ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಶೋಭಾ ಕರಂದ್ಲಾಜೆ ಅವರು ಹೈದ್ರಾಬಾದ್ ಗೆ ಪ್ರಯಾಣಿಸುವಾಗ ಈ ಘಟನೆ ನಡೆದಿದ್ದು, ತಾಂತ್ರಿಕ ದೋಷ ಪತ್ತೆ ಹಚ್ಚಿದ ಕಾರಣ ವಿಮಾನ ಪ್ರಯಾಣ ರದ್ದುಗೊಳಿಸಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಯಾಣಿಸಬೇಕಿದ್ದ ವಿಮಾನ ಟೆಕ್ ಆಫ್ ಗೂ ಮುನ್ನ ತಾಂತ್ರಿಕ ದೋಷವನ್ನು ವಿಮಾನ ಸಿಬ್ಬಂದಿ ಪತ್ತೆ ಹಚ್ಚಿದ್ದು, ಭಾರಿ ದುರಂತದಿಂದ ಕೇಂದ್ರ ಸಚಿವೆ ಪಾರಾದ ಘಟನೆ ನಡೆದಿದೆ.
ಆದರೆ ವಿಮಾನ ಪ್ರಯಾಣ ಅತಿ ಜರೂರು ಎಂದು ಪಟ್ಟು ಹಿಡಿದ ಕೇಂದ್ರ ಸಚಿವೆಯ ಇಚ್ಛೆಯಂತೆ ಮತ್ತೊಂದು ವಿಮಾನದ ಮೂಲಕ ಅವರನ್ನು ಉಳಿದ ಪ್ರಯಾಣಿಕರೊಡನೆ ಹೈದ್ರಾಬಾದ್ ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

























Discussion about this post