ಬೆಂಗಳೂರು: ನಗರದ ಗಾಂಧಿಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೋವಿಡ್ ಕಟ್ಟುನಿಟ್ಟಿನ ನಿಯಮದಂತೆ ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ವರ್ತಮಾನದಲ್ಲಿ ರಾಜಕೀಯ ನಡೆಗಳ ಕುರಿತು ತಮ್ಮ ಅಂತರ್ಯದ ಮಾತುಗಳನ್ನಾಡಿದರು.
೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಹೇಳುತ್ತಿರುವ ಇಂದು ಪ್ರತಿಯೊಬ್ಬ ಭಾರತೀಯ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪುಂಡ ರಾಜಕಾರಣಿಗಳ ಹೇಳಿಕೆಗಳು ರಾಷ್ಟ್ರದ ನಡೆ ಹೇಗೆ ನಡೆಸುತ್ತಿದ್ದಾರೆ ಎಂಬುದರ ಸೂಚ್ಯ ಎಂದು ಸುಡುಮಾತು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದರು. ಕಲೇಸಂ ಅಧ್ಯಕ್ಷೆ ವನಮಾಲ ಸಂಪನ್ನ ಕುಮಾರ್, ಜೀರಿಗೆ ಲೋಕೇಶ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ವೇಳೆ ಕವಿಗೋಷ್ಟಿಯನ್ನು ಉದ್ದೇಶಿಸಿ ರುದ್ರಪ್ಪ ಅನಗವಾಡಿ ಅಶಯ ಭಾಷಣ ಮಾಡಿದರು, ಅಧ್ಯಕ್ಷತೆಯನ್ನು ಡಾ. ಬೈಲಮಂಗಲ ರಾಮೇಗೌಡ ವಹಿಸಿದ್ದರು. ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಗೀತಗಾಯನ ಏರ್ಪಾಡಾಗಿತ್ತು.
ಎನ್. ಆರ್. ಮಠದ್ ಸ್ವಾತಂತ್ರ್ಯ ಹೋರಾಟಗಾರರು, ಲಕ್ಷ್ಮೀಬಾಯಿ ಬಿ.ಎಸ್. ಸಮಾಜ ಸೇವೆ, ಡಾ. ಸಿ. ಶ್ವೇತ ವಿಜಯಕುಮಾರ್ ವೈದ್ಯ ವೃತ್ತಿ, ವಿ. ಪ್ರವೀಣ್ ಚಲನಚಿತ್ರ, ಆರ್ ಶ್ರೀನಿವಾಸ್, ಪೋಲೀಸ್ ಸಶಸ್ತ್ರ ಮೀಸಲು ಪಡೆ, ಮೊದಲಾದ ಐದು ಸಾಧಕರಿಗೆ ಸೇವಾ ಪುರಸ್ಕಾರ ನೀಡಲಾಯಿತು.
ಡಾ. ಎಚ್. ಎಸ್. ದೊರೆಸ್ವಾಮಿಯವರ ಅಂದಿಗೂ ಇಂದಿಗೂ ಪ್ರಸ್ತುತ ಗಾಂಧೀಜಿ ಮತ್ತು ಕರ್ನಾಟಕದಲ್ಲಿ ಸ್ವತಂತ್ರ ಚಳುವಳಿ ಪುಸ್ತಕಗಳು, ಡಾ. ವೊಡೆ.ಪಿ.ಕೃಷ್ಣ ಅವರ ಆಧ್ಯಾತ್ಮಿಕತೆ ಪುಸ್ತಕಗಳು ಬಿಡುಗಡೆಯಾದವು.
ಕವಿಗಳಾಗಿ ಕೆ.ಎಂ ರೇವಣ್ಣ, ಗುಣಸಾಗರಿ ನಾಗರಾಜ್, ಜರಗನಹಳ್ಳಿ ಸದಾಶಿವಯ್ಯ, ಪ್ರಿ. ಬಿ. ಆರ್ ಪೋಲೀಸ್ ಪಾಟೀಲ್, ನಳಿನ ಡಿ, ಡಾ. ಸತ್ಯಮಂಗಲ ಮಹದೇವ, ಜಯಶ್ರೀ ರಾಜು, ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಕೃಷ್ಣಾ ಹಾನಬಾಳ್, ಯೋಗೇಶ್ ದ್ಯಾವಪಟ್ಣ, ವಿನೋದ ನಾಗೇಂದ್ರ ಭಾಗವಹಿಸಿದ್ದರು.
ಕವಿ ಗೋಷ್ಟಿಯಲ್ಲಿ ಸ್ವಾತಂತ್ರ್ಯ ಭಾರತ ಕುರಿತ ಅಶಯಗಳನ್ನು ಬಿಂಬಿಸುವ ಕವಿತೆಗಳನ್ನು ಪ್ರಸ್ತುತ ಪಡಿಸಲಾಯಿತು. ಎನ್ಎಸ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಪೂರ್ಣಿಮ ಜೋಗಿ ವಂದನಾರ್ಪಣೆ ಸಲ್ಲಿಸಿದರು.

























Discussion about this post