ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ-ಕೆಂಗೇರಿ ನಡುವಿನ ನೂತನ ಮೆಟ್ರೋದ ೨ನೇ ಹಂತದ ಮಾರ್ಗಕ್ಕೆ ಸಿಎಂ ಬೊಮ್ಮಾಯಿಯವರು ಚಾಲನೆ ನೀಡಿದರು.
ನಾಳೆ (ಆ.30)ರ ಬೆಳಿಗ್ಗೆಯಿಮ್ದಲೇ ರೈಲು ಸಂಚಾರಕ್ಕೆ ಮುಕ್ತವಾಗಲಿದೆ. ಜನನಿಬಿಡ ಸಮಯದಲ್ಲಿ ೭-೮ ನಿಮಿಶಕ್ಕೆ ಒಮ್ಮೆ ರೈಲು ಓಡಾಡುವುದು, ಉಳಿದಂತೆ ೧೦-೧೨ ನಿಮಿಷಕ್ಕೊಮ್ಮೆ ಸಂಚಾರ ನಡೆಸುವುದು.
೭.೫ ಕಿ.ಮೀ ಮೆಟ್ರೋ ನೇರಳೆ ಮಾರ್ಗ ಇದಾಗಿದ್ದು, ಮೈಸೂರು ರಸ್ತೆ ಮೆಟ್ರೋದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಇದೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೇಪ್ ಸಿಂಗ್ ಪುರಿ ವಿದ್ಯುಕ್ತ ಚಾಲನೆ ನೀಡುವ ಮೂಲಕ ಉದ್ಘಾಟನೆ ನಡೆಸಿದ್ದಾರೆ.
೨೦೧೯ರಲ್ಲಿ ನಡೆಯಬೇಕಾಗಿದ್ದ ಈ ಮೆಟ್ರೋ, ವಿಳಂಬವಾದ ಹಿನ್ನೇಲೆ ೨ ವರ್ಷ ತಡವಾಗಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ. ಮೇಟ್ರೋ ಮಾರ್ಗದಲ್ಲಿ ನಿತ್ಯ ೭೫ ಸಾವಿರ ಪ್ರಯಾಣಿಕರು ಪ್ರಯಾಣಿಸುವ ಸಂಭಾವ್ಯ ಹೆಚ್ಚಿದೆ. ನೇರಳೆ ಮಾರ್ಗವಾಗಿದ್ದು, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್ ನಿಲ್ದಾಣ ಸೇರಿ ಒಟ್ಟು ಆರು ನಿಲ್ದಾಣ ಹೊಂದಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆರ್. ಅಶೋಕ್, ವಿ. ಮುನಿರತ್ನ, ವಿ ಸೋಮಣ್ಣ, ಸಂಸದ ತೇಜಸ್ವಿನಿ ಸೂರ್ಯ ಸೇರಿದಂತೆ ನಮ್ಮ ಮೆಟ್ರೋ ಅಧಿಕಾರಿಗಳು ಭಾಗವಹಿಸಿದ್ದರು.

























Discussion about this post