ಮೈಸೂರು: ಹೋದ ಸಾರಿ ಐವತ್ತು ಜನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ, ಉದ್ಘಾಟನೆಗೆ ೧೫೦ ಜನ, ಜಂಬೂ ಸವಾರಿಗೆ ೩೦೦ ಜನ ಎಂದು ತೀರ್ಮಾನಿಸಲಾಗಿತ್ತು ಹೀಗಾಗಿ ವರ್ಚುಯಲ್ ಮಾಡಣ ಎಂದು ತೀರ್ಮಾನಿಸಲಾಗಿದೆ ಎಂದು ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರತಿಯೊಂದು ಕಾರ್ಯಕ್ರಮವನ್ನು ನೋಡಿ ಪಬ್ಲಿಕ್ ಜನರಿಗೆ ಆನಂದ ಪಡುವ ಅವಕಾಶ ೧೦೦% ಮಾಡುತ್ತೇವೆ ಎಂದು ಅವರು ತಿಳಿಸಿದರು. ಕೋವಿಡ್ ಅಲೆ ಸೆಪ್ಟೆಂಬರ್, ಅಕ್ಟೋಬರ್ ಬರುವುದು ಇದೆ. ಸೆಫ್ಟೆಂಬರ್ ೨೫ ರಿಂದ ಕಮ್ಮಿ ಸೋಂಕು ಇದ್ದರೆ, ಹೆಚ್ಚು ಜನರಿಗೆ ಅವಕಾಶ ನೀಡಲು ಮತ್ತೊಮ್ಮೆ ತೀರ್ಮಾನ ಮಾಡಲಾಗುವುದು. ದಸರೆ ನೆಪದಲ್ಲಿ ಕೋವಿಡ್ ಹೆಚ್ಚಾಗಬಾರದು ಎಂದು ಮಾನದಂಡ ಫಿಕ್ಸ್ ಮಾಡಲಾಗಿದೆ.
ದಸರೆ ಆನೆಗಳ ರೂಟಿನ್- ಎಂಟು ಆನೆಗಳನ್ನು ತರಲು ತೀರ್ಮಾನ ಮಾಡಲಾಗಿದೆ. ೧೩ನೇ ತಾರೀಖು ಆನೆಗಳು ಬೆಳಿಗ್ಗೆ ಹೊರಡುತ್ತದೆ. ೧೬ಕ್ಕೆ ಬೆಳಿಗ್ಗೆ ೮-೩೦ ರಿಂದ ೧೧ ಗಂಟೆವರೆಗೆ ಆನೆಗಳನ್ನು ಮೈಸೂರಿನಲ್ಲಿ ಕರೆತಂದು ರಿಸೀವ್ ಮಾಡಲಾಗುವುದು.
೮ ಕೋಟಿ ಸಹ ಬಿಡುಗಡೆ ಮಾಡತಕ್ಕದ್ದು. ೨೩ ಲಕ್ಷ ಅರಿಯರ್ಸ್ ಇದೆ ಎಂದು ಹೇಳಿದ್ದಾರೆ. ೫೦ ಲಕ್ಷ ಆನೆಗಳ ಖರ್ಚಿಗೆ ಕೇಳಿದ್ದು, ಅದನ್ನು ನೀಡುವಂತೆ ತೀರ್ಮಾನವಾಗಿದೆ. ೧೭ ದಸರೆ ಮುಗಿದ ಮೇಲೆ ವಾಪಾಸ್ಸು ಕಳಿಸುವುದು ಸೆಂಡ್ ಅಫ್ ಮಾಡಿ ಎಂದು ಅವರು ತಿಳಿಸಿದರು.
ಅಕ್ಟೋಬರ್ ೭ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ದಸರೆ ಉದ್ಘಾಟನೆ ಎಂದು ತೀರ್ಮಾನವಾಗಿದ್ದು, ಯಾರು ಉದ್ಘಾಟನೆ ಮಾಡಬೇಕೆಂಬುದನ್ನು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.

























Discussion about this post