ಕನ್ನಡನಾಡಿ ಸುದ್ದಿ ಜಾಲ: ಆಸ್ಟ್ರೇಲಿಯಾ ದೇಶದ ಬಳಿ ದ್ವೀಪ ಪ್ರದೇಶದಲ್ಲಿ ಆಶ್ರಮ ಮಾಡಿಕೊಂಡು ದೇಶ ಬಿಟ್ಟು ಹೋಗಿದ್ದ ವಿವಾದಿತ ದೇವಮಾನವ ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ತಾನೇ ಮಧುರೈ ಅಧೀನಂನ ೨೯೩ನೇ ಪೀಠಾಧಿಪತಿಯಾಗಿರುವೆ ಎಂಬ ಷಾಕಿಂಗ್ ಸುದ್ದಿ ನೀಡಿದ್ದಾನೆ.
ತನಗೇ ಉತ್ತರಾಧಿಕಾರದ ಔಪಚಾರಿಕ ಕಾರ್ಯಕ್ರಮ ಮುಗಿದಿದೆ ಎಂದಿದ್ದಾನೆ. ಮಧುರೈ ಅಧೀನಂ ೨೯೨ನೇ ಪೀಠಾಧಿಪತಿ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮೀಜಿಯವರು ದೈಹಿಕ ಅನರೋಗ್ಯದಿಂದ ತೀರಿಕೊಂಡ ಹಿನ್ನೆಲೆಯಲ್ಲಿ, ಇವರ ನಂತರದ ಉತ್ತರಾಧಿಕಾರಿಯಾಗಿ ಹರಿಹರ ದೇಶಿಕ ಜ್ಞಾನ ಸಂಬಂತ ಪರಮಾಚಾರ್ಯ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಸದ್ಯದಲ್ಲೇ ಪಟ್ಟಾಭಿಷೇಕ ನಡೆಯಲಿದೆ ಎಂದು ಅಧೀನಂ ಮೂಲಗಳು ತಿಳಿಸಿದ್ದವು.
ತಾನೇ ಪೀಠಾಧಿಪತಿ ಎಂದು ಹೇಳಿ, ತನಗೇ ಪಟ್ಟಾಭಿಷೇಕ ಆಗಿದೆ ಎನ್ನುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕುತ್ತಿದ್ದಾನೆ.

























Discussion about this post