- ಶಾಸಕ ರೇಣುಕಾಚಾರ್ಯ ವಿತರಿಸಿದ್ದ ಕಳಪೆ ಫುಡ್ ಕಿಟ್
- ದಾವಣಗೆರೆ ಜಿಲ್ಲೆಯ ಹುನ್ನಾಳಿಯಲ್ಲಿ ಪ್ರಕರಣ
- ಕಳಪೆ ಫುಡ್ ಕಿಟ್ ವಿತರಣೆ ಆರೋಪ
- ಕಾರ್ಮಿಕ ಮಹಿಳೆ ಪ್ರಶ್ನೆಗೆ ತಬ್ಬಿಬ್ಬು ತಹಶೀಲ್ದಾರ್
ದಾವಣಗೆರೆ: ಕಾರ್ಮಿಕ ಮಹಿಳೆಯೊಬ್ಬರು ಕಳಪೆ ಫುಡ್ ಕಿಟ್ ಕೊಟ್ಟಿದ್ದಿರಲ್ರಿ ಅಂತ ಸಖತ್ ಕ್ಲಾಸ್ ತಗೊಂಡೇ ಬಿಟ್ಟಿದ್ರು. ಮಹಿಳೆ ಮಾತಿಗೆ ತಹಶಿಲ್ದಾರ್ ಬಸವನಗೌಡ ಕೋಟುರಾ ಷಾಕ್ ಆಗಿದ್ರು. ರವೆಯಲ್ಲಿ ಹುಳು, ನಿಮಗಾದರೂ ನೋಡಿ ಕೊಡಬಾರದು ಅನಿಸಲಿಲ್ವಾ? ಅಂತ ಆಕೆ ನೇರವಾಗಿ ಜಬರಿಸಿದ್ದಾಳೆ.
ಕಾರ್ಮಿಕ ಇಲಾಖೆಯಿಂದ ಇಂದು ಭಾನುವಾರ ಏಳು ಸಾವಿರ ಕಟ್ಟಡ ಕಾರ್ಮಿಕರಿಗೆಲ್ಲಾ ಉಚಿತ ಫುಡ್ ಕಿಟ್ ವಿತರಣೆ ಮಾಡಲಾಗಿತ್ತು. ಇಲಾಖೆ ನೀಡಿದ ಫುಡ್ ಕಿಟ್ ಪರಿಶೀಲಿಸಿದ ಮಹಿಳೆಗೆ ರೋಷ ಬಂದಿದೆ. ಶಾಸಕ ರೇಣುಕಾಚಾರ್ಯ ಹಾಗೂ ಇಲಾಖಾ ಅಧಿಕಾರಿಗಳು ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ರು.
ಕಳಪೆ ಆಹಾರ ಕೊಡೋದು ಊರತುಂಬಾ ಪ್ರಚಾರ ತಗೊಳ್ಳೋ ಪ್ರವೃತ್ತಿ ಮೇಲೆ ಕಾರ್ಮಿಕರು ಕಾರ್ಯಕ್ರಮ ಮುಗಿದ ಮೇಲೆ ಬೇಸರಗೊಂಡಿದ್ದರು. ಇದೇವೇಳೆ ಮಹಿಳೆ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಹಶಿಲ್ದಾರರ ಬಳಿ ಹೋಗಿ ತರಾಟೆಗೆ ತೆಗೆದುಕೊಂಡಿದ್ದರು.

























Discussion about this post