ಕನ್ನಡನಾಡಿ ಸುದ್ದಿಜಾಲ: ಬೆಂಗಳೂರು: ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಹಲವು ಮಕ್ಕಳು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪ್ರಶ್ನೆ ಕೇಳಿದ್ದು, ಮಕ್ಕಳ ಪ್ರಶ್ನೆಗಳಿಗೆ ಸಿಎಂ ಬಹಳ ಪ್ರೀತಿಯಿಂದ ಉತ್ತರಿಸಿದ್ದಾರೆ.
ಓರ್ವ ಪುಟ್ಟ ಪೋರ “ಸಿಎಂ ಹಾಗೆ ಇರ್ತಾರೆ, ಹೀಗೆ ಇರ್ತಾರೆ ಅಂದುಕೊಂಡಿದ್ದೆ, ನೀವು ಏನ್ ಸರ್ ಇಷ್ಟು ಸಿಂಪಲ್ಲಾಗಿ ಇದೀರಾ?” ಎಂದಾಗ ಸಿಎಂ “ಅದು ಸಿನೆಮಾ ಕಣೋ, ಅಂದರೆ ಜನ ಸಿನೆಮಾಕ್ಕೆ ಬರೋದು, ಇಲ್ಲಿ ಜನ ಕೇಳಲ್ಲ, ಅದಕ್ಕೆ ನಾವಿಲ್ಲಿ ಸಿಂಪಲ್ ಇರಲೇಬೇಕು” ಎಂದರು.
ನಿಮ್ಮ ಫೇವರೇಟ್ ಹಿರೋಇನ್ ಯಾರು ಎಂಬ ಮತ್ತೊಂದು ಮಗುವಿನ ಪ್ರಶ್ನೆಗೆ ಟಫ್ ಕ್ವಶ್ಚನ್, ಯಾಕಂದ್ರೆ ಬಾಳ ಜನ ಇದ್ದಾರೆ, ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಹಿಂದಿಯಲ್ಲಿ ಮಧುಬಾಲಾ, ಕನ್ನಡದಲ್ಲಿ ಜಯಂತಿ, ಕಲ್ಪನಾ, ಭಾರತಿ ಮತ್ತು ಆಲ್ ಟೈಮ್ ಹಿರೋ ರಾಜ್ ಕುಮಾರ್ ಎಂದರು. ಮತ್ತೊಂದು ಪ್ರಶ್ನೆಗೆ ‘ತಂದೆಯಿಂದ ಕಲಿತ ಪಾಠ ಕೋಪದ ಕೈಗೆ ಬುದ್ದಿ ಕೊಡಬೇಡ, ಪುಸ್ತಕ ಓದು’ ಎಂದಿದ್ದರು ಎಂದು ನೆನಪಿಸಿಕೊಂಡರು.
ಅವ್ವ ಮಾಡುವ ಬಿಸಿ ಬಿಸಿ ಜೋಳದ ರೊಟ್ಟಿ ನೆನೆಸಿಕೊಂಡರು ಸಿಎಂ. ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಯಾವಾಗಲೂ ಗುನುಗುವ ಹಾಡು’ ಎಂದು ಹೇಳಿದರು ಜೊತೆಗೆ, ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಎಂದು ಮೈಕ್ ನಲ್ಲಿ ಎಂದು ಹಾಡಿ ಪ್ರೇಕ್ಷಕರ ಮನ ಸೂರೆಗೊಂಡರು. ”I am a CM, ಸಿಎಂ ಅಂದರೆ ಕಾಮನ್ ಮ್ಯಾನ್” ಎಂದು ಹೇಳಿ ಪ್ರೇಕ್ಷಕರ ಮನ ಸೂರೆಗೊಂಡರು.

























Discussion about this post