಾನೆ. ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಇಂದು ಬೆಳ್ಳಂಬೆಳಿಗ್ಗೆ ನಟಿ ಸೋನಿಯಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಮನೆಗಾಳ ಮೇಲೆ ದಾಳಿ ನಡೆಸಿದ್ದರು.
ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಶೆಟ್ಟಿ, ಸೊನಿಯಾ ಮನೆ ಮೇಲೆ ಸಹ ದಾಳಿ ನಡೆದಿತ್ತು.
ವಚನ್ ಚಿನ್ನಪ್ಪ ವಾಸವಿದ್ದ ಬೆಂಗಳೂರಿನ ಬೌನ್ಸನ್ ಟೌನ್ ಮನೆಯಲ್ಲಿ ೫೦ಗ್ರಾಂ ಗಾಂಜಾ ಇದ್ದದ್ದು ಪತ್ತೆಯಾಗಿದೆ. ಕೆ.ಜಿಹಳ್ಳಿ ಠಾಣೆಯಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

























Discussion about this post