ಮೈಸೂರು: ಪುಟ್ಟ ಹೆಣ್ಣುಮಗಳು ಐದು ರೂ. ನಾಣ್ಯವನ್ನು ನುಂಗಿದ್ದು ಅಸುನೀಗಿದ ದುರ್ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆರಹಳ್ಳಿ ಗ್ರಾಮದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ
ಆರಹಳ್ಳಿ ಗ್ರಾಮದ ನಂದೀಶ್ ಅವರ ಪುತ್ರಿಯೇ ಮೃತಪಟ್ಟ ಹೆಣ್ಣುಕೂಸು. ಆಟವಾಡುವ ವೇಳೆ ನಾಣ್ಯ ನುಂಗಿದ್ದ ಮಗುವನ್ನು ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ವಿದೇಶಗಳಲ್ಲಿ ಕಾಯಿನ್ ನುಂಗಿದ ಮಗುವಿಗೆ ನೀಡುವ ಚಿಕಿತ್ಸೆಗೂ ನಮ್ಮಲ್ಲಿ ನೀಡುವ ಚಿಕಿತ್ಸೆಗೂ ವ್ಯತ್ಯಾಸವಿದೆ, ಇನ್ನಷ್ಟು ಸುಲಭ ಹಾಗೂ ಮಗುವಿಗೆ ಹಾನಿಯಾಗದ ರೀತಿ ನುಂಗಿದ ಕಾಯಿನ್ ತೆಗೆಯುವ ಬಗ್ಗೆ ಸಂಶೋದನೆಗಳಾಗಬೇಕು ಎಂದು ಸಾರ್ವಜನಿಕರೊಬ್ಬರು ಘಟನೆಯ ಕುರಿತು ಕನ್ನಡನಾಡಿಗೆ ಪ್ರತಿಕ್ರಿಯಿಸಿದ್ದಾರೆ.

























Discussion about this post