ಬೆಂಗಳೂರು: ಜನರ ಕಲ್ಯಾಣಕ್ಕಾಗಿ ನಾವು ಬಜೆಟ್ ನಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುಷ್ಠಾನ ಮಾಡಬೇಕು. ಯಾವ ಕಾರಣಕ್ಕೆ ವಿಳಂಬ ಮಾಡಿದ್ದೀರಿ ?ಎಂದು ವಿಕಾಸಸೌಧದಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳು ಆಯಾ ಆರ್ಥಿಕ ವರ್ಷದೊಳಗೆ ಸಂಪೂರ್ಣ ಅನುಷ್ಠಾನವಾಗಬೇಕು, ಯಾವುದಾದರೆ ಇಲಾಖೆಯಲ್ಲಿ ೧೦೦%ದಷ್ಟು ಜಾರಿಗೆ ಮಾಡಿದ್ದೀರಾ? ಶೇ.೨೦-೩೦ರಷ್ಟು ಕಾರ್ಯಕ್ರಮಗಳು ಅನುಷ್ಠಾನವಾಗುವುದೇ ಇಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯನ್ನು ಇದು ಎತ್ತಿತೋರುತ್ತದೆ. ಇಂಥಾ ಉದಾಸೀನ ಸಲ್ಲದು ಎಂದು ಅಧಿಕಾರಿಗಳ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ.
ನಾನು ಸಾಫ್ಟ್ ಎಂದು ಭಾವಿಸಬೇಡಿ, ಎಲ್ಲದಕ್ಕೂ ಶಿಸ್ತುಕ್ರಮ ಜರುಗಿಸುವುದೇ ಪರಿಹಾರವಲ್ಲ, ಇದಕ್ಕೆಲ್ಲಾ ನಾನು ಅವಕಾಶ ನೀಡುವುದಿಲ್ಲ. ಉದಾಸೀನ ತೋರುವವರ ಮೇಲೆ ಶಿಸ್ತು ಕ್ರಮ ಜರುಗಿಸುವೆನು ಎಂಬ ಎಚ್ಚರಿಕೆ ನೀಡಿದರು. ನಾನು ಮೌನವಾಗಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯ ಅಲ್ಲ, ನನಗೆ ಮೊದಲು ಕೆಲಸ ಆಗಬೇಕು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡದಿದ್ದರೆ ಸಹಿಸೆನು, ಇನ್ನು ಮುಂದೆ ನಾನು KDP ಸಭೆ ನಡೆಸುವೆ ಎಂದು ಸಿಎಂ ಕೆಡಿಪಿ ಅಧಿಕಾರಿಗಳಿಗೆ ಬೆಂಡೆತ್ತಿದ್ದಾರೆ.

























Discussion about this post