ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು, ಕಲಾವಿದ ಜಿಮ್ ರವಿಯವರು ನಾಯಕ ನಟರಾಗಿ ನಟಿಸಿ, ನಿರ್ಮಿಸಿರುವ ಮಹತ್ವಾಕಾಂಕ್ಷೆಯ ಚಲನಚಿತ್ರ “ಪುರುಷೋತ್ತಮ” ಚಿತ್ರದ ಆಡಿಯೋ ಲಾಂಚ್ ಇಂದು ಬೆಂಗಳೂರಿನಲ್ಲಿ ನಡೆಯಿತು. ನಾಯಕನಟ ಶರಣ್ ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.
ಇತ್ತೀಚೆಗೆ ಡಬ್ಬಿಂಗ್ ಮುಗಿಸಿದ್ದು, ಮೈಸೂರು, ಕೊಡಗು ಸುತ್ತಾ ಮುತ್ತಾ ಚಿತ್ರೀಕರಣ ನಡೆದಿದೆ. ವರ್ತಮಾನದ ಪರಿಸ್ಥಿತಿಯಲ್ಲಿ ಮುದ್ದಾದ ಸಾಂಸಾರಿಕ ಕಥೆಯೊಂದನ್ನು ನೀಡುವ ಉದ್ದೇಶ ಜಿಮ್ ರವಿಯವರದ್ದು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ.
ಈಗಾಗಲೇ ವಿಭಿನ್ನ ಪಾತ್ರವರ್ಗದಲ್ಲಿ ಮಿಂಚಿರುವ ಜಿಮ್ ರವಿಯವರು ನಾಯಕ ನಟನಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಸ್ ವಿ ಅಮರ್ ನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಾಲ್ಕು ಹಾಡುಗಳ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಯಕ ನಟಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಎ.ವಿ ಹರೀಶ್, ಪ್ರಭು ಆಲ್ದೂರು, ಚಿಲಕ್ಕಬಸವಯ್ಯಾ ಮೊದಲಾದ ಖ್ಯಾತ ನಟರು ನಟಿಸಿದ್ದಾರೆ.
ಆನಂದ್ ಪ್ರಿಯಾ, ಪ್ರಮೋದ್ ಮರವಂತೆ, ನಿರ್ದೇಶಕರು ಸಾಹಿತ್ಯ ರಚನೆ ಮಾಡಿದ್ದು, ಎಂ ಶ್ರೀಧರ್ ಸಂಭ್ರಮ್ ಕುಮಾರ್ ಛಾಯಾಗ್ರಹಣ ಇದೆ. ಅರ್ಜುನ್ ಕಿಟ್ಟು,ನೃತ್ಯ ಕಲೆ ಇದೆ.
Discussion about this post